ಕರಾವಳಿ

ಉಜಿರೆ : 21ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಕೆ. ಚಿನ್ನಪ್ಪಗೌಡ ಆಯ್ಕೆ

Pinterest LinkedIn Tumblr

ಕನ್ನಡ – ತುಳು ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಸಾಧಕ ಡಾ. ಕೆ. ಚಿನ್ನಪ್ಪಗೌಡ

ಮಂಗಳೂರು : ಜನವರಿ, 27, 28, 29- 2017ರಂದು ಉಜಿರೆಯಲ್ಲಿ ಜರಗಲಿರುವ 21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ‌ ಜನಪದ ಸಾಹಿತ್ಯ ಹಾಗೂ ಸಾಂಸ್ಕೃತಿಕ‌ ಅಧ್ಯಯನ ಸಹಿತ ವಿಶೇಷವಾಗಿ, ಹಳೆಗನ್ನಡ ಮತ್ತು‌ ಆಧುನಿಕ ಕನ್ನಡ, ತುಳು ಭಾಷಾ ‌ಅಧ್ಯಯನ ನಡೆಸಿರುವ ಡಾ. ಕೆ. ಚಿನ್ನಪ್ಪಗೌಡ ಆಯ್ಕೆಯಾಗಿದ್ದಾರೆ.

ಭೂತಾರಾಧನೆ- ಕೆಲವು ಅಧ್ಯಯನಗಳು, ಜಾಲಾಟ, ಭೂತಾರಾಧನೆ-ಜನಪದೀಯ‌ಅಧ್ಯಯನ, ಸಂಸ್ಕೃತಿಸಿರಿ ಇತ್ಯಾದಿ ಸಾಹಿತ್ಯಿಕ ಕೆಲಸಗಳನ್ನೂ ಮಾಡಿರುವ‌ಇವರು ಅನೇಕ ಪುಸ್ತಕಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಹಾಗೂ ಬೇಸಿಗೆ ಕಾಲದ ಶಾಲಾ ಶಿಬಿರಗಳಲ್ಲಿ ಪಾಲ್ಗೊಂಡುತಮ್ಮ ಅನುಭವಗಳನ್ನು ವಿಸ್ತರಿಸಿದ್ದಾರೆ. ಟರ್ಕಿ, ಫಿನ್ಲೇಂಡ್, ಜರ್ಮನಿ, ಜಪಾನ್‌ಇತ್ಯಾದಿ ದೇಶಗಳ ವಿಶ್ವವಿದ್ಯಾಲಯಗಳಿಗೆ ಭೇಟಿಯಿತ್ತು ಸಂಶೋಧನೆ ಅಧ್ಯಯನಗಳನ್ನು ನಡೆಸಿರುವರು.

ಬಂಟ್ವಾಳ ತಾಲೂಕಿನ ವಿಟ್ಲಕಸಬಗ್ರಾಮದಕೂಡೂರಿನಕೃಷಿ ಕುಟುಂಬದಲ್ಲಿ ಜನಿಸಿ ತನ್ನ ಸ್ವಂತ ಪ್ರತಿಭೆಯೊಂದಿಗೆ ವಿದ್ಯಾಕ್ಷೇತ್ರ, ವಿದ್ವತ್‌ಕ್ಷೇತ್ರ, ಜಾನಪದ,ಯಕ್ಷಗಾನ ಹಾಗೂ ಸಾಹಿತ್ಯದ‌ಎಲ್ಲಾ ನೆಲೆಗಳಲ್ಲಿ ಸಾಧನೆಗಳನ್ನು ಗೈದಡಾ. ಚಿನ್ನಪ್ಪಗೌಡರು ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಮಾರ್ಗದರ್ಶನ ನೀಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳನ, ಮೂಡಬಿದ್ರೆಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಯಕ್ಷಗಾನ ಸಾಹಿತ್ಯ ಸಮ್ಮೇಳನಗಳು, ಆಳ್ವಾಸ್ ನುಡಿಸಿರಿ, ಮಂಗಳೂರು ವಿಶ್ವವಿದ್ಯಾನಿಲಯದ ಮತ್ತುಕರ್ನಾಟಕ ಸರಕಾರ, ಜಿಲ್ಲಾಡಳಿತದ ಅನೇಕ ಸಾಹಿತ್ಯ ಸಾಂಸ್ಕೃತಿಕ ಭೂಮಿಕೆಗಳು ಹೀಗೆ ಹತ್ತುಹಲವು ರಾಜ್ಯಮಟ್ಟದ ಮತ್ತುರಾಷ್ಟ್ರೀಯ ಕಾರ್ಯಕ್ರಮಗಳಿಗೆ ಮಾರ್ಗದರ್ಶಕರಾಗಿ‌ಅವರು ಸಲ್ಲಿಸಿದ ಸೇವೆ ಅಪಾರವಾದುದು.

ಇವರ ಸಾಧನೆಗೆ ಅನೇಕ ಪ್ರಶಸ್ತಿಗಳೂ ಲಭಿಸಿವೆ. ಕರ್ನಾಟಕಜನಪದ ಮತ್ತುಯಕ್ಷಗಾನ‌ಅಕಾಡೆಮಿ ಪ್ರಶಸ್ತಿ, ವಾಸುದೇವ ಭೂಪಾಲಮ್‌ಎಂಡೊಮೆಂಟ್ ಪ್ರಶಸ್ತಿ ಡಾ. ಶಿವರಾಮ ಕಾರಂತ‌ಎಂಡೋಮೆಂಟ್ ಪ್ರಶಸ್ತಿ, ಕು.ಶಿ. ಜಾನಪದ ಪ್ರಶಸ್ತಿ, ಕರ್ನಾಟಕರಾಜ್ಯ ಸಾಹಿತ್ಯ‌ಅಕಾಡೆಮಿ ಪ್ರಶಸ್ತಿ, ಸಂದೇಶ ಪುರಸ್ಕಾರ, ಕರ್ನಾಟಕರಾಜ್ಯ ತುಳು ಸಾಹಿತ್ಯ‌ಅಕಾಡೆಮಿ ಪ್ರಶಸ್ತಿ ಇತ್ಯಾದಿ ಪ್ರಮುಖವಾದವುಗಳಾಗಿವೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿರಿಜಿಸ್ಟ್ರಾರ್ ಆಗಿ ಸೇವೆಗೈದಿದ್ದ‌ಇವರು ವಿದ್ಯಾರ್ಥಿಕ್ಷೇಮನಿಧಿ ಹಾಗೂ ಯಕ್ಷಗಾನ‌ಅಧ್ಯಯನಕೇಂದ್ರದ ನಿರ್ದೇಶಕರಾಗಿ, ಕರ್ನಾಟಕರಾಜ್ಯ ತುಳು ಸಾಹಿತ್ಯ‌ಅಕಾಡೆಮಿ ಹಾಗೂ ಕರ್ನಾಟಕಜನಪದ ಮತ್ತುಯಕ್ಷಗಾನ‌ಅಕಾಡೆಮಿಯ ಸದಸ್ಯರಾಗಿಯೂ ಸೇವೆಸಲ್ಲಿಸಿರುವರು.

ಪ್ರಸ್ತುತಕರ್ನಾಟಕಜಾನಪದ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವನಮ್ಮೀಜಿಲ್ಲೆಯ ಸಾರಸ್ವತ ಲೋಕದ‌ಓರ್ವ ಹಿರಿಯ ಸಾಧಕ ಶ್ರೇಷ್ಠ ಎನ್ನುವುದು ನಮ್ಮೆಲ್ಲರ‌ಅಭಿಮಾನದ ಸಂಗತಿ.

ಜನವರಿ 27, 28, 29ರಂದು 3 ದಿನಗಳ ಕಾಲ ಬೆಳ್ತಂಗಡಿ ತಾಲೂಕಿನ‌ಉಜಿರೆಯಜನಾರ್ದನದೇವಸ್ಥಾನದ‌ಆವರಣದಲ್ಲಿ ಸಮ್ಮೇಳನದ ತಯಾರಿಪೂಜ್ಯ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ‌ ಉಜಿರೆ ಜನಾರ್ದನ ದೇವಳದ ಧರ್ಮದರ್ಶಿಗಳಾದ ಶ್ರೀ ವಿಜಯರಾಘವ ಪಡುವೆಟ್ನಾಯ‌ ಅವರ‌ ಅಧ್ಯಕ್ಷತೆಯಲ್ಲಿ ಪ್ರೊ. ಪ್ರಭಾಕರ, ಶ್ರೀ ಡಿ. ಹರ್ಷೇಂದ್ರಕುಮಾರ್, ತಾಲೂಕು ಸಾಹಿತ್ಯ ಪರಿಷತ್ತು‌ ಅಧ್ಯಕ್ಷ ಡಾ. ಯಶೋವರ್ಮ‌ ಇನ್ನೂ ಹಲವಾರು ಗಣ್ಯರನ್ನೊಳಗೊಂಡ ಸ್ವಾಗತ ಸಮಿತಿಯ‌ ಉಸ್ತುವಾರಿಯಲ್ಲಿ ಕೆಲಸಕಾರ್ಯಗಳು ಈಗಾಗಲೇ ಭರದಿಂದ ಸಾಗುತ್ತಿದೆ‌ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು‌ ಅಧ್ಯಕ್ಷ‌ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.