ಕರಾವಳಿ

ಕೇರಳದ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್ : ಸುಳ್ಯ ಕಾಲೇಜಿನ 10 ವಿದ್ಯಾರ್ಥಿಗಳ ಬಂಧನ

Pinterest LinkedIn Tumblr

 

ಸುಳ್ಯ , ಜನವರಿ.4 : ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ 10 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಕೃಷ್ಣಕುಮಾರ್, ನೀರಜ್, ಅಮಲ್, ಕಣ್ಣನ್ , ಫರ್ಹಾನ್ ಮುಹಮ್ಮದ್, ಸಂಜಯ್ ಕೃಷ್ಣನ್ , ಏಬಲ್, ಜತಿನ್ ಬೋಷ್, ವಾಸಿಂ, ನಿಬಿನ್ ರಹೀಂ ಬಂಧನಕ್ಕೊಳಗಾದ ವಿದ್ಯಾರ್ಥಿಗಳು. ಬಂಧಿತ ಎಲ್ಲಾ ವಿದ್ಯಾರ್ಥಿಗಳು ಕೇರಳ ಮೂಲದವರೆಂದು ತಿಳಿದು ಬಂದಿದೆ.

ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿರುವ ಈ ರ‍್ಯಾಗಿಂಗ್ ಪ್ರಕರಣದ ಬಗ್ಗೆ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ನಿಶಾಂತ್ (20) ಎಂಬಾತ ನೀಡಿದ ದೂರಿನ ಹಿನ್ನೆಲೆಯಲ್ಲಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ವಿದ್ಯಾರ್ಥಿಗಳು ಕಸಬಾ ಗ್ರಾಮದಲ್ಲಿ ಕಣ್ಣನ್ ಅವರ ರೂಮಿಗೆ ಸಂತ್ರಸ್ತ ವಿದ್ಯಾರ್ಥಿ ನಿಶಾಂತ್ ಮತ್ತು ಅವನ ಸಹಪಾಠಿಗಳನ್ನು ಕರೆಸಿಕೊಂಡು ಅವ್ಯಾಚ್ಯವಾಗಿ ನಿಂದಿಸಿ , ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ರ‍್ಯಾಗಿಂಗ್ ಬಗ್ಗೆ ಕರ್ನಾಟಕ ಎಜ್ಯುಕೇಶನ್ ಯಾಕ್ಟ್ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.