ಕರಾವಳಿ

ಉಪ್ಪಳ ಹೆದ್ದಾರಿಯಲ್ಲಿ ಕಾರು ಟ್ರಕ್ ನಡುವೆ ಭೀಕರ ಅಪಘಾತ – ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

Pinterest LinkedIn Tumblr

 

uppala_car_accident_a

ಉಪ್ಪಳ, ಜ.4: ಸ್ವಿಫ್ಟ್ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಮಂಗಳೂರು-ಕಾಸರಗೋಡ್ ರಾಷ್ಟ್ರೀಯ ಹೆದ್ದಾರಿ 44ರ ಉಪ್ಪಳ ನಯಾಬಝಾರ್ ಬಳಿ ನಡೆದಿದೆ.

ಮೃತರನ್ನು ತೃಶೂರ್ ಚೇಳಕ್ಕರ ನಿವಾಸಿ ಡಾ.ರಾಮನಾರಾಯಣ ಸಿ.ಕೆ (52), ಪತ್ನಿ ವತ್ಸಲಾ (48),ಪುತ್ರ ರಂಜಿತ್(20) ಹಾಗೂ ಗೆಳೆಯ ನಿತಿನ್(20) ಎಂದು ಗುರುತಿಸಲಾಗಿದೆ.

uppala_car_accident1 uppala_car_accident3 uppala_car_accident2 uppala_car_accident4

uppala_car_accident_5

ಇಂದು ಮುಂಜಾನೆ ಸುಮಾರು ನಾಲ್ಕು ಗಂಟೆಯ ಸಮಯ ಮಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಟ್ರಕ್ ಮುಂದಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.