ಕರಾವಳಿ

ಸಂಸದರ ಹೇಳಿಕೆಗೆ ಸಚಿವ ಯು.ಟಿ. ಖಾದರ್ ಅಸಮಾಧಾನ

Pinterest LinkedIn Tumblr

Khader_byte_mcc

ಮ0ಗಳೂರು ಜನವರಿ 2 : ಜಿಲ್ಲೆಗೆ ಬೆಂಕಿ ಹಚ್ಚಲಾಗುವುದು ಎಂದು ಹೇಳುವ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಜವಾಬ್ದಾರಿಯುತ ಪ್ರತಿನಿಧಿಯಾಗಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸದರು ಜಿಲ್ಲೆಯ ಏಕತೆ, ಸಾಮರಸ್ಯ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಮಾತನಾಡಬೇಕೇ ಹೊರತು ಬೆಂಕಿ ಹಚ್ಚುವಂತಹ ಹೇಳಿಕೆ ನೀಡಿರುವುದು ಶೋಭೆ ತರುವಂತದ್ದಲ್ಲ. ಇಂತಹ ಹೇಳಿಕೆಗಳ ಮೂಲಕ ಜಿಲ್ಲೆಯಲ್ಲಿ ಹಿಂಸೆಗೆ ಪ್ರಚೋಧನೆ ನೀಡುವ ಕೆಲಸವನ್ನು ಸಂಸದರು ಮಾಡಿದ್ದಾರೆ. ಬೆಂಕಿ ಹಚ್ಚುವವರು ಬೇಕಾ ಅಥವಾ ನಂದಿಸುವವರು ಬೇಕಾ ಎಂದು ಜನತೆ ನಿರ್ಧರಿಸಬೇಕಿದೆ.

ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲಿ ರಾಜಕೀಯ ಸಲ್ಲದು. ಎಲ್ಲರೂ ಒಗ್ಗಟ್ಟಾಗಿ ಈ ವಿಷಯದಲ್ಲಿ ನೈತಿಕ ಸ್ಥೈರ್ಯ ನೀಡಬೇಕು. ನೈಜ ಆರೋಪಿಗಳನ್ನು ಬಂಧೀಸಬೇಕೆಂದು ಎಲ್ಲರ ಬೇಡಿಕೆ ಇದೆ. ಜನಪ್ರತಿನಿಧಿಗಳು ಪೊಲೀಸ್ ಇಲಾಖೆಯ ಕೆಲಸವನ್ನು ಪರಿಶೀಲಿಸಬೇಕು. ಆರೋಪಿಗಳ ಪತ್ತೆಗೆ ಸಹಕರಿಬೇಕು. ಆದರೆ, ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯುವುದಲ್ಲ. ಈ ಪ್ರಕರಣವನ್ನು ಸಿಓಡಿಗೆ ವಹಿಸಲು ಈಗಾಗಲೇ ಪೊಲೀಸರೊಂದಿಗೆ ಹಾಗೂ ಕಾರ್ತಿಕ್‍ರಾಜ್ ಹೆತ್ತವರೊಂದಿಗೆ ಚರ್ಚಿಸಲಾಗಿದೆ. ಗೃಹ ಸಚಿವರನ್ನೂ ಈ ಸಂಬಂಧ ಕೋರಲಾಗುವುದು.

ಪ್ರಸಕ್ತ ಪ್ರಚೋಧನಕಾರಿ ಮಾತಿಗೆ ಸಮಾಜದಲ್ಲಿ ಬಹಳ ಬೇಗ ಆಕರ್ಷಿತರಾಗುತ್ತಿದ್ದು, ಉತ್ತಮ ಮಾತುಗಳು ಪರಿಣಾಮಕಾರಿ ಯಾಗುತ್ತಿಲ್ಲ.  ಪ್ರಚೋಧನಕಾರಿ ಹೇಳಿಕೆ ನೀಡಿದ ಸಂಸದರು ತಕ್ಷಣವೇ ಜಿಲ್ಲೆಯ ಜನತೆಯ ಕ್ಷಮೆಯಾಚಿಸಬೇಕು ಎಂದು ಸಚಿವ ಯು.ಟಿ. ಖಾದರ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Comments are closed.