ಕರಾವಳಿ

ಹೊಸ ವರ್ಷ ಆಚರಣೆ : ಅಹಿತಕರ ಘಟನೆ ತಡೆಗಟ್ಟಲು ಪೊಲೀಸರಿಂದ ಮುನ್ನೆಚ್ಚರಿಕೆ – ಕಟ್ಟುನಿಟ್ಟಿನ ಕ್ರಮ ಜಾರಿ

Pinterest LinkedIn Tumblr

happy_new_year

ಮಂಗಳೂರು,ಡಿಸೆಂಬರ್.30 : ನಗರ ಪ್ರದೇಶಗಳಲ್ಲಿ ಪ್ರತೀ ಬಾರಿಯು ಹೊಸ ವರ್ಷ ಆಚರಣೆಯ ಸಂದರ್ಭ ಉಂಟಾಗುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸರು ಕೆಲವೊಂದು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಹೊಸ ವರ್ಷದ ಆಚರಣೆ ಅಹಿತಕರ ಘಟನೆಯ ನೆನಪಾಗಿ ಉಳಿಯದಂತೆ ಎಚ್ಚರಿಕೆ ವಹಿಸಿದ್ದಾರೆ

ಕಟ್ಟುನಿಟ್ಟಿನ ಕ್ರಮಗಳು :

ಡಿಸೆಂಬರ್ 31 ರಾತ್ರಿ ಎಲ್ಲಾ ಹೊಟೇಲ್ ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳು ಮತ್ತು ವಿಶೇಷ ಕೂಟಗಳಲ್ಲಿ ನಡೆಸುವ ಕಾರ್ಯಕ್ರಮಗಳು ಮಧ್ಯರಾತ್ರಿ 1 ಗಂಟೆಯೊಳಗೆ ಮುಕ್ತಾಯವಾಗಬೇಕು.

ಕಾರ್ಯಕ್ರಮಗಳನ್ನು ಆಯೋಜಿಸುವವರು ಸಂಬಂಧಪಟ್ಟ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿಗಳನ್ನು ಪಡೆದುಕೊಳ್ಳಬೇಕು.

ಕಡ್ಡಾಯವಾಗಿ ಮಂಗಳೂರು ಪೊಲೀಸ್ ಕಮಿಷನರ್ ರವರ ಕಚೇರಿಗೆ ಅರ್ಜಿ ಸಲ್ಲಿಸಿ, ಕಾರ್ಯಕ್ರಮ ನಡೆಸಲು ಅನುಮತಿ ಪಡೆದುಕೊಳ್ಳಬೇಕು.

ಅಸಭ್ಯವಾಗಿ ವರ್ತಿಸುವ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ.

ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ಅಗತ್ಯ, ಧ್ವನಿವರ್ಧಕಗಳ ಧ್ವನಿ ನಿಗದಿತ ಪ್ರಮಾಣಕ್ಕಿಂತ ಮೀರಬಾರದು. ಅನಾಹುತಗಳು ನಡೆದಲ್ಲಿ ಹೊಟೇಲ್ ಕ್ಲಬ್ ಅಥವಾ ವಿಶೇಷ ಕೂಟಗಳನ್ನು ಆಯೋಜಿಸಿದ ವ್ಯವಸ್ಥಾಪಕರೇ ಹೊಣೆಗಾರರಾಗುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಅಶ್ಲೀಲ, ಅರೆ ಬೆತ್ತಲೆ ನೃತ್ಯ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ

ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ ನೀಡುವುದು, ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕ್ರಮಕ್ಕೆ ವಿಶೇಷ ಕಾರ್ಯಪಡೆ.

ಬೈಕ್ ವ್ಹೀಲಿಂಗ್ ಮತ್ತು ಡ್ರಾಗ್ ರೇಸ್ ನಿಷೇಧಿಸಲಾಗಿದೆ. ಬೊಬ್ಬೆ ಹಾಕುವುದು ಹಾಗೂ ಅತೀ ವೇಗದಲ್ಲಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ದ ಮಾಡಿದರೆ ಪ್ರಕರಣ ದಾಖಲು.

ಬೀಚ್ ಪ್ರದೇಶಗಳಲ್ಲಿ ಮದ್ಯಪಾನ ಮಾಡುವುದು, ಅಶ್ಲೀಲವಾಗಿ ವರ್ತಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಅರೆಬೆತ್ತಲೆ ಅಥವಾ ಬೆತ್ತಲೆ ನೃತ್ಯ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ.

ಪಟಾಕಿ, ಸುಡುಮದ್ದು ಸಿಡಿಸುವುದು ನಿಷೇಧಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಕ್ರಮ.

ಇಲಾಖೆಗಳಿಂದ ಪಡೆದ ಪರವಾನಿಗೆಯಲ್ಲಿ ನೀಡಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

ಕಾರ್ಯಕ್ರಮ ಆಯೋಜಿಸಿದ ವೇಳೆ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ಉಪಕರಣಗಳು, ತುರ್ತು ಚಿಕಿತ್ಸಾ ವಾಹನ ಹಾಗೂ ಇತರೆ ಮುಂಜಾಗೃತ ಕ್ರಮಗಳನ್ನು ಆಯೋಜಕರೇ ವಹಿಸಿಕೊಳ್ಳಬೇಕು.

Comments are closed.