ಕರಾವಳಿ

ಗಣಿಗಾರಿಕೆಗೆ ಅವಕಾಶ ನೀಡಲು ಕಪ್ಪತ್ತುಗುಡ್ಡ ರಕ್ಷಿತಾರಣ್ಯ ಡಿನೋಟಿಫೈ; ಜಗದೀಶ್ ಶೆಟ್ಟರ್

Pinterest LinkedIn Tumblr

ಉಡುಪಿ: ಗಣಿಗಾರಿಕೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಪ್ಪತ್ತುಗುಡ್ಡ ರಕ್ಷಿತಾರಣ್ಯ ಡಿನೋಟಿಫೈ ಮಾಡಲಾಗಿದೆ ಎಂದು ಮಾಜಿ ಸಿ‌ಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

udupi_jagadeesha-shetter_krishna-mutt

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಕೃಷ್ಣ ನ ದರ್ಶನ ಪಡೆದು ಪೇಜಾವರ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಪ್ಪತ್ತುಗುಡ್ಡ ರಕ್ಷಿತಾರಣ್ಯ ಡಿನೋಟಿಪೈ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಮಾಡಲಾಗಿದೆ. ನಾನು ಆಧಾರವಿಲ್ಲದೇ ಆರೋಪ ಮಾಡಲ್ಲ. ಆದ್ರೆ ಸಿ‌ಎಂ ಆಧಾರರಹಿತ ಆರೋಪ ಎಂದು ಹೇಳಿರುವುದು ಸರಿಯಲ್ಲ. ಈ ಬಗ್ಗೆ ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡಲು ಅವಕಾಶ ಸಿಕ್ಕಿಲ್ಲ. ಸಿ‌ಎಂ ಪ್ರಾಮಾಣಿಕರು ಎಂದಾದ್ರೆ ಡಿನೋಟಿ ಫೈ ಆದೇಶ ವಾಪಾಸ್ ಪಡೆಯಿರಿ ಎಂದು ಆಗ್ರಹಿಸಿದರು.

ಇನ್ನು ಭೀಮ್ ನಾಯ್ಕ್ ಕಾರುಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿದ ಶೆಟ್ಟರ್ ಈಗಾಗಲೇ ಈ ಬಗ್ಗೆ ಶ್ರೀರಾಮಲು ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ಮಾಡಲಿ, ರೆಡ್ಡಿಗಳಿಂದ ತಪ್ಪಾಗಿದ್ರೆ ಗೊತ್ತಾಗುತ್ತೆ. ತನಿಖಾ ವರದಿ ಬಂದ ನಂತರ ನೋಡೋಣ ಎಂದರು. ಚಿಕ್ಕರಾಯಪ್ಪ , ಜಯಚಂದ್ರ ಪ್ರಕರಣದಲ್ಲಿ ಎಸಿಬಿಯಿಂದ ಸಮರ್ಪಕ ತನಿಖೆ ಆಗುತ್ತದೆ ಎಂಬ ನಂಬಿಕೆ ಇಲ್ಲ ಎಂದ ಶೆಟ್ಟರ್ ಒಂದುವರೆ ತಿಂಗಳಲ್ಲಿ ಸಿ‌ಐಡಿಯವರು ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದೆ. ಆದ್ರೆ ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಒಂದೂ ಸುಳಿವು ಸಿಗಲ್ಲ . ಎಸಿಬಿ ಹಾಗೂ ಸಿ‌ಐಡಿ ರಾಜ್ಯ ಸರ್ಕಾರ ಕೈ ಗೊಂಬೆಗಳು ಎಂದು ಆರೋಪಿಸಿದರು.

Comments are closed.