ಕರಾವಳಿ

ಕಟೀಲು ಬಗ್ಗೆ ಅವಹೇಳನೆ :ಮಂಗಳೂರು ಪೊಲೀಸರಿಂದ ಮುಂಬಾಯಿಯ ಫೇಸ್ಬುಕ್ ಸಂಸ್ಥೆಯಲ್ಲಿ ವಿಚಾರಣೆ

Pinterest LinkedIn Tumblr

mumbai_face_book

ಮಂಗಳೂರು, ಡಿ.9: ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕುರಿತ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಫೇಸ್ ಬುಕ್ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಫೇಸ್ಬುಕ್ ಸಂಸ್ಥೆಯ ಸಿಬ್ಬಂದಿಯನ್ನು ಮಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮಂಗಳೂರು ಪೊಲೀಸರು ಮುಂಬೈಯಲ್ಲಿರುವ ಫೇಸ್ ಬುಕ್ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿಯ ವಿಚಾರಣೆ ನಡೆಸಿ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಇದಕ್ಕೆ ಮುಂಬೈ ಪೊಲೀಸರು ಕೂಡ ಸಹಕಾರ ನೀಡಿದ್ದಾರೆ.

ಆರೋಪಿಗಳ ಪತ್ತೆಗೆ ಫೇಸ್ ಬುಕ್ ಸಂಸ್ಥೆಯ ಅಸಹಕಾರ ತೋರಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಹಾಗೂ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಜಂಟಿಯಾಗಿ ಮುಂಬೈಯಲ್ಲಿರುವ ಫೇಸ್ ಬುಕ್ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ಎಸಿಪಿ ವೆಲೆಂಟೈನ್ ಡಿಸೋಜ, ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಶಾಂತರಾಂ, ಶಿವಪ್ರಕಾಶ್ ಮೊದಲಾದ ಪೊಲೀಸರ ತಂಡ ಮುಂಬೈಗೆ ತೆರಳಿ ವಿಚಾರಣೆ ನಡೆಸಿದೆ.ಇದಕ್ಕೆ ಮುಂಬೈ ಪೊಲೀಸರು ಸಹಕಾರ ನೀಡಿದ್ದಾರೆ ಎನ್ನಲಾಗಿದೆ.

Comments are closed.