ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೂತನ ಸಿಇಓ ಆಗಿ ಡಾ.ಎಂ.ಆರ್.ರವಿ ನೇಮಕ

Pinterest LinkedIn Tumblr

dr_mr_ravi_zp_ceo

ಮಂಗಳೂರು, ಡಿಸೆಂಬರ್. 1: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ.ಎಂ. ಆರ್. ರವಿ ನೇಮಕಗೊಂಡಿದ್ದಾರೆ.

ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ದ.ಕ. ಜಿ.ಪಂ. ಸಿಇಓ ಆಗಿ ನೇಮಕಗೊಳಿಸಲಾಗಿದೆ.

2001ರಿಂದ 06ರವರೆಗೆ ಮೈಸೂರು ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ, 2007ರಿಂದ 2010ರವರೆಗೆ ಹುಣಸೂರು ಕಾರವಾರ ಮತ್ತು ಮಡಿಕೇರಿ ಉಪವಿಭಾಗದಲ್ಲಿ ಸಹಾಯಕ ಆಯುಕ್ತರಾಗಿ, 2011ರಿಂದ 2012ರವರೆಗೆ ಮಡಿಕೇರಿಯಲ್ಲಿ ಹಿರಿಯ ಸಹಾಯಕ ಆಯುಕ್ತರಾಗಿ, 2012ರಿಂದ 2013ರವರೆಗೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಹಾಗೂ 2013ರಿಂದ 2016ರವರೆಗೆ ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿದ್ದಾರೆ.

Comments are closed.