ಕರಾವಳಿ

ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಚಿರತೆ ಕಾಟ; ವಕ್ವಾಡಿಯಲ್ಲಿ ಚಿರತೆ ದಾಳಿಗೆ ನಾಯಿ ಬಲಿ

Pinterest LinkedIn Tumblr

ಕುಂದಾಪುರ: ಮನೆ ಹೊರಗಡೆ ಕಟ್ಟಿ ಹಾಕಿದ್ದ ನಾಯಿಯೊಂದು ಚಿರತೆಯ ದಾಳಿಗೆ ಬಲಿಯಾದ ಘಟನೆ ಬುಧವಾರ ತಡರಾತ್ರಿ ಕುಂದಾಪುರದ ವಕ್ವಾಡಿಯ ಅರೆಕಲ್ಲು ಎಂಬಲ್ಲಿ ನಡೆದಿದೆ.

kundapura_cheetha-attack_dog-death-2 kundapura_cheetha-attack_dog-death-4 kundapura_cheetha-attack_dog-death-3 kundapura_cheetha-attack_dog-death-5 kundapura_cheetha-attack_dog-death-1

ಅರೆಕಲ್ಲು ನಿವಾಸಿ ಸತೀಶ್ ಶೆಟ್ಟಿ ಎನ್ನುವವರ ಮನೆ ಹೊರಗಡೆ ರಾತ್ರಿ ವೇಳೆ ಕಟ್ಟಿ ಹಾಕಿದ್ದ ಮನೆಯ ನಾಯಿ ಬೆಳಿಗ್ಗೆ ಅರ್ದಂಬರ್ಧ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಯಿಯ ಹೊಟ್ಟೆ ಭಾಗ ಸಂಪೂರ್ಣ ತಿಂದ ಸ್ಥಿತಿಯಲ್ಲಿದ್ದು ಚಿರತೆಯ ದಾಳಿ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಶಂಕಿಸಲಾಗಿದೆ. ಅಲ್ಲದೇ ಸ್ಥಳದಲ್ಲಿರುವ ದೊಡ್ಡ ಗಾತ್ರದ ಹೆಜ್ಜೆ ಗುರುತುಗಳು ಚಿರತೆಯದ್ದಾಗಿದೆ ಎನ್ನಲಾಗಿದೆ.

ಸ್ಥಳಕ್ಕೆ ಕುಂದಾಪುರ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಚಿರತೆ ಕಾಟ ಜಾಸ್ಥಿಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಭೀತಿಗೊಂಡಿದ್ದಾರೆ.

Comments are closed.