ಕರಾವಳಿ

ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಕಂಟಕ

Pinterest LinkedIn Tumblr

Mulki_Kambala_Notice_1

ಮಂಗಳೂರು, ನ.19 : ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳವನ್ನು ನವೆಂಬರ್ 26ರ ವರೆಗೆ ನಡೆಸದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಇದರಿಂದ ಕಂಬಳ ಆಯೋಜಕರಿಗೆ ಸಂಕಷ್ಟ ತಂದಿದೆ. ಈ ಮೂಲಕ ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಕಂಟಕ ಎದುರಾಗುವ ಲಕ್ಷಣಗಳು ಗೋಚರಿಸಿವೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಷರತ್ತುಗಳ ಮೇಲೆ ಕಂಬಲ ನಡೆಸಲು ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಅನುಮತಿ ವಿರುದ್ಧ ‘ಪೆಟಾ’ ಸಂಘಟನೆ ವಿಭಾಗೀಯ ಪೀಠದ ಮೊರೆ ಹೋಗಿದೆ. ಇದರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಮುಂದಿನ ಆದೇಶದ ವರೆಗೆ ಕಂಬಳಕ್ಕೆ ಅವಕಾಶ ನೀಡದಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಅಕ್ಟೋಬರ್‌ನಲ್ಲಿ ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಂಬಳಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಇದಕ್ಕೆ ಎರಡೂ ಜಿಲ್ಲಾಧಿಕಾರಿಗಳು ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದರು. ಇದನ್ನು ಕಂಬಳ ಸಮಿತಿ ಪ್ರಶ್ನಿಸಿ ಮನವಿ ಸಲ್ಲಿಸಿತ್ತು.

ಇದನ್ನು ಪುರಸ್ಕರಿಸಿದ್ದ ನ್ಯಾಯಾಲಯ ಹೈಕೋರ್ಟ್ ಏಕಸದಸ್ಯ, ಸರ್ಕಾರ ವಿಧಿಸಿರುವ ಷರತ್ತುಗಳಂತೆ ಕಂಬಳ ನಡೆಸಲು ಅನುಮತಿ ನೀಡಿತ್ತು. ಈ ಸಂಬಂಧ ನವೆಂಬರ್ 3ರಂದು ಹೈಕೋರ್ಟ್ ಕೊನೆಯ ಆದೇಶ ನೀಡಿತ್ತು.

ಇದರ ವಿರುದ್ಧ ನ.14ರಂದು ಪ್ರಾಣಿ ದಯಾ ಸಂಘಟನೆ ಪೆಟಾ ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋಗಿದ್ದು, ಪ್ರಕರಣದ ವಿಚಾರಣೆ ಶುಕ್ರವಾರ ನಡೆದಿತ್ತು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೋಮಶೇಖರ್ ಅವರಿದ್ದ ಪೀಠವು ನ.26ರ ತನಕ ಯಾವುದೇ ಕಂಬಳ ನಡೆಸದಂತೆ ಎಚ್ಚರ ವಹಿಸಲು ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಪೆಟಾ ಸಂಸ್ಥೆಯ ಹೊಸ ಅರ್ಜಿಗೆ ಪೀಠ ಅವಕಾಶ ಒದಗಿಸಿದೆ. ಕಂಬಲ ಸಮಿತಿ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಬಿವಿ ಆಚಾರ್ಯ ವಾದಿಸಿದ್ದರು.ಮುಂದಿನ ವಿಚಾರಣೆ ನವೆಂಬರ್ 22ರಂದು ನಡೆಯಲಿದೆ.

Comments are closed.