ಕರಾವಳಿ

ಫೇಸ್‌ಬುಕ್‌ನಲ್ಲಿ ಸಂವಿಧಾನ ಶಿಲ್ಪಿಗೆ ಅವಮಾನ; ಇಬ್ಬರ ವಿರುದ್ಧ ದಲಿತ ದೌರ್ಜನ್ಯ ಕೇಸ್

Pinterest LinkedIn Tumblr

ಉಡುಪಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಅವಹೇಳನಕಾರಿಯಾಗಿ ಬರೆದ ಇಬ್ಬರು ಯುವಕರ ಬಗ್ಗೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಮಾತ್ರವಲ್ಲದೇ ಹಲವು ಠಾಣೆಯಲ್ಲಿ ಇವರ ವಿರುದ್ಧ ಕ್ರಮಕ್ಕೆ ದೂರು ನೀಡಲಾಗಿದೆ. ಅಷ್ಟಕ್ಕೂ ಆ ಕಿಡಿಗೇಡಿ ಯುವಕರು ಯಾರು..? ಅವರು ಬರೆದಿದ್ದಾದರೂ ಏನು? ಎಂಬುದಕ್ಕೆ ಈ ವರದಿ ಓದಿ.

kundapura_ambedkar_avamana-1 kundapura_ambedkar_avamana-3 kundapura_ambedkar_avamana-4

dysp-ge-manavi-1

kundapura_ambedkar_avamana-6 kundapura_ambedkar_avamana-2 kundapura_ambedkar_avamana-5

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಸಿಕ್ಕಾಪಟ್ಟೆ ಟ್ರೆಂಡ್ ಮೂಡಿಸಿದೆ. ಯಾವುದೇ ವಿಚಾರ ಬಂದ್ರೂ ಅದನ್ನು ಮೊದಲು ಪೇಸ್ಬುಕ್ ಹಾಗೂ ವಾಟ್ಸಾಪ್ ಮೊದಲಾದವುಗಳಲ್ಲಿ ಚರ್ಚೆ ಮಾಡದಿದ್ರೇ ಹಲವರಿಗೆ ನಿದ್ದೆ ಬಾರದು. ಅಂದು ಕೂಡ ಆಗಿದ್ದು ಹಾಗೆ. ಐನೂರು ಹಾಗೂ ಒಂದು ಸಾವಿರ ನೋಟು ಬ್ಯಾನ್ ಆದ ಬಗ್ಗೆ ಹಾಗೂ ಹೊಸನೋಟುಗಳನ್ನು ಜಾರಿಗೆ ತರುವ ಬಗ್ಗೆಗಿನ ಚರ್ಚೆ ಜೋರಾಗಿತ್ತು. ವಿವಿಧ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಟಿನದ್ದೇ ಸುದ್ದಿ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವರ ಅಭಿಮಾನಿಗಳು ಹೊಗಳಿ ಬರೆದಿದ್ದು ಅಷ್ಟಿಷ್ಟಲ್ಲ. ಇದೇ ಸಂದರ್ಭ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದ ಹಾಗೇ ಇವರಿಬ್ಬರು ಯುವಕರು ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ಸಿಟ್ಟಾಗಿದ್ರು. ಮೋದಿಯನ್ನು ಹೊಗಳುವ ಬರದಲ್ಲಿ ಸಂವಿಧಾನ ಶಿಲ್ಪಿಗೆ ಏಕವಚನದಲ್ಲಿ ಬೈದಿದ್ದಲ್ಲದೇ ಅವ್ಯಾಚ ಶಬ್ದಪ್ರಯೋಗದ ಮೂಲಕ ನಿಂದಿಸಿದ್ರು. ರಂಜಿತ್ ರಂಜು ಶೆಟ್ಟಿ ಹಾಗೂ ವಿಕ್ರಮ್ ಎಂ.ಕೆ. ಕುಂದಾಪುರ ಹೆಸರಿನ ಫೇಸ್‌ಬುಕ್ ಐಡಿಯಲ್ಲಿ ಬಂದ ಅವಹೇಳನಕಾರಿ ಬರಹಗಳು ಅಂಬೇಡ್ಕರ್ ಅಭಿಮಾನಿಗಳು ಹಾಗೂ ದಲಿತರನ್ನು ಕೆರಳಿಸಿತ್ತು.

ಪೇಸ್ಬುಕ್ಕಿನಲ್ಲಿ ಬಂದ ಬರಹಗಳ ಬಗ್ಗೆ ದಲಿತ ಮುಖಂಡರು, ಅಂಬೇಡ್ಕರ್ ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದ್ದು ಈ ಬಗ್ಗೆ ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಅವಹೇಳನಕಾರಿಯಾಗಿ ಸಂವಿಧಾನ ಶಿಲ್ಪಿ ಬಗ್ಗೆ ಬರೆದ ಇಬ್ಬರು ಕಿಡಿಗೇಡಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೈಗುಳದ ಬರಹಗಳು ಹಾಗೂ ಅಸಮಧಾನ ವ್ಯಕ್ತವಾಯ್ತು. ಈ ಬಗ್ಗೆ ರೊಚ್ಚಿಗೆದ್ದ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಸಂಘಟನಾ ಸಂಚಾಲಕ ಕೆ.ಎಸ್. ವಿಜಯ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಇಬ್ಬರ ವಿರುಧ್ಧ ಪ್ರಕರಣ ದಾಖಲಿಸುತ್ತಾರೆ. ದಲಿತ ಮುಖಂಡರಾದ ರಾಜು ಬೆಟ್ಟಿನಮನೆ, ಉದಯಕುಮಾರ್ ತಲ್ಲೂರು, ಮಂಜುನಾಥ ಗಿಳಿಯಾರ್, ಗೋಪಾಲ ಕಳಿಂಜೆ, ಚಂದ್ರಮ ತಲ್ಲೂರು ಮೊದಲಾದವರು ಕುಂದಾಪುರ ಡಿವೈ‌ಎಸ್ಪಿ ಪ್ರವೀಣ ನಾಯಕ್ ಅವರಿಗೂ ಮನವಿ ಸಲ್ಲಿಸಿ ಅಟ್ರಾಸಿಟಿ ಪ್ರಕರಣ ದಾಖಲಾಗುವಂತೆ ಮಾಡುತ್ತಾರೆ. ಅಲ್ಲದೇ ಕೋಟ, ಹೆಬ್ರಿ, ಗಂಗೊಳ್ಳಿ, ಶಂಕರನಾರಾಯಣ, ಅಮಾಸೆಬೈಲು, ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಆ ಭಾಗದ ದಲಿತ ಮುಖಂಡರು ಕೇಸು ನೀಡಿದ್ದಾರೆ. ಇತ್ತ ಪೊಲೀಸ್ ಕೇಸ್ ಆಗಿದ್ದೇ ತಡ ಯುವಕ ರಂಜಿತ್ ಕ್ಷಮೆಯಾಚನೆ ಮಾಡಿದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುವ ಮೂಲಕ ತಪ್ಪಾಯ್ತು ಎಂದು ಕೇಳಿಕೊಂಡಿದ್ದಾನೆ. ಅ ವಿಡಿಯೋ ಸದ್ಯ ಸೋಶಿಯಲ್ ಮೇಡಿಯಾದಲ್ಲಿ ಹರಿದಾಡ್ತಿದೆ.

ಒಬ್ಬರನ್ನು ಹೊಗಳುವ ಭರದಲ್ಲಿ ಇನ್ನೊಬ್ಬರನ್ನು ತೆಗಳಲು ಸೋಶಿಯಲ್ ಮೇಡಿಯಾಗಳು ಮಿಸ್ ಯೂಸ್ ಆಗ್ತಿರುವುದು ಮಾತ್ರ ದುರದೃಷ್ಟಕರ. ಸೋಶಿಯಲ್ ಮೇಡಿಯಾಗಳಲ್ಲಿ ಕಿಡಿಗೇಡಿತನ ಪ್ರದರ್ಶಿಸುವ ಇಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಬೇಕಿದ್ದು ಶೀಘ್ರ ಆರೋಪಿಗಳ ಬಂಧನವಾಗಬೇಕಿದೆ.

—————————————
ವರದಿ- ಯೋಗೀಶ್ ಕುಂಭಾಸಿ

Comments are closed.