ಕರಾವಳಿ

ಕುಂದಾಪುರ: ಅಕ್ರಮವಾಗಿ ಸಾಗಿಸುತ್ತಿದ್ದ ದನದ ಮಾಂಸ ವಶ

Pinterest LinkedIn Tumblr

ಕುಂದಾಪುರ: ಬೈಕಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಮಾಂಸವನ್ನು ಖಚಿತ ವರ್ತಮಾನದ ಮೇರೆಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಅಡ್ಡಗಟ್ಟಿ ಹಿಡಿದ ಘಟನೆ ಶನಿವಾರ ರಾತ್ರಿ ಕೋಟೇಶ್ವರ ಬೈಪಾಸ್ ಸಮೀಪದ ಅಂಡರ್ ಪಾಸ್ ಬಳಿ ನಡೆದಿದೆ.

koteshwara_illeagal_cow-meat

ಈ ವೇಳೆ ಕೋಟೇಶ್ವರ ಆಸುಪಾಸಿನ ಇಬ್ಬರು ಯುವಕರನ್ನು ಹಿಂದೂಸಂಘಟನೆ ಕಾರ್ಯಕರ್ತರು ಬೈಕ್ ಸಮೇತ ಪೊಲೀಸರಿಗೆ ಒಪ್ಪಿಸಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಅಂದಾಜು ೬೦ ಕೆ.ಜಿಗೂ ಅಧಿಕ ದನದ ಮಾಂಸ ಫ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಸಾಗಿಸಲಾಗುತ್ತಿತ್ತು. ಮಾಂಸವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆಂಬ ನಿಖರ ಮಾಹಿತಿ ಸಿಕ್ಕಿಲ್ಲ.

ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Comments are closed.