ಕರಾವಳಿ

ಹೆಡ್ ಕಾನ್ಸ್‌ಟೇಬಲ್ ಲಾರೆನ್ಸ್ ಸೆಲ್ವರಾಜ್‌ರ ಬ್ರೈನ್ ಡೆಡ್; ಕುಟುಂಬದಿಂದ ಅಂಗಾಂಗ ದಾನ

Pinterest LinkedIn Tumblr

ಉಡುಪಿ: ಬ್ರೈನ್ ಹ್ಯಾಮರೇಜ್ ನಿಂದ ಮೆದುಳು ನಿಷ್ಕ್ರೀಯಗೊಂಡ ಪೊಲೀಸ್ ಪೇದೆಯೋರ್ವರ ಅಂಗಾಂಗ ರವಾನೆ ಮಾಡಲಾಯಿತು. ಉಡುಪಿ ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯಲ್ಲಿ ಕಾನ್ಸ್ ಸ್ಟೇಬಲ್ ಆಗಿದ್ದ ಲಾರೆನ್ಸ್ ಸೆಲ್ವರಾಜ್(39) ಬ್ರೈನ್ ಹ್ಯಾಮರೇಜ್ ನಿಂದ ಬ್ರೈನ್ ಡೆಡ್ ಆಗಿತ್ತು. ಗ್ರೀನ್ ಕಾರಿಡಾರ್ ಮೂಲಕ ಝಿರೋ ಟ್ರಾಫಿಕ್ ನಲ್ಲಿ ಅಂಗಾಂಗ ರವಾನೆ ಮಾಡಲಾಯಿತು.

udupi_police_lawrence

ಉಡುಪಿ ಜಿಲ್ಲೆಯ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ 1988ರಲ್ಲಿ ಸೇವೆ ಆರಂಭಿಸಿದ್ದ ಲಾರೆನ್ಸ್ ಸೆಲ್ವರಾಜ್ ಮೊನ್ನೆಯಷ್ಟೇ ಡ್ಯುಟಿ ಮುಗಿಸಿ ಊಟಕ್ಕೆ ಬಂದ ಸಂದರ್ಬದಲ್ಲಿ ತಲೆ ತಿರುಗಿ ಬಿದ್ದಿದ್ದು ಬಳಿಕ ಇವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪರೀಕ್ಷೆಯ ಬಳಿಕ ಬ್ರೈನ್ ಹ್ಯಾಮರೇಜ್ ಆಗಿದೆ ಎಂದು ತಿಳಿದು ಬಂದಿದ್ದು ಮೆದುಳು ನಿಷ್ಕೀಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಮೆದುಳು ನಿಷ್ಕ್ರೀಯವಾದ ಹಿನ್ನಲೆಯಲ್ಲಿ ಅಂಗಾಂಗ ದಾನಕ್ಕೆ ಕುಟುಂಬದವರು ನಿರ್ದರಿಸಿದ್ದು  ಗ್ರಿನ್ ಕಾರಿಡಾರ್ ಮೂಲಕ ಬೆಳಗ್ಗೆ ಝೀರೋ ಟ್ರಾಫಿಕ್ ನಲ್ಲಿ ಕಿಡ್ನಿ ಮತ್ತು ಲಿವರನ್ನು ರವಾನೆ ಮಾಡಲಾಯಿತು. ಲಿವರನ್ನು ಬೆಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ರವಾನಿಸಿದರೆ, ಒಂದು ಕಿಡ್ನಿಯನ್ನು ಮಂಗಳೂರಿನ ಎ.ಜೆ ಆಸ್ಪತ್ರೆ ಹಾಗೂ ಮತ್ತೊಂದು ಕಿಡ್ನಿಯನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ರವಾನಿಸಲಾಗಿದೆ.

ಬ್ರೈನ್ ಹ್ಯಾಮರೇಜ್ ನಿಂದ ಮೃತಪಟ್ಟ ಲಾರೆನ್ಸ್ ಸೆಲ್ವರಾಜ್ ಅವರಿಗೆ ಸಕಲ ಸರಕಾರಿ ಗೌರವದಿಂದ ಚಂದು ಮೈದಾನದ ಡಿ.ಎ.ಆರ್ ಸೆಂಟರ್ ನಲ್ಲಿ ಗೌರವಾರ್ಪನೆ ಸಲ್ಲಿಸಲಾಯಿತು. ಜಿಲ್ಲಾ ಎಸ್ಪಿ ಕೆ.ಟಿ ಬಾಲಕೃಷ್ಣ, ಎ ಎಸ್ಪಿ ವಿಷ್ಣುವರ್ಧ ಸೇರಿದಂತೆ ಅನೇಕ ಪೊಲಿಸ್ ಅಧಿಕಾರಿಗಳು ಗೌರವ ಸಲ್ಲಿಸಿದರು. ಕರ್ತವ್ಯದಲ್ಲಿರುವಾಗ ಮೃತಪಟ್ಟ ಹಿನ್ನಲೆಯಲ್ಲಿ ಅವರಿಗೆ ಸರಕಾರದ ವತಿಯಿಂದ ಯಾವುದೆಲ್ಲ ಸವಲತ್ತು ನಿಡಬೇಕೋ ಆ ಬಗ್ಗೆ ಇಲಾಖೆಗೆ ವರದಿ ನೀಡಲಿದ್ದೇವೆ ಎಂದು ಜಿಲ್ಲಾ ಎಸ್ಪಿ ಕೆ.ಟಿ ಬಾಲಕೃಷ್ಣ ಹೇಳಿದ್ದಾರೆ. ಅಂಗಾಂಗ ದಾನದ ಬಗ್ಗೆ ತನ್ನ ಪತಿ ಉತ್ಸುಕರಾಗಿದ್ದಾರು. ಅವರ ಅಂಗಾಂಗ ದಾನದಿಂದ ಅವರು ಜೀವಂತ ಇರುತ್ತಾರೆ ಎಂಬ ಹಿನ್ನಲೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಿದ್ದೇವೆ ಎಂದು ಪ್ರತ್ನಿ ಸವಿತಾ ಸೆಲ್ವರಾಜ್ ಹೇಳಿದ್ದಾರೆ.

ಕರ್ತವ್ಯದಲ್ಲಿರುವಾಗ ಮೃತಪಟ್ಟ ಲಾರೆನ್ಸ್ ಅವರ ಅಂಗಾಂಗ ದಾನವಾಗಿದೆ. ಈ ಮೂಲಕ ಕುಟುಂಬ ಸಮಾಜಮುಖಿ ಪ್ರಜ್ಞೆಯನ್ನು ಮೆರೆದಿದೆ.

Comments are closed.