ಕರಾವಳಿ

ಕುಂದಾಪುರ: ಬಾವಿಗೆ ಬಿದ್ದ ಚಿರತೆ; ರಕ್ಷಣೆಗೆ ಅರಣ್ಯ ಇಲಾಖೆ ಹರಸಾಹಸ

Pinterest LinkedIn Tumblr

ಕುಂದಾಪುರ: ಆಹಾರವನ್ನರಸಿ ಬಂದ ಚಿರತೆಯೊಂದು ಮೈದಾನದಂತಿದ್ದ ಜಾಗದಲ್ಲಿನ ಬಾವಿಗೆ ಬಿದ್ದ ಘಟನೆ ಕುಂದಾಪುರದ ಕಾವ್ರಾಡಿಯಲ್ಲಿ ಸೋಮವಾರ ಬೆಳಕಿಗೆ ಬಂದಿದ್ದು ಚಿರತೆಯನ್ನು ರಕ್ಷಿಸಿ ಮೇಲಕ್ಕೆತ್ತಲು ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಹರಸಾಹಸಪಟ್ಟರು.

kundapura_-chirate_wel-21 kundapura_-chirate_wel-20 kundapura_-chirate_wel-19 kundapura_-chirate_wel-18 kundapura_-chirate_wel-4 kundapura_-chirate_wel-6 kundapura_-chirate_wel-3 kundapura_-chirate_wel-5 kundapura_-chirate_wel-1 kundapura_-chirate_wel-13 kundapura_-chirate_wel-11 kundapura_-chirate_wel-10 kundapura_-chirate_wel-15 kundapura_-chirate_wel-16 kundapura_-chirate_wel-14 kundapura_-chirate_wel-9 kundapura_-chirate_wel-7 kundapura_-chirate_wel-8 kundapura_-chirate_wel-17 kundapura_-chirate_wel-12 kundapura_-chirate_wel-2

ಸೋಮವಾರ ಬೆಳಿಗ್ಗೆ ಸ್ಥಳೀಯರೊಬ್ಬರು ಚಿರತೆ ಬಾವಿಗೆ ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆಯವರಿಗೆ ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಚಿರತೆಯನ್ನು ರಕ್ಷಿಸುವಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆದರೇ ಸುಮಾರು ೪೫ ಅಡಿಗೂ ಅಧಿಕ ಆಳವಿರುವ ಬಾವಿಯಲ್ಲಿದ್ದ ಚಿರತೆ ಮಾಸ್ಂಸದ ತುಂಡುಗಳನ್ನು ಇಳಿಯಬಿಟ್ಟರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಒಂದಷ್ಟು ಮರದ ಕೊಂಬೆಗಳನ್ನು ಬಾವಿಗೆ ಇಳಿಬಿಡುವ ಮೂಲಕ ಚಿರತೆಯೇ ಮೇಲಕ್ಕೆ ಹತ್ತಿ ಬರುವ ವಿಶ್ವಾಸ ಹೊಂದಿದ ಅರಣ್ಯ ಇಲಾಖೆಯವರು ಕಾದುನೋಡುವ ತಂತ್ರಕ್ಕೆ ಕೈಹಾಕಿದ್ದಾರೆ. ಸಂಜೆಯವರೆಗೂ ಚಿರತೆ ಮಾತ್ರ ಮೇಲಕ್ಕೆ ಬಂದಿರಲಿಲ್ಲ. ಕತ್ತಲಾದ ಬಳಿಕ ಜನರ ಓಡಾಟ ಹಾಗೂ ಶಬ್ದಗಳು ಕಡಿಮೆಯಾದ ತರುವಾಯ ಚಿರತೆ ಮರದ ಕೊಂಬೆಗಳ ಮೇಲೆ ಹತ್ತಿ ಮೇಲಕ್ಕೆ ಬರುವ ಸಾಧ್ಯತೆಗಳಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಕುಂದಾಪುರ ಉಪವಲಯ ಅರಣ್ಯಾಧಿಕಾರಿಗಳಾದ ದಿಲೀಪ್ ಕುಮಾರ್, ಹೇಮಾ, ಗುರುರಾಜ್ ಕಾವ್ರಾಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

Comments are closed.