ಕರಾವಳಿ

ಉಡುಪಿ ಜಿಲ್ಲೆ ಜನರು ಅತೀ ಬುದ್ದಿವಂತರಾಗಿದ್ದಕ್ಕೆ ಈ ತಾಪತ್ರಯವೆಂದು ಸಿ.ಎಂ. ಸಿದ್ದು ಹೇಳಿದ್ದೇಕೆ..?

Pinterest LinkedIn Tumblr

Siddaramaiah_0

ಉಡುಪಿ: ಉಡುಪಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀಕರಣ ಮಾಡುವ ಉದ್ದೇಶ ಸರಕಾರಕ್ಕಿಲ್ಲ. ಜಿಲ್ಲೆಯ ಜನರು ಅತೀ ಬುದ್ಧಿವಂತರಾಗಿರುವುದಕ್ಕೆ ಈ ತಾಪತ್ರಯ ಬಂದಿದೆ. ಜನರಿಗೆ ಮಾಹಿತಿ ಕೊರತೆಯಿಂದ ವಿರೋಧವಾಗುತ್ತಿದೆ ಅಲ್ಲದೇ ಕೆಲವರು ಪ್ರಚಾರಕ್ಕಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಉಡುಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಉಡುಪಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡದ ಶಿಲಾನ್ಯಾಸಕ್ಕೆ ಭಾನುವಾರ ಸಂಜೆ ಆಗಮಿಸಿದ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಆಸ್ಪತ್ರೆಯನ್ನು ಖಾಸಗೀಕರಣ ಮಾಡುತ್ತಿಲ್ಲ. ಸರ್ಕಾರಕ್ಕೆ ಎಲ್ಲಾ ಸಾಮರ್ಥ್ಯವಿದೆ. ಉದ್ಯಮಿಗಳಾದ ಬಿ.ಆರ್ ಶೆಟ್ಟಿ ಖರ್ಚು ಮಾಡುತ್ತೇನೆ ಅಂದಿದ್ದು ಅವರ ಅಪ್ಪ ಅಮ್ಮನ ಹೆಸರಲ್ಲಿ ಆಸ್ಪತ್ರೆಯಾಗುತ್ತಿದೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸೌಲಭ್ಯ ಚಿಕಿತ್ಸೆ ಸಿಗಲಿದೆ ಎಂದು ಉಡುಪಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Comments are closed.