ಕರಾವಳಿ

ಕುಂದಾಪುರ ಭಾಗದಲ್ಲಿ ಭತ್ತದ ಬೆಳೆಗಳಿಗೆ ಕಾಡಿಗೆ ರೋಗ; ಕಟಾವಿಗೆ ಬಂದ ಫಸಲು-ರೈತ ಕಂಗಾಲು

Pinterest LinkedIn Tumblr

ಉಡುಪಿ: ಆಧುನಿಕ ಕಾಲಘಟ್ಟದಲ್ಲಿ ಜನತೆ ಕೃಷಿಯಿಂದ ಬಹುತೇಕ ಜನರು ವಿಮುಖರಾಗ್ತಿದ್ದಾರೆ. ಇನ್ನು ಕೃಷಿಯನ್ನೇ ನಂಬಿಕೊಂಡು ಬದುಕುವ ಮಂದಿಯೂ ನಮ್ಮಲ್ಲಿ ಒಂದಷ್ಟು ಮಂದಿಯಿದ್ದು ಅವರು ಮಾಡಿದ ಭತ್ತದ ಕೃಷಿಗೆ ಈ ವರ್ಷ ಮಾರಿಯೊಂದು ಎರಗಿದ್ದು ಆತಂಕಕ್ಕೀಡಗಾಗಿದ್ದಾರೆ. ಹಾಗಾದ್ರೇ ಭತ್ತಕ್ಕೆ ಬಂದ ಆರೋಗವಾದ್ರೂ ಏನು? ರೈತರ ಬವಣೆ ಏನು ಎಂಬುದಕ್ಕೆ ಈ ವರದಿ ಓದಿರಿ.

ಇದು ನಾಡಾ ಗ್ರಾಮಪಂಚಾಯತಿ ವ್ಯಾಪ್ತಿಯ ಹಡವು ಹಾಗೂ ಪಡುಕೋಣೆ ಭಾಗದ ಕೃಷಿಭೂಮಿ. ಎತ್ತ ನೋಡಿದರೂ ಭತ್ತದ ಕೃಷಿ ಕಣ್ಣಿಗೆ ರಾಚುತ್ತಿದೆ ನಿಜ. ಆದರೇ ಮೂರ್ನಾಲ್ಕು ತಿಂಗಳಿನಿಂದ ಪೋಷಿಸಿ ಬೆಳೆಸಿದ ಭತ್ತದ ಬೆಳೆ ಬೆಳೆದ ರೈತರು ಖುಷಿಪಡುವ ಹಾಗಿಲ್ಲ. ಯಾಕೆಂದ್ರೇ ಇಷ್ಟು ವರ್ಷವೂ ಇಲ್ಲದ ಒಂದು ಮಾರಕ ರೋಗ ಭತ್ತಕ್ಕೆ ಅಂಟಿಕೊಂಡಿದೆ. ಅದುವೇ ಪಂಗಸ್ ಅಥವಾ ಶಿಲೀಂದ್ರದಿಂದ ಬರುವ ಸ್ಮಟ್ಟ್ ಡಿಸೀಸ್ ಅಥವಾ ಕಾಡಿಗೆ ರೋಗ. ಇದನ್ನು ಆಡುಭಾಷೆಯಲ್ಲಿ ಗಂಧ ಕಟ್ಟುವುದು ಎನ್ನುತ್ತಾರೆ ಕೃಷಿಕರು. ಹವಮಾನ ವೈಪರಿತ್ಯ ಅಂದರೇ ಬಿಸಿಲು ಮಳೆಯ ಜುಗಲ್ ಬಂದಿ ವಾತಾವರಣದಲ್ಲಿ ನಡೆದಾಗ ಭತ್ತದ ತೆನೆ ಮೇಲೆ ಪಂಗಸ್ ಅಥವಾ ಬ್ಯಾಕ್ಟೀರಿಯಾ ರೀತಿಯ ವಸ್ತು ಶೇಖರವಾಗುತ್ತದೆ. ಕಂದುಬಣ್ಣದ ಹಾಗಿರುವ ಈ ವಸ್ತುವನ್ನು ಕೈಯಲ್ಲಿ ಹಿಡಿದು ಉಜ್ಜಿದರೇ ಅದು ಪೌಡರ್ ಅಂತಾಗುತ್ತದೆ. ಈ ಕಾಡಿಗೆ ರೋಗ ಕಾಣಿಸಿಕೊಂಡರೇ ಇಡೀ ತೆನೆಯೇ ಹಾಳಾದ ಹಾಗೆ ಎನ್ನುತ್ತಾರೆ ಕೃಷಿಕರು.

bhatta_krashi_problem-2 bhatta_krashi_problem-6 bhatta_krashi_problem-7 bhatta_krashi_problem-8 bhatta_krashi_problem-4 bhatta_krashi_problem-1 bhatta_krashi_problem-3 bhatta_krashi_problem-5 bhatta_krashi_problem-9

ನಾಡಾ ಪಡುಕೋಣೆ ಭಾಗದಲ್ಲಿ ಶ್ರೀ ಪದ್ಧತಿಯನ್ನು ಕೃಷಿ ಇಲಾಖೆಯ ಸಹಕಾರದಲ್ಲಿ ಭತ್ತದ ಕೃಷಿ ಮಾಡಲಾಗುತ್ತಿತ್ತು. ನಾಡಾ, ಪಡುಕೋಣೆ, ಹಡವು, ಮಾರಸ್ವಾಮೀ ಭಾಗದ ಐನೂರಕ್ಕೂ ಅಧಿಕ ಎಕರೇ ಭೂಮಿಯಲ್ಲಿ ಎಮ್-ಓ-4 ಎನ್ನುವ ಭತ್ತದ ತಳಿಯ ಕೃಷಿ ಉತ್ತಮವಾಗಿಯೇ ಇಷ್ಟು ವರ್ಷ ಬೆಳೆಯಲಾಗ್ತಿತ್ತು. ಅದರೇ ಈ ವರ್ಷ ಮಾತ್ರ ಕಾಡಿಗೆ ರೋಗ ಎನ್ನುವಂತ ವಿಚಿತ್ರ ರೋಗ ಈ ಭಾಗಕ್ಕೆ ಆವರಿಸಿದೆ. ಈ ಕಾಯಿಲೆಯಿಂದ ನೂರಕ್ಕೆ ಇಪ್ಪತ್ತು ಭಾಗ ಭತ್ತದ ಬೆಳೆ ಹಾನಿಯಾಗಿದೆ. ಎಂಓ4 ಎನ್ನುವ ತಳಿಯ ಬೀಜವನ್ನು ಕೃಷಿ ಇಲಾಖೆಯಿಂದಲೇ ಪಡೆದಿದ್ದು ಬೀಜದ ದೌರ್ಬಲ್ಯ ಅಥವಾ ಕಳಪೆ ಗುಣಮಟ್ಟದ ಬೀಜದ ವಿತರಣೆಯನ್ನು ಈ ಭಾಗಕ್ಕೆ ಮಾಡಲಾಗಿದೆ ಎನ್ನುವ ಆರೋಪ ರೈತರಿಂದ ಕೇಳಿಬಂದಿದ್ದು ಅದರಿಂದಲೇ ಈ ರೋಗ ಕಾಡುತ್ತಿದೆ ಎನ್ನುವ ಅಭಿಪ್ರಾಯ ರೈತರು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೇ ಎಂಓ೪ ಭತ್ತದ ತಳಿಗೆ ರೋಗನಿರೋಧಕ ಶಕ್ತಿ ಜಾಸ್ಥಿಯಿದ್ದು ಈ ತಳಿಯ ಬೆಳೆಗೆ ಕಾಡಿಗೆ ರೋಗವು ಬರುವುದು ತುಂಬಾ ಅಪರೂಪ. ವಾತಾವರಣದಲ್ಲಿನ ವೈಪರಿತ್ಯದಿಂದಾಗಿ ಇಂತಹಾ ರೋಗವು ಬರುವ ಸಾಧ್ಯತೆ ಇದೆ ಎನ್ನುತ್ತಾರೆ. ಈ ಮೊದಲೆಲ್ಲಾ ಬೆರೆಲ್ಲಾ ಭಾಗಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿತ್ತು. ಅದರಲ್ಲಿನ ದೂಳಿನ ಮಾಧರಿಯ ವಸ್ತುವನ್ನು ಹಣೆಗೆ ಹಚ್ಚಿಕೊಳ್ಳುವ ರೈತರು ಗಂಧವೆಂದು ಇದನ್ನು ಕರೆಯುತ್ತಿದ್ರು. ಹೀಗಾಗಿ ಅದಕ್ಕೆ ಕುಂದಾಪುರ ಆಡುಭಾಷೆಯಲ್ಲಿ ಗಂಧ ಅಥವಾ ನಾಮ ಕಟ್ಟುವುದು ಎಂದು ಕರೆಯುತ್ತಿದ್ರು.

ಒಟ್ಟಿನಲ್ಲಿ ರೈತರು ಆರೋಪಿಸಿದ ಹಾಗೆ ಇದು ಕಳಪೆ ಬೀಜ ವಿತರಣೆಯಲ್ಲಿಯೇ ಆದ ಯಡವಟ್ಟೆ ಅಥವಾ ವಾತಾವರನದ ವೈಪರಿತ್ಯವೇ ಎಂಬುದು ನುರಿತರೇ ಹೇಳಬೇಕಿದೆ. ಆದರೇ ಎಂದೂ ಇಲ್ಲದೇ ಇಂದು ಬಂದೆರಿಗಿದ ಕಾಡಿಗೆ ರೋಗಕ್ಕೆ ಕೃಷಿಕರು ಮಾತ್ರ ಕಂಗಾಲಾಗಿದ್ದು ಸುಳ್ಳಲ್ಲ.

Comments are closed.