ಕುಂದಾಪುರ: ಬೈಂದೂರಿನ ಗಂಗನಾಡು ಎಂಬಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿ ಗಂಡ-ಹೆಂಡತಿ ಗಂಭೀರವಾಗಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಅಶ್ವಿನ್ ಕುಮಾರ್ ಹೆಬ್ಬಾರ್ ( 16 ) ಐಶ್ವರ್ಯಲಕ್ಷ್ಮೀ ಹೆಬ್ಬಾರ್ ( 14 ) ಮೃತಪಟ್ಟ ಮಕ್ಕಳು. ಇವರು ಬೈಂದೂರು ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
( ಮೃತ ಅಶ್ವಿನ್ ಕುಮಾರ್ ಹೆಬ್ಬಾರ್, ಐಶ್ವರ್ಯಲಕ್ಷ್ಮೀ ಹೆಬ್ಬಾರ್)
ತಂದೆ ಶಂಕರ ನಾರಾಯಣ ಹೆಬ್ಬಾರ್, ತಾಯಿ ಮಹಾಲಕ್ಷ್ಮೀ ಗಂಭೀರಗೊಂಡಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಸದ್ಯ ಅವರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ತಡರಾತ್ರಿ ಮಕ್ಕಳಿಗೆ ವಿಷವುಣಿಸಿದ ಬಗ್ಗೆ ಮಾಹಿತಿಯಿದ್ದು ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.