ಕರಾವಳಿ

ಗ್ರಾಹಕ ಸೇವೆಯಲ್ಲಿ ತೃತೀಯ ಸ್ಥಾನ ಪಡೆದ ಮಂಗಳೂರು ವಿಮಾನ ನಿಲ್ದಾಣ

Pinterest LinkedIn Tumblr

airport_mangalore_2

ಮಂಗಳೂರು, ಅ.15: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಗ್ರಾಹಕ ಸೇವೆಯಲ್ಲಿ ದೇಶದಲ್ಲೇ ಮೂರನೆ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ನಡೆದ ಸಮೀಕ್ಷೆಯಲ್ಲಿ ಇದು ತಿಳಿದು ಬಂದಿದೆ.

2016ರ ಜುಲೈನಿಂದ ಡಿಸೆಂಬರ್ ವರೆಗಿನ ಸರ್ವೇ ಕಾರ್ಯದಲ್ಲಿ ಗ್ರಾಹಕ ಸೇವಾ ವಿಭಾಗದಲ್ಲಿ ಮಂಗಳೂರು ವಿಮಾನ ನಿಲ್ದಾಣ ಈ ಸ್ಥಾನ ಪಡೆದುಕೊಂಡಿದೆ. ಚಂಡಿಗಡ ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ರಾಯಪುರ ಎರಡನೆ ಸ್ಥಾನ ಗಳಿಸಿದೆ.

ದೇಶದ 52 ವಿಮಾನ ನಿಲ್ದಾಣಗಳ ಪೈಕಿ ಗ್ರಾಹಕ ಸೇವೆಗೆ ಸಂಬಂಧಿಸಿ ದಂತೆ ನಿಗದಿಪಡಿಸಲಾದ ಒಟ್ಟು 5 ಅಂಕಗಳಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು 4.72 ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಗಳಿಸಿದೆ. ಚಂಡಿಗಡ 4.86 ಅಂಕ ಮತ್ತು ರಾಯಪುರ 4.82 ಅಂಕಗಳನ್ನು ಗಳಿಸಿವೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.