ಕರಾವಳಿ

2ನೇ ಹಂತದ ಕಾಮಗಾರಿ ಅರಂಭ : ಅ.15ರಿಂದ ಶಿರಾಡಿ ಘಾಟ್ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ.

Pinterest LinkedIn Tumblr

SHIRADI

ಮಂಗಳೂರು: 155 ಕೋಟಿ ರು. ವೆಚ್ಚದಲ್ಲಿ 2ನೇ ಹಂತದ ಕಾಮಗಾರಿಯನ್ನು ಪ್ರಾರಂಭಿಸುವ ಹಿನ್ನೆಲೆಯಲ್ಲಿ ಅಕ್ಟೋಬರ್.15ರಿಂದ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕಾಮಗಾರಿಗೆ ಬೇಕಾಗುವ ಜಲ್ಲಿ, ಸಿಮೆಂಟ್, ಕಬ್ಬಿಣ ಸೇರಿದಂತೆ ನಾನಾ ಸಲಕರಣೆಗಳ ದಾಸ್ತಾನು ಮಾಡಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮುಖ್ಯ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ. ಇದರಿಂದ ಅಕ್ಟೋಬರ್. 15ರಿಂದ ರಸ್ತೆ ಸಂಚಾರ ಸ್ಥಗಿತಗೊಳಿಸಲು ಯೋಚಿಸಿದ್ದು. ಪೂರ್ಣ ಪ್ರಮಾಣದ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು- ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಹೊಸ ಕಾಂಕ್ರೀಟ್ ರಸ್ತೆ 8.5 ಮೀ ಅಗಲವಿರಲಿದೆ.

ಜತೆಗೆ ಅಡ್ಡಹೊಳೆಯಿಂದ 21ಕಿಮೀ ವರೆಗಿನ ರಸ್ತೆಯನ್ನು ಡಾಂಬರೀಕರಣವನ್ನು ಕಾಮಗಾರಿಯನ್ನು ಇದೇ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಈ ಕಾಮಗಾರಿ ಜನವರಿಯಿಂದ ಆರಂಭಗೊಳ್ಳಬೇಕಿದ್ದರೂ 10 ತಿಂಗಳು ವಿಳಂಬವಾಗಿದೆ. ಈಗಾಗಲೇ ಪ್ರಥಮ ಹಂತದಲ್ಲಿ ಕೆಂಪುಹೊಳೆಯಿಂದ ಗುಂಡ್ಯ ಸಮೀಪದ ಅಡ್ಡಹೊಳೆ ವರೆಗೆ 12ಕಿ.ಮೀ ರಸ್ತೆ ಕಾಂಕ್ರೀಟೀಕರಣವಾಗಿದೆ. ಚೆನ್ನೈನ ಜಿವಿಆರ್ ಕಂಪನಿ 155 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಸಲು ಗುತ್ತಿಗೆ ಪಡೆದುಕೊಂಡಿದೆ.

Comments are closed.