ಕರಾವಳಿ

ಗಂಡನ ಹುಡುಕಲು ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ

Pinterest LinkedIn Tumblr

ಉಡುಪಿ: ಉಡುಪಿ ತಾಲೂಕು ಕೋಟೆ ಹೋಬಳಿಯ ಉದ್ಯಾವರದ ಸಾವಿತ್ರಿ ಪೂಜಾರಿಯವರ ಪತಿ ಸುಮಾರು 41 ವರ್ಷ ಪ್ರಾಯದ ಹರಿಶ್ಚಂದ್ರ ಕೋಟ್ಯಾನ್ ಎಂಬವರು ಸೆಪ್ಟೆಂಬರ್ 9 ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸು ಬಾರದೆ ಕಾಣೆಯಾಗಿದ್ದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

harishchandra

ಕಾಣೆಯಾದ ಹರಿಶ್ಚಂದ್ರ ಅವರು ೫ ಅಡಿ ಉದ್ದ ಇದ್ದು, ಕಪ್ಪು ಮೈಬಣ್ಣ, ತುಳು, ಕನ್ನಡ ಭಾಷೆ ಬಲ್ಲವರಾಗಿರುತ್ತಾರೆ ಹಾಗೂ ಬಿಳಿ ನೀಲಿ ಚೆಕ್ಸ್ ಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆಯನ್ನು ಅಥವಾ ದೂರವಾಣಿ ಸಂಖ್ಯೆ 0820-2551033 ಅಥವಾ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿದೂರವಾಣಿ ಸಂಖ್ಯೆ 0820-2520333, 9480805431ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Comments are closed.