ಕರಾವಳಿ

ಕಂಡ ಕಂಡಲ್ಲಿ ಬಸ್‌ಗಳಿಗೆ ಕೈ ತೋರಿಸಿ ನಿಲ್ಲಿಸ ಬೇಡಿ : ಸಾರ್ವಜನಿಕರಿಗೆ ಪೊಲೀಸ್ ಕಮಿಷನರ್ ಸೂಚನೆ

Pinterest LinkedIn Tumblr

trafic_wardan_day_1

ಮಂಗಳೂರು,ಅ.3: ಸಂಚಾರ ನಿಯಮವನ್ನು ಸರಿಯಾಗಿ ಪಾಲನೆ ಮಾಡದೇ ಇರುವುದರಿಂದ ಶೇ.99ರಷ್ಟು ಅಪಘಾತಗಳು ನಡೆಯುತ್ತಿದೆ. ಅಪಘಾತದಲ್ಲಿ ಬಸ್ ಚಾಲಕರಷ್ಟೇ ಪ್ರಯಾಣಿಕರ ಪಾತ್ರವೂ ಇದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಸ್. ಚಂದ್ರಶೇಖರ್ ಹೇಳಿದರು.

ಮಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದ ವತಿಯಿಂದ ಬಾನುವಾರ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಹಾಗೂ ಸಂಚಾರಿ ವಾರ್ಡನ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸ್ ತಂಗುದಾಣವಿದ್ದರೂ ಕಂಡ ಕಂಡಲ್ಲಿ ಬಸ್ ಗಳಿಗೆ ಕೈ ತೋರಿಸಿ ನಿಲ್ಲಿಸುವುದನ್ನು ಪ್ರಯಾಣಿಕರು ಮೊದಲು ನಿಲ್ಲಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

trafic_wardan_day_2 trafic_wardan_day_3 trafic_wardan_day_4 trafic_wardan_day_5

ಮಣಿಪಾಲ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಬಿ.ಎಂ.ಹೆಗ್ಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮನುಷ್ಯನ ಅಹಂಕಾರದ ಹೆಚ್ಚಳದಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾದ ಅವಶ್ಯಕತೆ ಇದೆ ಎಂದರು.

ಹೆಲ್ಮೆಟ್, ಸೀಟ್ ಬೆಲ್ಟ್ ಹಾಕಿಕೊಳ್ಳದೇ ಪ್ರಯಾಣಿಸುವುದು, ಸೂಚಕ ಫಲಕಗಳನ್ನು ಸರಿಯಾಗಿ ಪಾಲನೆ ಮಾಡದೇ ಮನಸ್ಸು ಬಂದಲ್ಲಿ ಗಾಡಿ ತಿರುಗಿಸಿಕೊಂಡು ಹೋಗಿ ಅಪಘಾತ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ವಾಹನ ಚಾಲಕರು ಸಂಚಾರ ನಿಯಮ ಪಾಲನೆ ಮಾಡಲು ಹೆಚ್ಚು ಗಮನ ನೀಡಬೇಕು ಎಂದರು.

trafic_wardan_day_6 trafic_wardan_day_7 trafic_wardan_day_8 trafic_wardan_day_9 trafic_wardan_day_10 trafic_wardan_day_11

ಕಾರ್ಯಕ್ರಮದಲ್ಲಿ ಟ್ರಾಫಿಕ್ ವಾರ್ಡನ್ ರೋಶನ್ , ಡಿಸಿಪಿ ಸಂಜೀವ್ ಎಂ.ಪಾಟೀಲ್, ಡಿಸಿಪಿ ಶಾಂತರಾಜು, ಹಿರಿಯ ಟ್ರಾಫಿಕ್ ವಾರ್ಡನ್ ಜೆ.ಜೆ. ಗೋನ್ಸಾಲ್ವೆಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಮತ್ತಿತರರು ಉಪಸ್ಥಿತರಿದ್ದರು.

Comments are closed.