ಕರಾವಳಿ

ಉಳ್ಳಾಲ : ಮೀನೀನ ತಲೆ (ಮುಟ್ಟೆ) ಮಾಂಸ ತಿಂದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು

Pinterest LinkedIn Tumblr

ullala_fish_problum_1

ಮಂಗಳೂರು / ಉಳ್ಳಾಲ,ಸೆಪ್ಟಂಬರ್.01 : ಮೀನೀನ ತಲೆ (ಮಂಡೆ) ಮಾಂಸ ತಿಂದ ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಉಳ್ಳಾಲ ಪರಿಸರದಲ್ಲಿ ನಡೆದಿದ್ದು, ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಉಳ್ಳಾಲದಲ್ಲಿರುವ ಬರಾಕಾ ಮೀನಿನ ಕಾರ್ಖಾನೆಯ 200ರಷ್ಟು ಕಾರ್ಮಿಕರು ಸಹಿತ ನಾಟೆಕಲ್ ಹಾಗೂ ಉಳ್ಳಾಲದ ಮನೆಮಂದಿ ಮೀನಿನ ತಲೆ ಮಾಂಸ ತಿಂದು ಅಸ್ವಸ್ಥರಾಗಿ ತೊಕ್ಕೊಟ್ಟು ಸಹಿತ ದೇರಳಕಟ್ಟೆಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಈ ಪೈಕಿ ಒಂದೇ ಮನೆಯ ನಾಲ್ವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ullala_fish_problum_2

ಉಳ್ಳಾಲದಲ್ಲಿರುವ ಫಿಶ್ ಮಿಲ್‍ನಲ್ಲಿ ಇರುವ ಸುಮಾರು 200 ರಷ್ಟು ಕಾರ್ಮಿಕರು ಶುಕ್ರವಾರ ರಾತ್ರಿ ಊಟ ಮುಗಿಸಿದ ಬಳಿಕ ಅಸ್ವಸ್ಥಗೊಂಡಿದ್ದರು. ಕೈಕಾಲುಗಳ ಸೆಳೆತ ಮತ್ತು ಬೇಧಿ ಆರಂಭಗೊಂಡಿತ್ತು. ಹಲವರಲ್ಲಿ ಒಂದೇ ತರದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಲವು ಕಾರ್ಮಿಕ ಯುವತಿಯರು ಸೇರಿದಂತೆ ಯುವಕರನ್ನು ತೊಕ್ಕೊಟ್ಟು ಸಹಿತ ದೇರಳಕಟ್ಟೆಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ullala_fish_problum_3

ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ ಹಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದಾರೆ. 50 ರಷ್ಟು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀನಿನ ತಲೆಯ ಭಾಗದ ಪದಾರ್ಥವನ್ನು ಸೇವಿಸಿದ ನಂತರ ಎಲ್ಲರೂ ಅಸ್ವಸ್ಥಗೊಂಡಿದ್ದಾರೆನ್ನಲಾಗಿದೆ ಎನ್ನಲಾಗಿದೆ.

ullala_fish_problum_4

ಇದೇ ಮೀನನ್ನು ಮಂಗಳೂರಿನ ಧಕ್ಕೆಯಿಂದ ಖರೀದಿಸಿ ಸೇವಿಸಿದ ನಾಟೆಕಲ್ ಉರುಮಣೆ ನಿವಾಸಿ ಒಂದೇ ಕುಟುಂಬದ ನಾಲ್ವರು ದೇರಳಕಟ್ಟೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ನಿವಾಸಿ ಮನೆಯೊಂದರ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದು ಬಂದಿದೆ.

Comments are closed.