
ಮ೦ಗಳೂರು, ಸೆಪ್ಟಂಬರ್.25 : ಪಿಲಿಕುಳ ನಿಸರ್ಗಧಾಮದ ಉದ್ಯಾನದ 10 ಎಕೆರೆ ವಿಶಾಲವಾದ ಕೆರೆಯಲ್ಲಿ ಕಟ್ಲ, ಕಾರ್ಪ್, ರೋವು ಇತ್ಯಾದಿ ತಳಿಯ 30,000 ಮೀನುಮರಿಗಳನ್ನು ಸೆಪ್ಟಂಬರ್ 24ರಂದು ನೀರಿಗೆ ಬಿಡಲಾಯಿತು. ಕಾರ್ಯಕ್ರಮವನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಯಿತು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಗಣೇಶ್ ಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಮೀನುಗಾರಿಕಾ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಈಗಾಗಲೇ ಈ ಕೆರೆಯಲ್ಲಿ ವಿವಿಧ ಜಾತಿಯ ಸುಮಾರು 1 ಲಕ್ಷಕ್ಕೂ ಮೀರಿ ವಿವಿಧ ತಳಿಯ ಮೀನುಗಳಿರುವುದಾಗಿ ಅಂದಾಜಿಸಲಾಗಿದೆ. ಪಿಲಿಕುಳದಿಂದ ನೊಂದಾಯಿತ ಸದಸ್ಯರಿಗೆ ಗಾಳಶಿಕಾರಿ(ಆಂಗ್ಲಿಂಗ್) ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Comments are closed.