ಕರಾವಳಿ

ಕಾವೇರಿ ವಿಚಾರದಲ್ಲಿ ಅಧಿಕಾರ ತ್ಯಾಗಕ್ಕೂ ಸಿದ್ಧರಾಗಬೇಕು: ಪಕ್ಷಾತೀತವಾದ ಹೋರಾಟ ಆಗಲಿ: ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸುವ ಧೈರ್ಯ ರಾಜ್ಯ ಸರ್ಕಾರ ಮಾಡಬೇಕು. ಸರ್ಕಾರ ಪತನವಾದರೂ ಎಲ್ಲದಕ್ಕೂ ಸಿದ್ದರಾಗಬೇಕಿದೆ. ಸುಪ್ರೀಂ ಕೋರ್ಟ್ ಆದೇಶ ಮೀರಿದರೆ ಧಕ್ಕೆ ಬರಬಹುದು ಹೋರಾಟಕ್ಕೂ, ಅಧಿಕಾರ ತ್ಯಾಗಕ್ಕೂ ಸಿದ್ದರಾಗಬೇಕಿದೆ ಎಂದು ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಶ್ರೀ ಹೇಳಿಕೆ ನೀಡಿದ್ದಾರೆ.

Pejavara Shri_Aanegudde_Sanmana (25)

ಕಾವೇರಿ ಮೇಲುಸ್ತುವಾರಿ ಸಮಿತಿ, ಸುಪ್ರೀಂಕೋರ್ಟ್ ನಲ್ಲೂ ವಿರುದ್ಧ ತೀರ್ಪು ಬಂದಿದೆ. ಸ್ಥಳ ಪರಿಶೀಲನೆ ಮಾಡಿ ನೀರಿನ ಪ್ರಮಾಣ ಗಮನಿಸದೇ ಸುಪ್ರೀಂ ತೀರ್ಪು ನೀಡಿದೆ ಸರಿಯಾಗಿ ಪರಿಶೀಲನೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಆದೇಶ ಉಲ್ಲಂಘನೆ ಮಾಡುವುದು ಬಿಟ್ಟು ಬೇರೆ ಮಾರ್ಗ ಕಾಣಿಸುತ್ತಿಲ್ಲ, ರಾಜ್ಯದಲ್ಲಿನ ತಮಿಳಿಗರಿಗೆ ಯಾವುದೇ ಹಿಂಸೆಯಾಗಬಾರದು ಹಿಂಸಾತ್ಮಕ ಹೋರಾಟ ಬೇಡ, ಶಾಂತಿಯುತ ಹೋರಾಟ ನಡೆಯಬೇಕು. ರಾಷ್ಟ್ರಪತಿ ಆಳ್ವಿಕೆಗೂ ರಾಜ್ಯ ಸರ್ಕಾರ ಸಿದ್ದವಾಗಬೇಕು. ಸುಪ್ರೀಂ ಆದೇಶ ಉಲ್ಲಂಘನೆಯಾಗದೇ ಸಮಸ್ಯೆ ಪರಿಹಾರಕ್ಕೆ ಉಪಾಯ ಹುಡುಕಬೇಕು ಎಂದು ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಶ್ರೀಗಳ ಸಲಹೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಾವೇರಿ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಿದರೆ ಒಳ್ಳೆಯದು. ಆದ್ರೆ ಸುಪ್ರೀಂ ಕೋರ್ಟ್ ಪ್ರಧಾನಿ ಮಾತನ್ನು ಕೇಳುವುದಿಲ್ಲ. ಸುಪ್ರೀಂ ಕೋರ್ಟ್ ನಿರ್ಣಯಕ್ಕೆ ಮುನ್ನ ಪ್ರವೇಶ ಮಾಡಿದ್ದರೆ ಒಳ್ಳೆಯದಿತ್ತು. ಆದೇಶ ಮಾಡಿದ ಮೇಲೆ ಏನೂ ಮಾಡಲು ಆಗದು. ರಾಷ್ಟ್ರಪತಿ ಆಳ್ವಿಕೆ ಬಾರದಂತೆ ಸರ್ಕಾರ ಎಚ್ಚರ ವಹಿಸಿ ಮುನ್ನೆಡೆಯಲಿ. ಕೇಂದ್ರ ಸರ್ಕಾರ ಸಂಧಾನದ ಮೂಲಕ ಸಮಸ್ಯೆ ಪರಿಹರಿಸಲು ಯತ್ನಿಸಬೇಕು. ರಾಜ್ಯದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಟ್ಟಾಗಿ ಹೋರಾಡಬೇಕು ಇದೊಂದೇ ಈಗ ಉಳಿದಿರುವ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Comments are closed.