ಕುಂದಾಪುರ: ಮನೆಜಾಗದ ತಕರಾರಿನ ಸಂಬಂಧ ಅಂಗವಿಕಲನ ಮೇಲೆ ಮಾರಕ ಹಲ್ಲೆ ನಡೆಸಿದ ಘಟನೆ ಸಮೀಪದ ಕಂಡ್ಲೂರಿನಲ್ಲಿ ನಡೆದಿದೆ.

ಹಲ್ಲೆಗೊಳಗಾಗಿ ಕುಂದಾಪುರ ಸರ್ಕಾರಿ ಅಸ್ಪತ್ರೆಯಲ್ಲಿ ದಾಖಲಾಗಿರುವವನೇ ಅಂಗವಿಕಲ ನಾಗಮೊಗವೀರ(65). ಕಂಡ್ಲೂರಿನಲ್ಲಿ ತನ್ನ ಹೆಂಡತಿ ಸಾಧು ಮೊಗವೀರಳಿಗೆ ಸೇರಿದ ಮನೆಯಲ್ಲಿ ನಾಗಮೋಗವೀರ ವಾಸವಾಗಿದ್ದು, ಏರಡೂ ಕಾಲುಗಳಿಂದ ಹುಟ್ಟು ಶಕ್ತಿಹೀನನಾಗಿದ್ದಾರೆ. ನಾಗ ಅವರ ಪತ್ನಿಯ ಸಹೋದರಿಯ ಗಂಡ ಸಂಜೀವ ಮೊಗವೀರ ಹಾಗೂ ನಾಗಮೊಗವೀರನನಡುವೆ ಮನೆಜಾಗದ ಗಡಿಯ ಕುರಿತು ವಿವಾದವಿದ್ದು,ಆಗಾಗ್ಗೆ ಜಗಳವಾಗುತ್ತಿತ್ತು.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಜಗಳಕ್ಕೆ ಬಂದ ಸಂಜೀವ ,ತನ್ನ ಮಕ್ಕಳಾದ ಲೋಕೇಶ ಮತ್ತು ಸುಕೇಶನ ಜೊತೆ ಸೇರಿ ನಾಗನ ಮಗಳ ಮೇಲೆ ಹಲ್ಲೆ ನಡೆಸಿದ್ದು ಪ್ರಕರಣವು ಠಾಣೆಯ ಮಟ್ಟಿಲೇರಿದರೂ ತಮಗೆ ನ್ಯಾಯ ಸಿಗಲಿಲ್ಲವೆಂದು ನಾಗನ ಮನೆಯವರು ಆರೋಪಿಸಿದ್ದಾರೆ. ತದ ನಂತರ ವಿವಾದಿತ ಮನೆ ಗಡಿ ಭಾಗದ ಜಾಗದಲ್ಲಿ ಸರ್ವೇ ನಡೆದು ವಿಭಾಜಕದ ಗುರುತು ಗುರತು ಹಾಕಿದ್ದರೆನ್ನಲಾಗಿದೆ. ಆದರೆ ತಮಗೆ ಸೇರಿದ ಗಡಿಯಲ್ಲಿ ಸಂಜೀವಮೋಗವೀರ ಅಗೆತದಲ್ಲಿ ತೊಡಗಿದಾಗ ಇದಕ್ಕೆ ನಾಗ ಮೊಗವೀರ ಆಕ್ಷೇಪಿಸಿದ್ದೇ ಸಂಜೀವ ಕೆರಳಿ ವಾಚಾಮಗೋಚರವಾಗಿ ಬೈದಿದ್ದಲ್ಲದೆ ಮನೆಯೊಳಕ್ಕೆ ಹೋಗಿ ಸುತ್ತಿಗೆ ತಂದು ನಾಗಮೊಗವೀರನ ತಲೆಗೆ ಬಲವಾಗಿ ಬೀಸಿದ್ದ ಆದರೆ ಆ ಕೂಡಲೇ ಕೈ ಅಡ್ಡ ಮಾಡಿದ್ದರಿಂದ ಕೈಗೆ ಬಿದ್ದ ಹೊಡೆತ ದಿಂದಾಗಿ ನಾಗ ಮೊಗವೀರನ ಕೈ ಮೂಳೆ ಮುರಿತ ಉಂಟಾಗಿದೆ.
ಸಂಜೀವ ಮೊಗವೀರನ ಹಲ್ಲೆಯಿಂದ ಹಾಗೂ ಜೀವ ಭಯದಿಂದ ಪತರಗುಟ್ಟತ್ತ ಕುಂದಾಪುರ ಸರ್ಕಾರಿ ಅಸ್ಪತ್ರೆಯಲ್ಲಿ ದಾಖಲಾಗಿರುವ ನಾಗಮೊಗವೀರನ ಹೇಳಿಕೆಯನ್ನು ಪಡೆದಿರುವ ಕುಂದಾಪುರ ಪೋಲಿಸರು ಆರೋಪಿ ಸಂಜೀವ ಮೊಗವೀರನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ
Comments are closed.