ಕರಾವಳಿ

ತಮಿಳುನಾಡು ಬಂದ್: ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸರಿಂದ ತಮಿಳುನಾಡು ವಾಹನಗಳಿಗೆ ಭದ್ರತೆ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಉಡುಪಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದಲ್ಲಿ ನಡೆದ ಬಂದ್ ನ ಪ್ರತಿಯಾಗಿ ಶುಕ್ರವಾರ ತಮಿಳುನಾಡು ಬಂದ್ ನಡೆಸಲಾಗುತ್ತಿದೆ. ತಮಿಳುನಾಡು ಬಂದ್ ಸಂದರ್ಭ ಅಲ್ಲಿ ನೆಲೆಸಿರುವ ಕನ್ನಡಿಗರಿಗೆ ಅಥವಾ ಕರ್ನಾಟಕ ಮೂಲದ ವಾಹನಗಳಿಗೆ ಸಮಸ್ಯೆಯಾದಲ್ಲಿ ಅದರ ನೇರ ಪರಿಣಾಮ ಕರ್ನಾಟಕದಲ್ಲಿ ಆಗುವ ಸಂದರ್ಭವಿರುವ ಕಾರಣ ಪೊಲೀಸರು ಎಚ್ಚೆತ್ತುಕೊಂಡಿದ್ದು ಎಲ್ಲೆಡೆ ಆಯಾಯ ಠಾಣಾ ಸರಹದ್ದಿನಲ್ಲಿ ತಮಿಳುನಾಡು ನೋಂದಣಿ ಸಂಖ್ಯೆಯ ವಾಹನಗಳಿಗೆ ಭದ್ರತೆ ನೀಡಲಾಗುತ್ತಿದೆ.

 tamilunadu_vehicle_checking-2 tamilunadu_vehicle_checking-3 tamilunadu_vehicle_checking-4 tamilunadu_vehicle_checking-5 tamilunadu_vehicle_checking-6 tamilunadu_vehicle_checking-7 tamilunadu_vehicle_checking-8

tamilunadu_vehicle_checking-1

tamilunadu_vehicle_checking-9 tamilunadu_vehicle_checking-10

ಶುಕ್ರವಾರ ಬೆಳಿಗ್ಗೆನಿಂದಲೇ ಕುಂದಾಪುರ ತಾಲ್ಲೂಕಿನ ಗಡಿ ಪ್ರದೇಶವಾದ ಶಿರೂರು ಭಾಗದಿಂದ ಒಳಗೊಂಡು ಆಯಾಯ ಪೊಲಿಸ್ ಠಾಣ ಸರಹದ್ದಿನಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ತಮಿಳುನಾಡು ನೊಂದಣಿ ಸಂಖ್ಯೆಯ ವಾಹನಗಳನ್ನು ತಡೆದು ನಿಲ್ಲಿಸಿ ವಾಹನದ ನೊಂದಣಿ ಸಂಖ್ಯೆ, ವಾಹನ ತೆರಳುವ ಸ್ಥಳದ ಬಗ್ಗೆ ವಿವರ ಪಡೆದು, ಚಾಲಕನ ವಿವರ ಹಾಗೂ ಮೊಬೈಲ್ ಸಂಖ್ಯೆ ಪಡೆದು ಬಳಿಕ ವಾಹನವನ್ನು ಮುಂದಕ್ಕೆ ತೆರಳಲು ಅನುವು ಮಾಡಿಕೊಡುತ್ತಿದ್ದರು. ಒಂದು ಠಾಣೆಯ ಗಡಿ ಮುಗಿದ ಬಳಿಕ ಅದೇ ಪ್ರಕ್ರಿಯೆಯನ್ನು ಇನ್ನೊಂದು ಠಾಣೆ ಪೊಲೀಸರು ಮಾಡುವ ಮೂಲಕ ತಮಿಳುನಾಡು ಮೂಲದ ವಾಹನಗಳನ್ನು ತಮ್ಮ ತಮ್ಮ ಗಡಿ ದಾಟಿಸಿ ಭದ್ರತೆ ನೀಡುತ್ತಿರುವ ದ್ರಶ್ಯ ಕಂಡುಬಂದಿತು.

ಕುಂದಾಪುರ ಡಿವೈಎಸ್ಪಿ ಪ್ರವೀಣ ನಾಯಕ್ ಮಾರ್ಗದರ್ಶನದಲ್ಲಿ ಶಿರೂರಿನಿಂದ ನಾಗೂರು ಭಾಗದವರೆಗೆ ಬೈಂದೂರು ಪೊಲೀಸರು, ನಾಗೂರಿನಿಂದ ಹೆಮ್ಮಾಡಿವರೆಗೆ ಗಂಗೊಳ್ಳಿ ಪೊಲೀಸರು, ಹೆಮ್ಮಾಡಿಯಿಂದ ಕುಂಭಾಶಿಯವರೆಗೆ ಕುಂದಾಪುರ ಪೊಲೀಸರು ಭದ್ರತೆ ಏರ್ಪಡಿಸಿದ್ದರು. ಕುಂಭಾಶಿಯಿಂದ ಮಾಬುಕಳ ಸೇತುವೆ ತನಕ ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕ ಕಬ್ಬಾಳರಾಜ್ ನೇತ್ರತ್ವದಲ್ಲಿ ಭದ್ರತ ತಪಾಸಣೆ ಒದಗಿಸಲಾಗಿತ್ತು. ಉಳಿದಂತೆ ಆಯಾಯ ಠಾಣೆ ಪೊಲಿಸರು ಈ ಪ್ರಕ್ರಿಯೆ ನಡೆಸುತ್ತಿದ್ದಾರೆ. ಸರಕು ಸಾಗಣೆಯ ವಾಹನಗಳು ಹಾಗೂ ಅನಿಲ ಟ್ಯಾಂಕರುಗಳು ಭಾಗಷ: ತಪಾಸಣೆಗೊಳಪಟ್ಟಿದ್ದವು.

Comments are closed.