ಕರಾವಳಿ

ಕಟೀಲು ದುರ್ಗಾದೇವಿಗೆ ಅವಹೇಳನ ಪ್ರಕರಣ : ಫೇಸ್‍ಬುಕ್ ಕಂಪೆನಿಗೆ ಮೂರನೇ ನೋಟಿಸ್

Pinterest LinkedIn Tumblr

commissione_meet_2

ಮಂಗಳೂರು, ಸೆಪ್ಟೆಂಬರ್ 15: ಸಾಮಾಜಿಕ ಜಾಲತಾಣದಲ್ಲಿ ಕಟೀಲು ದುರ್ಗಾಪರಮೇಶ್ವರಿ ಅವಹೇಳನ ಮಾಡಿದ ಪ್ರಕರಣ ತನಿಖೆಗೆ ಅಗತ್ಯವಿರುವ ಮಾಹಿತಿ ಹಂಚಿಕೊಳ್ಳುವಂತೆ ಫೇಸ್ಬುಕ್ ಕಂಪೆನಿಗೆ ಮೂರನೇ ನೋಟಿಸ್ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

‘ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ತನಿಖೆಗೆ ಸಹಕಾರ ನೀಡುವಂತೆ ಫೇಸ್ಬುಕ್ ಕಂಪೆನಿಗೆ ಎರಡು ನೋಟಿಸ್ ಕಳುಹಿಸಲಾಗಿತ್ತು. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೀಗ ಮೂರನೇ ನೋಟಿಸ್ ಕಳುಹಿಸಿದ್ದು, ಪ್ರತಿಕ್ರಿಯೆ ನೀಡದಿದ್ದರೆ ಕಾನೂನಿನ ವ್ಯಾಪ್ತಿಯಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದರು.

‘ಫೇಸ್ಬುಕ್ ದೊಡ್ಡ ಕಂಪೆನಿ ಇರಬಹುದು. ಆದರೆ, ಸಾಮಾಜಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವುದು, ದೇಶದ ಸಮಗ್ರತೆ ಮತ್ತು ಏಕತೆಗಿಂತ ಅದು ದೊಡ್ಡದಲ್ಲ. ಹಿಂದೆಯೂ ಹಲವು ಪ್ರಕರಣಗಳಲ್ಲಿ ಕಂಪೆನಿ ತನಿಖೆಗೆ ಸಹಕಾರ ನೀಡಿಲ್ಲ. ಕೆಲವು ದಿನಗಳವರೆಗೆ ಕಾಯುತ್ತೇವೆ. ಬಳಿಕ ಪ್ರಕರಣವನ್ನು ಕಾನೂನಿನ ವ್ಯಾಪ್ತಿಯಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿರ್ಧಾರವನ್ನು ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

Comments are closed.