
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಕನ್ನಡ ಚಿತ್ರರಂಗದ ಸ್ಟಾರ್ ಗಳು ದನಿ ನೀಡಿರುವ ಹಾಡುಗಳಿಗೆ ಸುದ್ದಿಯಾಗಿರುವ, ಯುವ ನಿರ್ದೇಶಕ ರಂಜಿತ್ ಸುವರ್ಣ ಚೊಚ್ಚಲ ನಿರ್ದೇಶನದ ಮತ್ತು ಕನ್ನಡ ಚಿತ್ರರಂಗದ ಪ್ರಖ್ಯಾತ ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ನಿರ್ಮಾಣದ ಬಹುನಿರೀಕ್ಷಿತ “ದೊಂಬರಾಟ: ತುಳು ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಇದೇ ಮೊದಲ ಬಾರಿಗೆ ಬರೋಬ್ಬರಿ 100 ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಪ್ರದರ್ಶನ ಕಂಡಿದೆ.
ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಗುರುವಾರ ಬೆಳಿಗ್ಗೆ ಅಯೋಜಿಸಲಾದ ಸರಳ ಸಮಾರಂಭದಲ್ಲಿ ತುಳು ಚಿತ್ರರಂಗದ ಗಣ್ಯರು ದೀಪ ಬೆಳಗಿಸುವ ಮೂಲಕ “ದೊಂಬರಾಟ: ತುಳು ಚಿತ್ರಕ್ಕೆ ಚಾಲನೆ ನೀಡಿ ಶುಭಾ ಕೋರಿದರು.

ಸಮಾರಂಭದಲ್ಲಿ ನಿರ್ಮಾಪಕ, ನಿರ್ದೇಶಕ ಹಾಗೂ ಚಿತ್ರರಂಗ ಮತ್ತು ರಂಗಭೂಮಿಯ ಖ್ಯಾತ ಕಲಾವಿದ ದೇವದಾಸ್ ಕಾಪಿಕಾಡ್, ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ರಿಚರ್ಡ್ ಕ್ಯಾಸ್ಟೋಲಿನ್, ನಿರ್ಮಾಪಕರಾದ ಲಯನ್ ಕಿಶೋರ್ ಡಿ.ಶೆಟ್ಟಿ, ಮೇಗಿನ ಮನೆ ಬಾಲಕೃಷ್ಣ ಶೆಟ್ಟಿ, ಶ್ರೀಮತಿ ಶರ್ಮಿಳಾ ಕಾಪಿಕಾಡ್, ದೇವದಾಸ್ ಪಾಂಡೇಶ್ವರ್, ಪ್ರಕಾಶ್ ಪಾಂಡೇಶ್ವರ್, ಗಂಗಾಧರ್ ಶೆಟ್ಟಿ, ಪಮ್ಮಿ ಕೊಡಿಯಾಲ್ ಬೈಲ್, ನಿರ್ದೇಶಕ ಸಾಯಿ ಕೃಷ್ಣ ಕುಡ್ಲ, ತುಳು ಹಾಗೂ ಕನ್ನಡ ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್, ಕಲಾಪೋಷಕರಾದ ಸುಧಾಕರ್ ಬನ್ನಂಜೆ, ತಮ್ಮ ಲಕ್ಷ್ಮಣ್, ವಿಜಯ ಕುಮಾರ್ ಶೆಟ್ಟಿ ಮುಂಬಾಯಿ, ಮೋಹನ್ ಕೊಪ್ಪಳ ಮುಂತಾದವರು ಅತಿಥಿಗಳಾಗಿದ್ದರು.
ಚಿತ್ರದ ನಾಯಕ ನಟ ಅಮಿತ್ ರಾವ್, ನಾಯಕಿ ನಟಿಯರಾದ ಭವ್ಯ, ಪೂಜಾಶೆಟ್ಟಿ, ನೀಮಾ ಹಾಗೂ ಮತ್ತಿತ್ತರ ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚಿತ್ರದ ನಿರ್ದೇಶಕ ರಂಜಿತ್ ಸುವರ್ಣ ಸ್ವಾಗತಿಸಿದರು. ನಿರ್ಮಾಪಕ ರಾಜೇಶ್ ಬ್ರಹ್ಮಾವರ್ ವಂದಿಸಿದರು. ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


ಕೌಟುಂಬಿಕ ಹಿನ್ನೆಲೆಯ ಹಾಸ್ಯಮಯ ಚಿತ್ರ :
ಪರಿಶುದ್ಧವಾದ ಹಾಸ್ಯ ಮತ್ತು ಕೌಟುಂಬಿಕ ಹಿನ್ನೆಲೆಯ ಕಥೆ ಹೊಂದಿರುವ ಚಿತ್ರದಲ್ಲಿ ನಾಯಕ ದ್ವಿಪಾತ್ರಧಾರಿಯಾಗಿದ್ದು, ಕೋಸ್ಟಲ್ ವುಡ್‌ನ ಮಟ್ಟಿಗೆ ಇದೊಂದು ವಿಭಿನ್ನ ಪ್ರಯೋಗವಾಗಿದೆ. ಈಗಾಗಲೇ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಬಹಳ ಖುಶಿಯಲ್ಲಿದೆ.
ತಾರಾಬಳಗದಲ್ಲಿ ಕಿರುತೆರೆ ಧಾರವಾಹಿ ” ಅಗ್ನಿಸಾಕ್ಷಿ”ಯ ನಟ ಕಿಶೋರ್ ಮಂಗಳೂರಿನ ಅಮಿತ್ ರಾವ್ ನಾಯಕ ನಟರಾಗಿದ್ದು,ಭವ್ಯಾ, ಪೂಜಾ ಶೆಟ್ಟಿ, ನೀಮಾ ನಾಯಕಿಯರ ಪಾತ್ರದಲ್ಲಿದ್ದಾರೆ. ಅರವಿಂದ್ ಬೋಳಾರ್, ಉಮೇಶ್ ಮೀಜಾರ್, ರಘು ಪಾಂಡೇಶ್ವರ್, ರಂಜನ್ ಬೋಳೂರು, ರಂಜಿತ್ ಶೇಟ್, ಪ್ರಶಾಂತ್ ಸಿ.ಕೆ, ಚೇತಕ್ ಪೂಜಾರಿ, ಶರತ್ ಕುಮಾರ್ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.
ಉಳಿದಂತೆ ತಾಂತ್ರಿಕ ಬಳಗದಲ್ಲಿ ಪವನ್ ಕರ್ಕೆರಾ ಕ್ಯಾಮೆರಾ, ಸುಜಿತ್ ನಾಯಕ್ ಸಂಕಲನ, ಮಧುರ ಪ್ರಕಾಶ್ ಸಂಗೀತ ನಿರ್ದೇಶನ, ಸಾಯಿಕೃಷ್ಣ ಮತ್ತು ಕೀರ್ತನ್ ಭಂಡಾರಿ ಅವರ ಸಾಹಿತ್ಯವಿದೆ.
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್ – Mob : 9035089084
Comments are closed.