ಕರಾವಳಿ

ತಮಿಳುನಾಡಿನಿಂದ ಸುರಕ್ಷಿತವಾಗಿ ಉಡುಪಿಗೆ ಬಂದ ಕುಂದಾಪುರದವರು: ಚಾಲಕ ಮಂಜುನಾಥ ಗುರುವಾರ ಆಗಮನ ನಿರೀಕ್ಷೆ.

Pinterest LinkedIn Tumblr

ವರದಿ- ಯೋಗೀಶ್ ಕುಂಭಾಸಿ
ಫೋಟೋ ಕ್ರಪೆ- ಶಿಜೀತ್ ಕುಮಾರ್

ಉಡುಪಿ: ಕಾವೇರಿ ನದಿ ನೀರು ವಿಚಾರದಲ್ಲಿ ಬುಗಿಲೆದ್ದ ಗಲಭೆಯಲ್ಲಿ ತಮಿಳುನಾಡಿನಲ್ಲಿ ತಮಿಳರಿಂದ ದೌರ್ಜನ್ಯಕ್ಕೊಳಗಾದ ಕುಂದಾಪುರ ಮೂಲದ ಕನ್ನಡಿಗರು ಬುಧವಾರ ರೈಲಿನ ಮೂಲಕ ಉಡುಪಿಗೆ ಆಗಮಿಸಿದ್ದಾರೆ.

ಕುಂದಾಪುರದ ಅಮಾಸೆಬೈಲು ಸಮೀಪದ ರಟ್ಟಾಡಿ ನಿವಾಸಿಯಾದ ಮಂಜುನಾಥ ಕುಲಾಲ್ ಎನ್ನುವವರ ಕುಟುಂಬಿಕರು ಸೇಫ್ ಆಗಿ ವಾಪಾಸ್ಸಾಗಿದ್ದು ಅವರ ಕಷ್ಟದ ಕಥೆಯಿದು.

manjunath_return_1

ಕುಂದಾಪುರದ ರಟ್ಟಾಡಿ ನಿವಾಸಿ ಮಂಜುನಾಥ ಕುಲಾಲ್ ಎನ್ನುವವವರು ಕೋಣಿಯ ಆರ್ಸಿ ಕೋರ್ವಾಲ್ ಎನ್ನುವ ಕೋಣಿಯ ಸ್ನೇಹಿತನ ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ರಾಮೇಶ್ವರ ಹಾಗೂ ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಯಾತ್ರೆಗಾಗಿ ತೆರಳಿದ್ದರು. ಸೆ.9 ಶುಕ್ರವಾರದಂದು ತೆರಳಿದ ಅವರು ಒಂದು ವಾರಗಳ ಯಾತ್ರೆ ಮಾಡಿ ವಾಪಾಸ್ಸಾಗುವ ಯೋಜನೆ ರೂಪಿಸಿದ್ದರು. ಕನ್ಯಾಕುಮಾರಿ, ತ್ರಿವೆಂಡ್ರಮ್ ಮಾರ್ಗವಾಗಿ ಭಾನುವಾರ ರಾಮೇಶ್ವರ ತೆರಳಿದ ಇವರ ತಂಡವು ಅಲ್ಲಿ ದರ್ಶನ ಮುಗಿಸಿ ಸೋಮವಾರ ಮಧುರೈಗೆ ತೆರ`ತುಂಬಾ ಕಷ್ಟಪಟ್ಟು ಊರಿಗೆ ವಾಪಾಸ್ಸಾಗಿದ್ದೇವೆ. ಅಲ್ಲಿನ ಪರಿಸ್ಥಿತಿ ಕಂಡು ಬಹಳ ಆತಂಕವಾಗಿತ್ತು. ಅಂತೂಇಂತೂ ಊರಿಗೆ ಬಂದಿದ್ದೇವೆ. ಮಗನಿನ್ನು ಅಲ್ಲಿಯೇ ಇದ್ದು ಆತ ಸುರಕ್ಷಿತವಾಗಿ ಬರುವ ತವಕದಲ್ಲಿದ್ದೇವೆ’ಳೌ ಹೊರಟಿದ್ದ ವೇಳೆ ವಾಹನ ಹಾಗೂ ವಾಹನ ಚಾಲಕನಾದ ಮಂಜುನಾಥ ಅವರಿಗೆ ನಾಮ್ ತಮಿಳಾರ್ ಇಯಕ್ಕಂ ಎಂಬ ತಮಿಳು ಹಲ್ಲೆ ನಡೆಸಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿ ಎಲ್ಲೆಡೆ ಹರಿಯಬಿಟ್ಟಿದ್ದರು. ಈ ಪ್ರಕ್ರಿಯೆ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಕ್ಷುಬ್ಧತೆ ನಿರ್ಮಾಣವಾಗಿತ್ತು. ತಮಿಳುನಾಡು ಪೊಲೀಸ್ ಠಾಣೆಗೆ ದೂರು ನೀಡಿದ ಮಂಜುನಥ ಕುಲಾಲ್ ತಾನು ಪೊಲೀಸರ ರಕ್ಷಣೆ ಪಡೆದು ಉಳಿದವರನ್ನು ಲಾಡ್ಜೊಂದರಲ್ಲಿ ತಂಗಲು ಅವಕಾಶ ಮಾಡಿಕೊಟ್ಟಿದ್ದರು.

manjunath_return_3 manjunath_return_2

ಮಾಧ್ಯಮದವರೊಂದಿಗೆ ಮಾತನಾಡಿದ ಮಂಜುನಾಥ ಅವರ ತಂದೆ ಶೀನ ಕುಲಾಲ, ತಾಯಿ ಗಿರಿಯಮ್ಮ, ಅಮಾಸೆಬೈಲು ಉದ್ಯಮಿ ವಿಠಲ ಶೆಟ್ಟಿ, ಗಂಗೊಳ್ಳಿಯ ದಿವಾಕರ್ ನಾಯಕ್ ಹಾಗೂ ಪತ್ನಿ ಹಾಗೂ 8 ವರ್ಷದ ಮಗ, ದ್ಯಾವಪ್ಪ ಪೂಜಾರಿ, ವೆಂಕಪ್ಪ ನಾಯ್ಕ, ಪತ್ನಿ ಹಾಗೂ ಮಗಳು ಹಾಗೂ ತೊಂಬಟ್ಟಿನ ಇಬ್ಬರು ಯುವಕರು ಸೇರಿ ಒಟ್ಟು 12 ಮಂದಿ ಬುಧವಾರ ಉಡುಪಿಗೆ ವಾಪಾಸ್ಸಾಗಿದ್ದಾರೆ.

ತಮಿಳುನಾಡಿನಿಂದ ದೂರವಾಣಿ ಮೂಲಕ ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ಮಂಜುನಾಥ ಕುಲಾಲ್, ‘ಸದ್ಯ ತಮಿಳುನಾಡಿನಲ್ಲಿ ತಂಗಿದ ಸ್ಥಳದಿಂದ ಹೊರಡುವ ತಯಾರಿಯಲ್ಲಿದ್ದು ಇಂದು (ಬುಧವಾರ) ಸಂಜೆಯೊಳಗೆ ಇಲ್ಲಿಂದ ಪೊಲೀಸರ ರಕ್ಷಣೆಯಲ್ಲಿ ಹೊರಡಲಿದ್ದೇವೆ. ನಿರೀಕ್ಷೆ ಪ್ರಕಾರ ಗುರುವಾರ ಬೆಳಿಗ್ಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ ಎಂದರು.

Comments are closed.