ಕರಾವಳಿ

ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್, ಬೀದಿದೀಪ ಕಂಬಕ್ಕೆ ಡಿಕ್ಕಿ.

Pinterest LinkedIn Tumblr

ambulance_palthi_1

ಮಂಗಳೂರು, ಸೆ.12: ಚಾಲಕ ನಿಯಂತ್ರಣ ತಪ್ಪಿದ ಖಾಸಗಿ ಆಂಬ್ಯುಲೆನ್ಸಯೊಂದು ಹೆದ್ದಾರಿ ಮಧ್ಯದ ಬೀದಿದೀಪ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಸೋಮವಾರ ಕುಳೂರು ಸಮೀಪ ನಡೆದಿದೆ.

ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾರೆ. ಆಂಬ್ಯುಲೆನ್ಸ್ ಸುರತ್ಕಲ್‌ನಿಂದ ವೇಗವಾಗಿ ಬರುತ್ತಿದ್ದಾಗ ಬೇರೆ ವಾಹನವೊಂದು ಅಡ್ಡ ಬಂದಿದ್ದರಿಂದ ಆಂಬ್ಯುಲೆನ್ಸ್ ಬಲಬದಿಗೆ ಚಲಿಸಿ ಬೀದಿ ದೀಪದ ಕಂಬಕ್ಕೆ ಢಿಕ್ಕಿಯಾಗಿ ಪಲ್ಟಿಯಾಗಿದೆ.

ambulance_palthi_2 ambulance_palthi_3 ambulance_palthi_4 ambulance_palthi_5

ಇದರಿಂದ ವಾಹನ ಸಂಚಾರಕ್ಕೆ ಸ್ವಲ್ಪ ತಡೆಯಾಗಿದ್ದು, ಕೂಡಲೇ ಟ್ರಾಫಿಕ್ ಸಿಬ್ಬಂದಿ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

Comments are closed.