
ಮಂಗಳೂರು: ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನೀರುಮಾರ್ಗ ಕರಾವಳಿ ಕಾಲೇಜಿನಲ್ಲಿ ಶನಿವಾರ ಓಣಂ ಆಚರಣೆಯ ಬಹಳ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಉದ್ಘಾಟಿಸಿದರು. ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯು ಹಬ್ಬಗಳ ಆಚರಣೆಗಳಲ್ಲಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದಲ್ಲಿ ಹಬ್ಬಗಳನ್ನು ಒಟ್ಟಾಗಿ ಆಚರಿಸುವ ಮೂಲಕ ಭಾರತೀಯತೆಯನ್ನು ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು.

ಭಾರತದ ಸಾಂಸ್ಕೃತಿಕ ಪರಂಪರೆ, ಹಬ್ಬಗಳ ಆಚರಣೆ ವಿಶಿಷ್ಟವಾದುದು. ಇಂತಹ ಹಿನ್ನೆಲೆಗೆ ಮಾರುಹೋಗಿ ಇಡೀ ವಿಶ್ವವೇ ಇಂದು ಭಾರತದೆಡೆಗೆ ನೋಡುತ್ತಿದೆ. ಈ ಸಂದರ್ಭದಲ್ಲಿ ಏಕತೆಯ ಮೂಲಕ ಭಾರತದ ಘನತೆಯನ್ನು ಸಾರುವ ಜವಾಬ್ದಾರಿ ಪ್ರತಿ ಭಾರತೀಯನ ಮೇಲಿದೆ. ವಿದ್ಯಾರ್ಥಿ ಗಳು ಜವಾಬ್ದಾರಿಯುತ ಪ್ರಜೆಗಳಾಗಿ ದೇಶದ ಹೆಸರನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡಬೇಕು ಎಂದು ಗಣೇಶ್ ರಾವ್ ಹೇಳಿದರು.

ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಲತಾ ಜಿ. ರಾವ್ ಮುಖ್ಯ ಅತಿಥಿಯಾಗಿದ್ದರು. ಕರಾವಳಿ ಸಮೂಹದ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಡಾ| ಆರ್.ಕೆ. ಭಟ್, ಪ್ರೊ| ನಾರಾಯಣ ಸ್ವಾಮಿ, ಪ್ರೊ| ಮೋಹನ್ ಉಪಸ್ಥಿತರಿದ್ದರು.ಲಾವೆಂಡರ್ ಡಿಸಿಲ್ವಾ ಸ್ವಾಗತಿಸಿ ದರು. ಫ್ಲೆವಿನ್ ವಂದಿಸಿದರು. ರೋಹನ್ ಫೆರ್ನಾಂಡಿಸ್ ನಿರೂಪಿಸಿದರು.
Comments are closed.