ಕರಾವಳಿ

ತಾಯಿಯ ಗರ್ಭದಲ್ಲಿನ ಮಗುವಿನ ತುಂಟಾಟ ಹೇಗಿರುತ್ತೆ ನೋಡಿ….

Pinterest LinkedIn Tumblr

child_in_womb

ಮಂಗಳೂರು: ಹೊಸ ಜೀವವೊಂದನ್ನು ಭೂಮಿ ಮೇಲೆ ತರುವ ಮಹತ್ವದ ಕೆಲಸವನ್ನು ಮಾಡುವ ಹೆಣ್ಣು ಜೀವ ಮೊದಲ ಸಲ ಗರ್ಭ ಧರಿಸಿದಾಗ ಆಕೆ ಮಾತ್ರವಲ್ಲದೆ ಇಡೀ ಕುಟುಂಬವೇ ಸಂತೋಷದಲ್ಲಿ ತೇಲುತ್ತಿರುತ್ತದೆ.

ಮಗುವಿನ ಬಗ್ಗೆ ಪತಿ-ಪತ್ನಿಯ ಜತೆಗೆ ಕುಟುಂಬದವರು ವಿವಿಧ ರೀತಿಯ ಕನಸುಗಳನ್ನು ಕಾಣಲು ಆರಂಭಿಸುತ್ತಾರೆ. ಆದರೆ ತನ್ನ ಗರ್ಭದಲ್ಲಿ ಒಂದು ಜೀವವನ್ನು ಹಿಡಿದುಕೊಂಡು 9 ತಿಂಗಳ ಕಾಲ ಹೆಣ್ಣೊಬ್ಬಳು ಅನುಭವಿಸುವ ಅನುಭವಗಳು ತುಂಬಾ ಭಿನ್ನವಾಗಿರುತ್ತದೆ.

ಶಿಶು ಗರ್ಭದಲ್ಲಿ ಏನೆಲ್ಲಾ ಮಾಡುತ್ತದೆ ಎನ್ನುವ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಕುತೂಹಲವಿರುತ್ತದೆ. ಇದಕ್ಕಾಗಿ ನಿಮ್ಮ ಕುತೂಹಲವನ್ನು ತಣಿಸಲು ಗರ್ಭದಲ್ಲಿರುವ ನಿಮ್ಮ ಶಿಶು ಏನೆಲ್ಲಾ ಮಾಡುತ್ತದೆ ಎನ್ನುವುದನ್ನು ವಿವರಿಸುತ್ತೇವೆ.

 

ತಜ್ಞರ ಪ್ರಕಾರ ಗರ್ಭದಲ್ಲಿರುವ ಶಿಶು ಕೇವಲ ಬೆರಳು, ಪಾದವನ್ನು ಅಲ್ಲಡಿಸುವುದು ಮಾತ್ರವಲ್ಲದೆ ಕೆಲವೊಮ್ಮೆ ಕನಸು ಕಾಣುತ್ತದೆ ಮತ್ತೆ ಕೆಲವು ಸಲ ಅಳುತ್ತದೆ, ಮತ್ತು ಕೈಬೆರಳನ್ನು ಚೀಪುತ್ತದೆ. ಇಷ್ಟು ಮಾತ್ರವಲ್ಲದೆ ಇನ್ನೂ ಹಲವಾರು ರೀತಿಯ ವರ್ತನೆಯನ್ನು ಮಕ್ಕಳು ತೋರಿಸುತ್ತದೆಯಂತೆ. ಗರ್ಭದಲ್ಲಿರುವ ಕಂದಮ್ಮನಿಗೆ ಎಲ್ಲವೂ ಅರ್ಥವಾಗುತ್ತದೆಯಂತೆ! ಅಲ್ಟ್ರಾಸೌಂಡ್ ಮಾಡಿಸುವಾಗ ನಿಮ್ಮ ಶಿಶುವಿತ್ತ ಏಕಾಗ್ರತೆಯಿಂದ ನೋಡಿದರೆ ಅದು ತಿರುಗುತ್ತಿರುವುದು ನಿಮ್ಮ ಕಣ್ಣಿಗೆ ಬೀಳುತ್ತದೆ. ಆಗ ನಿಮಗೆ ಹೊಟ್ಟೆಯಲ್ಲಿ ಒದೆದಂತೆ ಆಗಬಹುದು.

1. ತಜ್ಞರ ಪ್ರಕಾರ ಗರ್ಭದಲ್ಲಿರುವ ಶಿಶು ಕೇವಲ ಒದೆಯುವುದು ಮಾತ್ರವಲ್ಲದೆ ಇನ್ನು ಹಲವಾರು ರೀತಿಯಲ್ಲಿ ವರ್ತಿಸುತ್ತದೆ. ಮೊದಲ ಸಲ ಗರ್ಭಧರಿಸುವ ಮಹಿಳೆಯರು ಈ ಲೇಖನವನ್ನು ಓದಿ ಗರ್ಭದಲ್ಲಿರುವ ಮಗು ಏನೆಲ್ಲಾ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

2.ಗರ್ಭದಲ್ಲಿ ಅಳುವುದು ಗರ್ಭದಲ್ಲೇ ಮಗು ಅಳುತ್ತದೆಯಾ ಎಂದು ನೀವು ಕೇಳಬಹುದು. ಆದರೆ ತಜ್ಞರ ಪ್ರಕಾರ ಅಲ್ಟ್ರಾಸೌಂಡ್ ಮಾಡಿದಾಗ ಗರ್ಭದಲ್ಲಿರುವ ಕೆಲವು ಶಿಶುಗಳು ಅಳುವುದು ಪತ್ತೆಯಾಗಿದೆ.

3.ಗರ್ಭದಲ್ಲೇ ಭಾಂದವ್ಯ ಅವಳಿ ಮಕ್ಕಳು ನಿಮ್ಮ ಗರ್ಭದಲ್ಲಿದ್ದರೆ ಆಗ ಶಿಶುಗಳ ಭಾಂದವ್ಯ ಹೆಚ್ಚಾಗುತ್ತದೆ. ತಜ್ಞರು ಹೇಳುವ ಪ್ರಕಾರ ಇದೇ ಭಾಂದವ್ಯ ತಾಯಿಯೊಂದಿಗೆ ಕೂಡ ಏರ್ಪಡುತ್ತದೆ. ಗರ್ಭಧಾರಣೆಯ ಅಂತಿಮ ಹತ್ತು ವಾರಗಳಿರುವಾಗ ಮಗು ತಾಯಿಯ ಸ್ವರವನ್ನು ಗುರುತಿಸಲು ಆರಂಭಿಸುತ್ತದೆ ಎನ್ನುವುದು ಪತ್ತೆಯಾಗಿದೆ.

4.ಗರ್ಭದಲ್ಲಿ ಶಿಶು ಬಿಕ್ಕಳಿಕೆ ಗರ್ಭದಲ್ಲಿರುವ ಶಿಶು ಗರ್ಭಧಾರಣೆಯ ಮೊದಲ ಅವಧಿಯಲ್ಲೇ ಬಿಕ್ಕಳಿಸಲು ಆರಂಭಿಸುತ್ತದೆ. ಆದರೆ ಗರ್ಭಧಾರಣೆಯ ಅಂತಿಮ ಹಂತದ ತನಕ ಇದನ್ನು ಅನುಭವಿಸಲು ಸಾಧ್ಯವಿಲ್ಲ. ನೀವು ತುಂಬಾ ಏಕಾಗ್ರತೆಯಿಂದ ಇದನ್ನು ಗಮನಿಸಲು ಪ್ರಯತ್ನಿಸಿದರೆ ಗರ್ಭದಲ್ಲಿರುವ ಮಗು ಬಿಕ್ಕಳಿಸುವುದು ತಿಳಿದುಬರುವುದು. ನಗುವುದು ಗರ್ಭಧಾರಣೆಯ 26ನೇ ವಾರದಲ್ಲಿ ಗರ್ಭದಲ್ಲಿರುವ ಮಗು ಹಲವಾರು ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಆರಂಭಿಸುತ್ತದೆ. ಈ ವೇಳೆ ಗರ್ಭದಲ್ಲಿರುವ ಮಗು ನಗುವುದನ್ನು ಗಮನಿಸಬಹುದು. ಇದು ತುಂಬಾ ಮುದ್ದಾಗಿರುತ್ತದೆ.

5.ಗರ್ಭದಲ್ಲಿ ಅಳುವುದು ಶಿಶು ಕೂಗುವುದನ್ನು ನೋಡಲು ತುಂಬಾ ಮುದ್ದಾಗಿರಬಹುದು ಅಲ್ಲವೇ? ಗರ್ಭದಲ್ಲಿರುವ ಶಿಶು ಹೆಚ್ಚಿನ ಸಮಯ ನಿದ್ರಿಸುವುದರಲ್ಲೇ ಕಳೆಯುತ್ತದೆ. ಮತ್ತೆ ಎಚ್ಚರಗೊಂಡಾಗ ಶಿಶುವಿಗೆ ತುಂಬಾ ಆಯಾಸವಾಗಿರುತ್ತದೆ. ಇದರಿಂದ ಮಗು ಅಳುವುದಕ್ಕೆ ಆರಂಭಿಸುತ್ತದೆ. ಮೂತ್ರ ಮಾಡುವುದು ಹೌದು ಗರ್ಭದಲ್ಲಿರುವ ಶಿಶು ಮೂತ್ರ ಮಾಡುತ್ತದೆ. ಗರ್ಭಧಾರಣೆಯ ಮೊದಲ ಅವಧಿಯ ಬಳಿಕ ಶಿಶು ಮೂತ್ರ ಮಾಡಲು ಆರಂಭಿಸುತ್ತದೆ.

6.ಗರ್ಭದಲ್ಲಿ ಕಣ್ಣು ತೆರೆಯುವುದು ಗರ್ಭಧಾರಣೆಯ 28 ವಾರಗಳಲ್ಲಿ ಶಿಶು ಕಣ್ಣುಗಳನ್ನು ತೆರೆಯಲು ಆರಂಭಿಸುತ್ತದೆ. ನಿಮ್ಮ ಹೊಟ್ಟೆಗೆ ಯಾವುದೇ ಪ್ರಕಾಶಮಾನವಾದ ಬೆಳಕು ಬಿದ್ದಾಗ ಶಿಶು ಕಣ್ಣು ತೆರೆಯಲು ಆರಂಭಿಸುತ್ತದೆ. ಆದರೆ ಇದರ ಬಗ್ಗೆ ಚಿಂತಿಸಬೇಕಿಲ್ಲ. ಯಾಕೆಂದರೆ ಶಿಶು ಮತ್ತೆ ತನ್ನ ಹಿಂದಿನ ಸ್ಥಿತಿಗೆ ಹೋಗುತ್ತದೆ.

7.ಊಟದ ರುಚಿ ನೋಡುವುದು ಗರ್ಭಧರಿಸಿರುವ ಮಹಿಳೆಯರು ಯಾವುದೇ ರೀತಿಯ ಆಹಾರವನ್ನು ಸೇವಿಸಿದರೂ ಅದರ ಸುವಾಸನೆಯನ್ನು ಗರ್ಭದಲ್ಲಿರುವ ಶಿಶು ಕಂಡು ಹಿಡಿಯುತ್ತದೆ. ಆಮ್ನಿಯೊಟಿಕ್ ದ್ರವದ ಮೂಲಕ ಇದು ಶಿಶುವನ್ನು ತಲುಪುವುದು. ಗರ್ಭದಲ್ಲಿರುವ ಮಗುವಿಗೆ 15 ವಾರಗಳು ಆದಾಗ ಸಿಹಿ ತಿಂಡಿಗೆ ಹೆಚ್ಚು ಇಷ್ಟಪಡುತ್ತದೆ. ದ್ರವ ಹೆಚ್ಚು ಸಿಹಿಯಾಗಿದ್ದಾಗ ಅದನ್ನು ಹೆಚ್ಚು ಸೇವಿಸುತ್ತದೆ.

Comments are closed.