ಕರಾವಳಿ

ಮೊದಲ ಭೇಟಿಯಲ್ಲೇ ಪ್ರಣಯದೇವತೆಯ ಬಾಣ ಹೃದಯವನ್ನು ಚುಚ್ಚಲ್ಲಂತೆ…

Pinterest LinkedIn Tumblr

love1

ಮಂಗಳೂರು: ಮೊದಲ ನೋಟದಲ್ಲೇ ಪ್ರೀತಿ ಮೊಳಕೆಯೊಡೆದು ಪರಸ್ಪರ ಪ್ರೀತಿಸಲು ಆರಂಭಿಸುತ್ತಾರೆ ಎನ್ನುವುದು ಸುಳ್ಳು. ಪರಸ್ಪರರಲ್ಲಿ ಪ್ರೀತಿ ಮೂಡಬೇಕಾದರೆ ಅವರು ನಾಲ್ಕು ಸಲವಾದರೂ ಭೇಟಿಯಾಗಬೇಕಾಗಿದೆ ಎಂದು ಅಧ್ಯಯನವೊಂದು ಹೇಳಿದೆ.

ಮೊದಲ ನೋಟದಲ್ಲಿ ಯಾವುದೇ ಆಕರ್ಷಣೆ ಇಲ್ಲದೆ ಇದ್ದರೂ ಮೂರ್ನಾಲ್ಕು ಭೇಟಿ ಬಳಿಕ ಅವರಿಬ್ಬರು ಪ್ರೀತಿಸಲು ಆರಂಭಿಸಬಹುದು ಎನ್ನುತ್ತದೆ ಅಧ್ಯಯನ. ಮೊದಲ ಭೇಟಿಯಲ್ಲೇ ಪ್ರಣಯದೇವತೆಯ ಬಾಣ ಹೃದಯವನ್ನು ಚುಚ್ಚಲ್ಲ. ಯಾಕೆಂದರೆ ಇದು ತುಂಬಾ ನಿಧಾನವಾಗಿ ಕೆಲಸ ಮಾಡುತ್ತದೆ.

ಇದರಿಂದಾಗಿಯೇ ಮೊದಲ ಭೇಟಿಯ ಬಳಿಕವೂ ಕೆಲವು ಸಲ ಭೇಟಿ ಮಾಡಬೇಕಾಗುತ್ತದೆ ಎಂದು ನ್ಯೂಯಾರ್ಕ್ ನ ಹ್ಯಾಮಿಲ್ಟನ್ ಕಾಲೇಜಿನ ಮನಶಾಸ್ತ್ರಜ್ಞ ರವಿ ಥಿರುಚಸೆಲ್ವಂ ಹೇಳಿರುತ್ತಾರೆ.

ಇದರ ಬಗ್ಗೆ ಅಧ್ಯಯನ ಮಾಡಲು ಯುವಕರು ಹಾಗೂ ಯುವತಿಯರ ಗುಂಪಿಗೆ ಪರಸ್ಪರರ ಫೋಟೋ ತೋರಿಸಲಾಯಿತು. ಇದರಲ್ಲಿ ಭಾಗಿಯಾದವರ ಮೆದುಳನ್ನು ಪರಿಶೀಲನೆ ಮಾಡಿ ಪೋಟೊದಲ್ಲಿರುವವರ ಕಡೆಗಿರುವ ಆಕರ್ಷಣೆಯನ್ನು ಗಣನೆಗೆ ತೆಗೆದುಕೊಳ್ಳಲಾಯಿತು.

ಎರಡನೇ ಸಲ ಪರಸ್ಪರರಿಗೆ ಫೋಟೋವನ್ನು ತೋರಿಸಿದಾಗ ಅವರ ನಡುವಿನ ಆಕರ್ಷಣೆಯು ಹೆಚ್ಚಾಯಿತು. ಮೂರನೇ ಸಲ ಫೋಟೋ ತೋರಿಸಿದಾಗ ಆಕರ್ಷಣೆ ಮತ್ತಷ್ಟು ಹೆಚ್ಚಾಯಿತು. ನಾಲ್ಕನೇ ಸಲಕ್ಕೆ ಇದು ತೀವ್ರವಾಗಿತ್ತು. ನಾಲ್ಕನೇ ಸಲ ಫೋಟೊ ನೋಡಿದಾಗ ಭಾಗವಹಿಸಿದವರ ಮೆದುಳಿನಲ್ಲಿ ಅತಿಯಾದ ಆಸಕ್ತಿ ಹಾಗೂ ಸಂತೋಷ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ.

Comments are closed.