ಕರಾವಳಿ

ಮಂಗಳೂರಿನ ಕಾರ್ಯಕ್ರಮದಲ್ಲಿ ಚಿತ್ರನಟಿ ರಮ್ಯಾ ಮೇಲೆ ಮೊಟ್ಟೆ,ಟೊಮೆಟೋ,ಶೂ ಎಸೆತ : ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದ ರಮ್ಯಾ

Pinterest LinkedIn Tumblr

Ramya_kadri-Protest_1

ಮಂಗಳೂರು, ಆ. 26: ಕದ್ರಿ ಕ್ರಿಕೆಟರ್ಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಗುರುವಾರ ರಾತ್ರಿ ಕದ್ರಿ ಮೈದಾನದಲ್ಲಿ ಅಯೋಜಿಸಲಾದ “ರಿದಮಿಕ್ ನೈಟ್” ಸಂಗೀತಾ ರಸಮಂಜರಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ವೇದಿಕೆಗೆ ಆಗಮಿಸುತ್ತಿದ್ದಂತೆ ಕೆಲವರು ವೇದಿಕೆ ಮೇಲೆ ಮೊಟ್ಟೆ, ಟೊಮೆಟೊ ಮತ್ತು ಶೂ ಎಸೆದ ಘಟನೆ ನಡೆದಿದೆ.

ಪಾಕಿಸ್ತಾನದ ಜನರ ಪರ ಹೇಳಿಕೆ ನೀಡಿ ಈಗಾಗಲೇ ವಿವಾದಕ್ಕೀಡಾಗಿರುವ ರಮ್ಯಾ, ಬಳಿಕ ವಾಹಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಮಂಗಳೂರನ್ನು ನರಕ’ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಇತರ ಕೆಲ ಸಘಟನೆಯ ಕಾರ್ಯಕರ್ತರು ರಮ್ಯಾ ವೇದಿಕೆಯ ಮೇಲೆ ಬರುತ್ತಿದ್ದಂತೆ ಕಲ್ಲು, ಶೂ ಮತ್ತು ಟೊಮ್ಯಾಟೊಗಳನ್ನು ಎಸೆದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.

Ramya_kadri-Protest_3

ಆದರೆ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಆಯೋಜಕರು ರಮ್ಯಾ ಅವರ ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿ ರಮ್ಯಾರನ್ನು ಬೀಳ್ಕೊಟ್ಟರು. ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ನಗರದ ಪ್ರತಿಷ್ಠಿತ ಉದ್ಯಮಿಗಳು, ರಾಜಕೀಯ ಮುಖಂಡರು ಮೂಕ ಪ್ರೇಕ್ಷರಾಗಿದ್ದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದ್ದು, ಹೆಚ್ಚಿನ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಂಡರು. ರಮ್ಯಾ ನಿರ್ಗಮನದ ಬಳಿಕ ಕದ್ರಿ ಕ್ರಿಕೆಟರ್ಸ್ ವತಿಯಿಂದ ಅಯೋಜಿಸಲಾದ “ರಿದಮಿಕ್ ನೈಟ್” ಸಂಗೀತಾ ರಸಮಂಜರಿ ಕಾರ್ಯಕ್ರಮ ಸರಾಗವಾಗಿ ನಡೆಯಿತು.

Ramya_Kadri_show_2 Ramya_Kadri_show_3 Ramya_Kadri_show_4 Ramya_Kadri_show_5 Ramya_Kadri_show_6 Ramya_Kadri_show_7 Ramya_Kadri_show_8 Ramya_Kadri_show_9 Ramya_Kadri_show_10

Ramya_kadri-Protest_2

Ramya_kadri-Protest_4 Ramya_kadri-Protest_5 Ramya_kadri-Protest_7

ವಿಮಾನ ನಿಲ್ದಾಣದಲ್ಲಿ ಕಾರಿಗೆ ಮೊಟ್ಟೆ ಎಸೆತ:

Ramya_againest-Protest_12 Ramya_againest_Protest_19 Ramya_againest_Protest_18 Ramya_againest_Protest_20

Ramya_againest_Protest_25

Ramya_againest_Protest_22

ಇದಕ್ಕೂ ಮೊದಲು ರಮ್ಯಾ ಮಂಗಳೂರಿಗೆ ಬರುತ್ತಿದ್ದಂತೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ರಮ್ಯಾ ವಿರುದ್ಧ ಕಪ್ಪು ಬಾವೂಟ ಹಿಡಿದು ಪ್ರತಿಭಟನೆ ಮಾಡಿದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು,ರಮ್ಯಾರ ಕಾರಿಗೆ ಮೊಟ್ಟೆ ಎಸೆದು ಆಕ್ರೋಷ ವ್ಯಕ್ತಪಡಿಸಿದ್ದರು.

ರಮ್ಯಾ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು, ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಪ್ರತಿಭಟನೆ ನಡೆಯುವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

Comments are closed.