ಭುವನೇಶ್ವರ, ಆ. 23: ಒರಿಸ್ಸಾ ರಾಜ್ಯದ ಭುವನೇಶ್ವರದ ಕೊಳಚೆ ಪ್ರದೇಶದಲ್ಲಿ ವಾಸವಿರುವ 11 ವರ್ಷದ ಬಾಲಕನೊಬ್ಬನಿಗ ಜರ್ಮನಿ ಫುಟ್‌ಬಾಲ್ ಅಕಾಡೆಮಿ ತರಬೇತಿ ನೀಡಲು ಮುಂದಾಗಿದೆ.
11 ವರ್ಷದ ಚಂದನ್ ನಾಯಕ್ ಎಂಬ ಬಾಲಕನಿಗೆ ಜರ್ಮನಿಯ ಪ್ರತಿಷ್ಠಿತ ಬೇಯರ್ನ್ ಮ್ಯೂನಿಚ್ ಫುಟ್‌ಬಾಲ್ ಅಕಾಡೆಮಿ ತರಬೇತಿ ನೀಡಲು ಮುಂದಾಗಿದ್ದು, ಪುಣೆಯಲ್ಲಿ ನಡೆದ ಆಲ್ ಇಂಡಿಯಾ ಟೂರ್ನಿಗೆ ಚಂದನ್ ಅರ್ಹತೆ ಪಡೆದಿದ್ದು, ನಂತರ ಬೇಯರ್ನ್ ಮ್ಯೂನಿಚ್ ಅಕಾಡೆಮಿ ಬಾಲಕನಿಗೆ ಈ ಅವಕಾಶ ನೀಡಿದೆ.
1902ರಲ್ಲಿ ಸ್ಥಾಪನೆಯಾದ ಬೇಯರ್ನ್ ಮ್ಯೂನಿಚ್ ಅಕಾಡೆಮಿಯಲ್ಲಿ ವಿಶ್ವದ ಅಗ್ರಗಣ್ಯ ಆಟಗಾರರು ತರಬೇತಿ ಪಡೆದಿದ್ದಾರೆ. ಥಾಮಸ್ ಮುಲ್ಲರ್ ಮತ್ತು ಫಿಲಿಪ್ ಲಹ್ಮ್ ಅಂತಹ ಪ್ರತಿಭೆಗಳನ್ನು ಫುಟ್‌ಬಾಲ್ ಜಗತ್ತಿಗೆ ಈ ಅಕಾಡೆಮಿ ನೀಡಿದೆ.
ಈಗ ಅಂತಹ ಪ್ರಸಿದ್ಧ ಅಕಾಡೆಮಿಯಲ್ಲಿ ದೇಶದ ಸ್ಲಂ ಬಾಲಕನೊಬ್ಬ ತರಬೇತಿ ಪಡೆದು ವಿಶ್ವ ಪ್ರಸಿದ್ಧಿಯಾಗಲಿ ಎಂಬುದು ಎಲ್ಲರ ಆಶಯವಾಗಿದೆ. ಪ್ರತಿಷ್ಠಿತ ಜರ್ಮನಿ ಫುಟ್‌ಬಾಲ್ ಅಕಾಡೆಮಿಯಲ್ಲಿ ಫುಟ್‌ಬಾಲ್ ತರಬೇತಿ ಪಡೆಯಲು ಬಾಲಕ ಉತ್ಸಾಹದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ.

Comments are closed.