ಕರಾವಳಿ

ಎಲ್ಲಾ ಕನ್‌ಪ್ಯುಷನ್‌ಗಳಿಗೆ ತೆರೆ ಎಳೆದ ಸ…” ದಲ್ಲಿ ಏನಿದೆ..?

Pinterest LinkedIn Tumblr

Saa_Movei_Poster

__ಕೆಲವೊಂದು ಸಿನಿಮಾಗಳೆ ಹಾಗೆ ಸೆಟ್ಟೇರ್ಬೇಕಾದ್ರೆ ಒಂದು ಹೆಸರಿನಲ್ಲಿದ್ರೆ, ರಿಲೀಸ್ ಆಗುವ ಹೊತ್ತಿಗೆ ಮತ್ತೊಂದು ಹೆಸರನ್ನ ಪಡೆದುಕೊಂಡಿರುತ್ವೆ ಅದೇ ಸಾಲಿಗೆ ಸೇರೊ ಸಿನಿಮಾ ‘ಸ’. ಇದೀಗ ಸಂಥಿಂಗ್ ಸ್ಪೆಷಲ್ ಅನ್ನುವಂತೆ ಇದೇ ವಾರ ರಿಲೀಸ್ ಗೆ ರೆಡಿಯಾಗಿದೆ.

‘ಮತ್ತೊಮ್ಮೆ ಶ್’ ಅನ್ನೋ ಟೈಟಲ್ ನಲ್ಲಿ ಮುಹೂರ್ತ ಆಚರಿಸಿಕೊಂಡಿದ್ದ ಈ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿ ನೋಡ ನೋಡ್ತಿದ್ದಂಗೆ ‘ಸ..’ ಅಂತಾ ಬದಲಾಗಿಬಿಟ್ಟಿತ್ತು. ಇದರ ಹಿಂದೆ ಹಲವಾರು ಪ್ರಶ್ನೆ ಹುಟ್ಟಿಕೊಂಡಿದ್ದಂತು ಸುಳ್ಳಲ್ಲ. ಇದರ ಹಿಂದಿರೋ ಕಾರಣಗಳನ್ನ ಹುಡುಕಿಹೊರಟಾಗ, ಅಲ್ಲಿ ಟೈಟಲ್ ವಿವಾದದ ಹೊಗೆ ಎದ್ದಿತ್ತು.

ಆದ್ರೆ ಅದಕ್ಕಿಂತ ಹೆಚ್ಚಾಗಿ ಟೈಟಲ್ ಕುರಿತಂತೆ ಇದ್ದ ಕನ್ಫ್ಯೂಷನ್. ‘ಮತ್ತೊಮ್ಮೆ ಶ್’ ಶೀರ್ಷಿಕೆ ಇಟ್ಟಾಗ, ಅದರ ಜೊತೆ ಜೊತೆ ಮತ್ತೊಮ್ಮೆ ಕಟ್ಟೆಚ್ಚರ, ಶ್ ಮತ್ತೊಮ್ಮೆ, ಮತ್ತೊಮ್ಮೆ ಬಾ ಹೀಗೆ ಗೊಂದಲಗಳು ಸೃಷ್ಟಿಯಾಗಿದ್ವಂತೆ.

ಈ ಎಲ್ಲಾ ಕನ್ಫ್ಯೂಷನ್ಗೆ ನಾಂದಿ ಹಾಡ್ಬೇಕು ಅನ್ನೋ ಕಾರಣ ಒಂದಾದ್ರೆ ‘ಮತ್ತೊಂದು ಸ’ ಅನ್ನೋ ಟೈಟಲ್ ಚಿತ್ರ ಪಕ್ಕಾ ಆಯಪ್ಟ್ ಆಗಿದ್ದರಿಂದ ಇದನ್ನೇ ಫಿಕ್ಸ್ ಮಾಡಿದೆಯಂತೆ ಚಿತ್ರತಂಡ. ಆದ್ರೆ ಇದು ಎಷ್ಟರ ಮಟ್ಟಿಗೆ ಸೂಟ್ ಆಗುತ್ತೆ ಅನ್ನೋದನ್ನ ಚಿತ್ರ ನೋಡಿನೆ ತಿಳ್ಕೊಬೇಕು ಅಂತಾರೆ ನಿರ್ದೇಶಕರ ಹೇಮಂತ್ ಹೆಗ್ಡೆ.

ಅಂದಹಾಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಟ್ರೇಲರ್ ಹಾಗು ಹಾಡುಗಳು ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ವಿಶೇಷ ಅಂದ್ರೆ ಇದೇ ವಾರ ರಿಲೀಸ್ ಆಗ್ತಿದ್ದು, ಅಲ್ಲೂ ಕೂಡ ವಿಭಿನ್ನತೆಯನ್ನ ಮೆರೆಯುತ್ತಿದೆ ಚಿತ್ರತಂಡ. ಸಿನಿಮಾ ಸಾಕಷ್ಟು ನಿರೀಕ್ಷೆಯನ್ನ ಹುಟ್ಟುಹಾಕಿದ್ರು, ಖ್ಯಾತ ನಟರೆ ಇದ್ರೂ ಕೂಡ ರಾಜ್ಯಾದ್ಯಂತ ಜಸ್ಟ್ 6 ಸ್ಕ್ರೀನಿಂಗ್ ನಲ್ಲಷ್ಟೇ ರಿಲೀಸ್ ಆಗ್ತಿದೆ.

ಬೆಂಗಳೂರಿನ ಪಿವಿಆರ್ ಹಾಗು ಇನಾಕ್ಸ್, ಮೈಸೂರಿನ ಮೈಸೂರು ಮಾಲ್ ಮತ್ತು ಮಂಗಳೂರಿನ ಸಿಟಿ ಮಾಲಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಒಂದು ವೇಳೆ ಇಲ್ಲಿ ಒಳ್ಳೆಯ ರೆಸ್ಪಾನ್ಸ್ ಬಂದ್ರೆ ಮಾತ್ರ ಮುಂದಿನ ವಾರದಿಂದ ಸಿಂಗಲ್ ಥಿಯೇಟರ್ ಸೇರಿದಂತೆ 100 ಕ್ಕೂ ಅಧಿಕ ಚಿತ್ರಮಂದಿಗಳಲ್ಲಿ ರಿಲೀಸ್ ಮಾಡೊ ಪ್ಲಾನ್ ಚಿತ್ರತಂಡದ್ದು.

ಇನ್ನೂ ಈ ಚಿತ್ರದಲ್ಲಿ ಕಿರುತೆರೆ ಸ್ಟಾರ್ ಗಳಾದ ಸೂಪರ್ ಸ್ಟಾರ್ ಜೆಕೆ (ಜಯರಾಮ್ ಕಾರ್ತಿಕ್) ಹಾಗು ವಿಜಯ್ ಸೂರ್ಯ ನಾಯಕರಾಗಿ ಕಾಣಿಸಿಕೊಂಡರೆ ನಾಯಕಿಯಾಗಿ ಸಂಯುಕ್ತಾ ಹೊರನಾಡ್ ಬಣ್ಣಹಚ್ಚಿದ್ದಾರೆ. ಒಟ್ನಲ್ಲಿ ಒಂದೊಳ್ಳೆ ಸಸ್ಪೆನ್ಸ್ ಸಿನಿಮಾ ನೋಡಿ ಥ್ರಿಲ್ ಆಗ್ಬೇಕು ಅಂದ್ರೆ ಒಂದು ಬಾರಿ ಮಾಲ್ ಗೆ ವಿಜಿಟ್ ಹಾಕಿ ಚಿಲ್ ಆಗ್ಬಿಡಿ.

ವರದಿ ಕೃಪೆ : ಬಾಲ್ಕನಿ

Comments are closed.