ಮಂಗಳೂರು: ಸೂಕ್ಷ್ಮ ಮತ್ತು ಭಾವಜೀವಿ ವ್ಯಕ್ತಿಗಳು ಬೇಗನೆ ಆನ್‍ಲೈನ್ ಡೇಟಿಂಗ್ ಸೈಟ್‍ಗಳಲ್ಲಿ ಮೋಸ ಹೋಗುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಆನ್‍ಲೈನ್ ಡೇಟಿಂಗ್ ತಾಣಗಳಲ್ಲಿ ಮೋಸದಾಟಗಳು ಹೆಚ್ಚಾಗುತ್ತಿದ್ದು ಭಾವಜೀವಿಗಳು ಇಲ್ಲಿ ಮೋಸ ಹೋಗುತ್ತಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಡೇಟಿಂಗ್ ವೆಬ್‍ಸೈಟ್‍ಗಳಲ್ಲಿ ನಕಲಿ ಪ್ರೊಫೈಲ್ಗಳನ್ನು ಕ್ರಿಯೇಟ್ ಮಾಡಿ, ಜನರಿಂದ ಹಣ ಪೀಕುವ ಮೋಸದಾಟಗಳು ನಡೆಯುತ್ತವೆ. ಸೂಕ್ಷ್ಮ ಮತ್ತು ಭಾವ ಜೀವಿ ಗಳು ಈ ಮೋಸದಾಟವನ್ನು ತಿಳಿಯದೆ, ಇಲ್ಲಿ ಹೇಳಿರುವುದೆಲ್ಲಾ ನಿಜ ಎಂದು ನಂಬಿ ಬಿಡುತ್ತಾರೆ.
ನಾಲ್ಕು ವಾರಗಳಲ್ಲಿ ರು. 4,848ರಿಂದ ರು.6,107,878 ರಷ್ಟು ಹಣ ಕಳೆದುಕೊಂಡಿದ್ದೇನೆ ಎಂದು ಆನ್‍ಲೈನ್ ಡೇಟಿಂಗ್ ಸೈಟ್‍ನಲ್ಲಿ ಮೋಸದಾಟಕ್ಕೆ ಬಲಿಯಾದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ನಕಲಿ ಡೇಟಿಂಗ್ ಸೈಟ್‍ನಲ್ಲಿ ನೀಡಲಾದ ಪರ್ಸನಾಲಿಟಿ ಟೆಸ್ಟ್ಗಳಲ್ಲಿ ಪಾಲ್ಗೊಂಡು ಹೆಚ್ಚಿನವರು ತಮ್ಮ ವ್ಯಕ್ತಿತ್ವಗಳನ್ನು ಬಹಿರಂಗ ಪಡಿಸಿಕೊಳ್ಳುತ್ತಾರೆ. ಇದನ್ನೇ ದಾಳವಾಗಿಸಿ ನಕಲಿ ಪ್ರೊಫೈಲ್ಗಳು ಅಮಾಯಕರಿಂದ ದುಡ್ಡು ಕೀಳುವ ಮೋಸದಾಟವನ್ನು ಆಡುತ್ತವೆ ಎಂದು ತಜ್ಞರು ಹೇಳಿದ್ದಾರೆ.

Comments are closed.