ಗರ್ಭಿಣಿಯಾದವಳು 9 ತಿಂಗಳು ತುಂಬಿದ ನಂತ್ರ ಮಗುವಿಗೆ ಜನ್ಮ ನೀಡೋದು ಸಾಮಾನ್ಯ ಸಂಗತಿ. ಆದ್ರೆ ಇಲ್ಲೊಬ್ಬ ಮಹಿಳೆ ಗರ್ಭ ಧರಿಸಿ 17 ತಿಂಗಳುಗಳಾಗಿದೆ. ಇನ್ನೂ ಮಗುವಿಗೆ ಜನ್ಮ ನೀಡಿಲ್ಲ.
ಆಶ್ಚರ್ಯವಾದ್ರೂ ಇದು ಸತ್ಯ. ಚೀನಾದ ನಿವಾಸಿ ವಾಂಗ್ 2015ರಲ್ಲಿ ಗರ್ಭ ಧರಿಸಿದ್ದಾಳೆ. ಗರ್ಭಿಣಿಯಾದ ಮೊದಲ ತಿಂಗಳಿನಿಂದಲೇ ಈಕೆ ವೈದ್ಯರ ಬಳಿ ತೋರಿಸಿದ್ದಾಳೆ. ವೈದ್ಯರು 2015ರ ಕೊನೆಯಲ್ಲಿ ವಾಂಗ್ ಗೆ ಹೆರಿಗೆಯಾಗಲಿದೆ ಎಂದು ತಿಳಿಸಿದ್ದರಂತೆ. ವೈದ್ಯರು ಕೊಟ್ಟ ಡೇಟ್ ಮುಗಿದಿದೆ. ಆದರೂ ವಾಂಗ್ ಗೆ ಹೆರಿಗೆಯಾಗಿಲ್ಲ. ಇದರಿಂದ ಆತಂಕಗೊಂಡ ಮನೆಯವರು ವೈದ್ಯರ ಬಳಿ ತೋರಿಸಿದ್ದಾರೆ.
9 ತಿಂಗಳು ತುಂಬಿದ್ರೂ ಮಗುವಿನ ಬೆಳವಣಿಗೆ ಆಗಿರಲಿಲ್ಲವಂತೆ. ಈ ಸಮಯದಲ್ಲಿ ಹೆರಿಗೆ ಮಾಡಿಸುವುದು ಅಪಾಯ ಎಂದು ವೈದ್ಯರು ತಿಳಿಸಿದ್ದಾರೆ. ಈಗ ವಾಂಗ್ ಗೆ 17 ತಿಂಗಳು.
ಈಗಲೂ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆಯಾಗುತ್ತಿದೆಯಂತೆ. ಪೂರ್ತಿ ಬೆಳವಣಿಗೆ ನಂತ್ರ ಅಂದ್ರೆ 18ನೇ ತಿಂಗಳಿನಲ್ಲಿ ಹೆರಿಗೆ ಮಾಡಿಸುವುದಾಗಿ ವೈದ್ಯರು ಹೇಳಿದ್ದಾರೆ.
ಅತಿ ಹೆಚ್ಚು ಸಮಯ ಗರ್ಭವತಿಯಾದ ಮಹಿಳೆ ಎಂಬ ದಾಖಲೆಗೆ ವಾಂಗ್ ಸೇರಲಿದ್ದಾಳೆ. ವಿಶ್ವದ ಯಾವುದೇ ವೈದ್ಯರು ಮಾತ್ರ ಇದನ್ನು ಒಪ್ಪುತ್ತಿಲ್ಲ. 17 ತಿಂಗಳವರೆಗೆ ಗರ್ಭದಲ್ಲಿ ಮಗುವಿರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.
ಆದ್ರೆ ವಾಂಗ್ ಬಳಿ ಮೊದಲ ತಿಂಗಳಿನಿಂದ ಈವರೆಗಿನ ಎಲ್ಲ ದಾಖಲೆಗಳೂ ಇವೆ.

Comments are closed.