ಕರಾವಳಿ

ಮೋಹಕ ತಾರೆ ರಮ್ಯಾ ಲೋಕಸಭಾ ಚುನಾವಣೆಗೆ ಸ್ಪರ್ಧೆ : ಊಹಾಪೋಹಕ್ಕೆ ತೆರೆ ಎಳೆದ ಡಿಕೆಶಿ

Pinterest LinkedIn Tumblr

Ramya_acctres_1

__ಚಿತ್ರ ನಟಿ, ಮೋಹಕ ತಾರೆ (ಮಾಜಿ ಸಂಸದೆ) ರಮ್ಯಾ ಕರ್ನಾಟಕ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ರಮ್ಯಾ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎನ್ನುವುದೆಲ್ಲಾ ಊಹಾಪೋಹ.ಅವರು ಮುಂದೆ ಬರುವ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ರಮ್ಯಾ ಅವರನ್ನು ವಿಧಾನಪರಿಷತ್‌ಗೆ ನಾಮಕರಣ ಮಾಡುವ ಯಾವುದೇ ಆಲೋಚನೆಯೂ ರಾಜ್ಯ ಸರ್ಕಾರದ ಮುಂದಿಲ್ಲ. ಅದೆಲ್ಲಾ ಬರೀ ಸುಳ್ಳು. ಆದರೆ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರನ್ನು ತರುವ ಗುರಿ ಇರುವುದಂತೂ ಸತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‌ ಪಕ್ಷದಿಂದ ಅಮಾನತುಗೊಂಡಿರುವ ಎಂಟು ಮಂದಿ ಶಾಸಕರು ಕಾಂಗ್ರೆಸ್‌ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದರೆ ಸ್ವಾಗತಿಸುತ್ತೇವೆ. ಜಿಲ್ಲೆಯ ಜೆಡಿಎಸ್‌ನ ಅನೇಕ ಮುಖಂಡರು ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಮುಂದಿನ ಬೆಳವಣಿಗೆ ಏನಾಗುವುದೋ ಕಾದು ನೋಡೋಣ ಎಂದು ಡಿಕೆಶಿ ಹೇಳಿದ್ದಾರೆ.

Comments are closed.