ಕರಾವಳಿ

ಅಗಸ್ಟ್.24 : ಕಲ್ಕೂರ ಪ್ರತಿಷ್ಠಾನದಿಂದ‌ ಶ್ರೀ ಕ್ಷೇತ್ರ ಕದ್ರಿಯಲ್ಲಿ 33ನೇ ವರ್ಷದ ರಾಷ್ಟ್ರೀಯ ಮಕ್ಕಳ ಉತ್ಸವ, ಶ್ರೀಕೃಷ್ಣ ವೇಷ ಸ್ಪರ್ಧೆ : ಶ್ರೀಕೃಷ್ಣ ಗಾನ ವೈಭವ ಸ್ಪರ್ಧೆ ಹೊಸ ಸೇರ್ಪಡೆ

Pinterest LinkedIn Tumblr

Kalkura_krishna_Press_1

ಮಂಗಳೂರು, ಆಗಸ್ಟ್, 19 : ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು‌ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ಮೂರು ದಶಕಗಳಿಂದ ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ-ಶ್ರೀ ಕೃಷ್ಣ ವೇಷ ಸ್ಪರ್ಧೆ”ಯನ್ನು ಅಗಸ್ಟ್ 24ರ ಬುಧವಾರ ಕೃಷ್ಣಾಷ್ಟಮಿಯಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ‌ ಏರ್ಪಡಿಸಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಆಗಸ್ಟ್ 24ರಂದು ನಡೆಯಲಿರುವ 33ನೆ ವರ್ಷದ ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯಲ್ಲಿ ಹೊಸ ವಿಭಾಗ ಸೇರಿದಂತೆ ಒಟ್ಟು 27 ವಿಭಾಗಗಳಲ್ಲಿ ಈ ಬಾರಿ ಉತ್ಸವ ನಡೆಯಲಿದೆ. ಪ್ರಸಕ್ತ ವರ್ಷ ಶ್ರೀಕೃಷ್ಣ ಗಾನ ವೈಭವ ಸ್ಪರ್ಧೆ ಹೊಸ ಸೇರ್ಪಡೆಯಾಗಿದೆ ಎಂದರು.

ಅಗಸ್ಟ್ 24, ಬುಧವಾರ ಕೃಷ್ಣಾಷ್ಟಮಿಯಂದು ಬೆಳಿಗ್ಗೆ 9ರಿಂದರಾತ್ರಿ 9ರತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು27 ವಿಭಾಗಗಳಲ್ಲಿ, 8 ವೇದಿಕೆಗಳಲ್ಲಿ ಏಕ ಕಾಲದಲ್ಲಿ‌ಆಯೋಜಿಸಲಾಗಿದೆ ಮತ್ತು ಮಧ್ಯಾಹ್ನ 12ರಿಂದರಾತ್ರಿ 12ರವರೆಗೆ ವಿವಿಧ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಜೋಡಿಸಲಾಗಿದೆ.

ಮಕ್ಕಳಿಗಾಗಿ ಶ್ರೀಕೃಷ್ಣನಿಗೆ ಸಂಬಂಧಪಟ್ಟ ಜಾನಪದ, ಭಕ್ತಿಗೀತೆ, ಭಾವಗೀತೆಗಳ ಸಂಗೀತ ಸ್ಪರ್ಧೆ ಇದಾಗಿದ್ದು, ಶಿಶು, ಬಾಲ, ಕಿಶೋರ, ತರಣ ಹಾಗೂ ಮುಕ್ತ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಈ ಬಾರಿ ಬೆಳಗ್ಗೆ 9 ಗಂಟೆಗೆ ಶ್ರೀಕೃಷ್ಣ ವರ್ಣ ವೈಭವ ಚಿತ್ರಕಲಾ ಸ್ಪರ್ಧೆ ಹಾಗೂ 9:30ಕ್ಕೆ ಶ್ರೀಕೃಷ್ಣ ಗಾನ ವೈಭವ ಕಾರ್ಯಕ್ರಮದೊಂದಿಗೆ ಬೆಳಗ್ಗಿನಿಂದಲೇ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ಹೇಳಿದರು.

Kalkura_krishna_Press_2 Kalkura_krishna_Press_3

ಮಧ್ಯಾಹ್ನದ ವೇಳೆಗೆ ಕಂದಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ, ಗೀತಾ ಕೃಷ್ಣ, ಯಕ್ಷಕೃಷ್ಣ, ರಾಧಾಕೃಷ್ಣ, ಯಶೋಧ ಕೃಷ್ಣ, ಶಂಖನಾದ, ಶಂಖ ಉದ್ಘೋಷ, ದೇವಕಿ ಕೃಷ್ಣ, ವಸುದೇವ ಕೃಷ್ಣ, ನಂದ ಗೋಕುಲ, ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸಪ್ರಶ್ನೆ ಸ್ಪರ್ಧೆ, ಛಾಯಾಕೃಷ್ಣ ಮೊದಲಾದ ಶ್ರೀಕೃಷ್ಣ ವೇಷ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ಹೇಳಿದರು.

ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪಂಚಲೋಹದ ಶ್ರೀಕೃಷ್ಣನ ವಿಗ್ರಹ ಸೇರಿದಂತೆ ಪ್ರೋತ್ಸಾಹಕರಿಂದ ನೀಡಲಾಗುವ ಉಡುಗೊರೆಗಳನ್ನು ನೀಡಲಾಗುವುದು. ಕಳೆದ ವರ್ಷ ಸುಮಾರು 2,000 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಈ ಬಾರಿ 3,000 ಸ್ಪರ್ಧಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ರಸಪ್ರಶ್ನೆ ಸ್ಪರ್ಧಿಗಳಿಗೆ ಬಹುಮಾನ ಆಯ್ಕೆಯ ಅವಕಾಶ ;

ಶ್ರೀಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಿಗಳಿಗೆ ಬಹುಮಾನವಾರ್ಥವಾಗಿ ಸ್ಪರ್ಧಾ ವೇದಿಕೆಯಲ್ಲಿ ಇರಿಸಲಾಗುವ 150ಕ್ಕೂ ಅಧಿಕ ಪೂಜಾ ಹಾಗೂ ಸಾಂಸ್ಕೃತಿಕ ಪರಿಕರಗಳನ್ನು ಆಯ್ದುಕೊಳ್ಳುವ ಅವಕಾಶವಿರುತ್ತದೆ. ಕದ್ರಿ ದೇವಳದ ಆವರಣದಲ್ಲಿ ಸ್ಪರ್ಧೆ ನಡೆಯಲಿದ್ದು, ರಾತ್ರಿ 12 ಗಂಟೆಗೆ ಕೃಷ್ಣ ದೇವರಿಗೆ 12 ಬಗೆಯ ಉಂಡೆಗಳು, ಚಕ್ಕುಲಿ, ಕಡುಬು ಖಾದ್ಯಗಳನ್ನು ನೈವೇದ್ಯ ಮಾಡಿ ನೆರೆದ ಮಕ್ಕಳಿಗೆ ಪ್ರಸಾದ ರೂಪವಾಗಿ ಉಂಡೆ ಚಕ್ಕುಲಿ ವಿತರಿಸಲಾಗುವುದು. ಪಾಲಕರು ತಮ್ಮ ಮಕ್ಕಳಿಗೆ ಮನೆಗಳಲ್ಲಿ ಅಥವಾ ಇನ್ನಿತರ ಕಡೆಗಳಲ್ಲಿ ವೇಷ ಭೂಷಣ ಹಾಕಿಸಿ ಕರೆ ತರಬಹುದಾಗಿದೆ. ಯಾವುದೇ ಜಾತಿ ಮತ, ಧರ್ಮಗಳ ಬೇಧವಿಲ್ಲದೆ ಈ ಸ್ಪರ್ಧೆಯಲ್ಲಿ ಸಾರ್ವಜನಿಕರು ಭಾಗವಹಿಸಬಹುದು ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.

Kalkura_krishna_Press_4 Kalkura_krishna_Press_5

ಸ್ಫರ್ಧೆಯ ಸಂಪೂರ್ಣ ವಿವರ : ಅರ್ಘ್ಯ ಪ್ರಧಾನ – ಪ್ರಸಾದ ವಿತರಣೆಯೊಂದಿಗೆ ಸಂಪನ್ನ

ರಾಷ್ಟ್ರವ್ಯಾಪಿ ಮಾನ್ಯತೆಗೊಂಡ ಶ್ರೀ ಕೃಷ್ಣವೇಷ ಸ್ಪರ್ಧೆಗಳಲ್ಲಿ ಈ ಬಾರಿ ವಿಶೇಷವಾಗಿ ಶ್ರೀಕೃಷ್ಣ ಗಾನ ವೈಭವ ಎಂಬ ಹೊಸ ವಿಭಾಗವನ್ನೂ ಒಳಗೊಂಡಂತೆ ಒಟ್ಟು 27 ವಿಭಾಗಗಳಲ್ಲಿ ಕದ್ರಿ ದೇವಳದ ಒಟ್ಟು‌ಆವರಣದಲ್ಲಿ, * ಶ್ರೀ ಮಹಾಗಣಪತಿದೇವಸ್ಥಾನ * ಅಭಿಷೇಕ ಮಂದಿರ * ಕದ್ರಿಕೆರೆ‌ ಅಶ್ವತಕಟ್ಟೆ ಬಳಿ * ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ವೇದಿಕೆ * ಅಭಿಷೇಕ ಮಂದಿರ 1ನೇ ಮಹಡಿ * ಕಲ್ಯಾಣ ಮಂಟಪ * ಮಂಜುಶ್ರೀ * ಅಭಿಷೇಕ ಮಂದಿರ * ಪ್ರಧಾನ ವೇದಿಕೆ ಸಹಿತ‌ ಏಕಕಾಲದಲ್ಲಿ ನಡೆಯಲಿದೆ.

ಕಂದ ಕೃಷ್ಣ : ವಿಭಾಗದಲ್ಲಿ 1 ವರ್ಷದ ಕೆಳಗಿನ ಪುಟಾಣಿ ಕಂದಮ್ಮಗಳು ಭಾಗವಹಿಸಬಹುದಾಗಿದ್ದು ಮುದ್ದು ಕಂದಮ್ಮಗಳ ಜೊತೆತಾಯಂದಿರುಕೂಡಾ ವೇದಿಕೆಗೆ ಬರಬಹುದು

ಮುದ್ದು ಕೃಷ್ಣ : ವಿಭಾಗದಲ್ಲಿ 1 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 2 ವರ್ಷಕ್ಕಿಂತ ಕೆಳಗಿನ ಕಂದಮ್ಮಗಳು ಪಾಲ್ಗೊಳ್ಳಬಹುದಾಗಿದ್ದು, ಮುದ್ದು ಕಂದಮ್ಮಗಳ ಜೊತೆತಾಯಂದಿರುಕೂಡಾ ವೇದಿಕೆಗೆ ಬರಬಹುದು.

ತುಂಟ ಕೃಷ್ಣ : ವಿಭಾಗದಲ್ಲಿ 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಕ್ಕಿಂತ ಕೆಳಗಿನ ಪುಟಾಣಿಗಳು ಭಾಗವಹಿಸಬಹುದು.

ಬಾಲಕೃಷ್ಣ : ವಿಭಾಗದಲ್ಲಿ ಬಾಲವಾಡಿ, ಅಂಗನವಾಡಿ, ಎಲ್.ಕೆ.ಜಿ. ಪುಟಾಣಿಗಳು ಭಾಗವಹಿಸಬಹುದಾಗಿದೆ.

ಕಿಶೋರ ಕೃಷ್ಣ : ವಿಭಾಗದಲ್ಲಿ ಯು.ಕೆ.ಜಿ. ಮತ್ತು 1ನೇ ತರಗತಿ ಪುಟಾಣಿಗಳು ಪಾಲ್ಗೊಳ್ಳಬಹುದು .

ಶ್ರೀ ಕೃಷ್ಣ : ವಿಭಾಗದಲ್ಲಿ 2, 3, 4ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ಗೀತಾ ಕೃಷ್ಣ : ವಿಭಾಗದಲ್ಲಿ (ವೇಷಭೂಷಣದೊಂದಿಗೆಗೀತೋಪದೇಶದಚಿತ್ರಣಗೀತೆಯಾವುದಾದರೂ ಶ್ಲೋಕದ ಪಠನದೊಂದಿಗೆ) 7ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.(3+2 ನಿಮಿಷ).

ಯಕ್ಷ ಕೃಷ್ಣ : ವಿಭಾಗದಲ್ಲಿಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಶೈಲಿಯಾದಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವದೃಷ್ಟಿಯಿಂದಯಕ್ಷ ಕೃಷ್ಣ (ತೆಂಕುಯಾ ಬಡಗು) 10ನೇ ತರಗತಿವರೆಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ. ಈ ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಸಾಂಪ್ರದಾಯಿಕಯಕ್ಷಗಾನ ವೇಷಭೂಷಣಧರಿಸಬೇಕಾಗುವುದು (ಗರಿಷ್ಠ 5 ನಿ.)

ರಾಧಾಕೃಷ್ಣ : ವಿಭಾಗದಲ್ಲಿ 7ನೇ ತರಗತಿಯ ವರೆಗಿನ ಮಕ್ಕಳು ಭಾಗವಹಿಸಬಹುದಾಗಿದೆ.(ಜೋಡಿ)

ಯಶೋದ ಕೃಷ್ಣ : ವಿಭಾಗದಲ್ಲಿಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಮಹಿಳೆ ಯಶೋದೆಯಾಗಿ ಯಾವುದೇ ಮಗುಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು. ಮಹಿಳೆಗೆ ವಯೋಮಿತಿ ನಿರ್ಬಂಧವಿಲ್ಲ. ಮಗು(ಕೃಷ್ಣ) 12 ವರ್ಷದೊಳಗಿನವರಾಗಿರಬೇಕು.

ಶಂಖನಾದ: (ಸಾಂಪ್ರದಾಯಿಕ‌ ಉಡುಗೆಯೊಂದಿಗೆ) :- 7ನೇ ತರಗತಿವರೆಗಿನ ಮಕ್ಕಳಿಗಾಗಿ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು)

ಶಂಖ‌ಉದ್ಘೋಷ : (ಸಾಂಪ್ರದಾಯಿಕ‌ಉಡುಗೆಯೊಂದಿಗೆ) :-7ನೇ ತರಗತಿ ಮೇಲ್ಪಟ್ಟು (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು.)

ದೇವಕಿ ಕೃಷ್ಣ : ಈ ಹಿಂದೆಕದ್ರಿ ಶ್ರೀ ಕ್ಷೇತ್ರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿ ಸ್ಪರ್ಧಾಳುಗಳಾಗಿ ಭಾಗವಹಿಸಿದ ತಾಯಂದಿರು ದೇವಕಿಯಾಗಿ‌ ಅಥವಾ ಯಶೋಧೆಯಾಗಿ ಭಾಗವಹಿಸಬಹುದಾಗಿದೆ. ಈ ಸ್ಪರ್ಧಾಳು ತಮ್ಮ ಮಗು ಅಥವಾ ಯಾವುದೇ ಕೃಷ್ಣ ವೇಷಧಾರಿ ಮಗುವಿನೊಂದಿಗೆ ಬರಬಹುದು

ವಸುದೇವ ಕೃಷ್ಣ (ಮುಕ್ತ ವಿಭಾಗ) : ಪುರುಷ ವಸುದೇವನಾಗಿ ಮಗುವನ್ನು ಫ್ಲಾಸ್ಟಿಕ್‌ ರಹಿತವಾದ ಯಾವುದೇ ಬೆತ್ತ‌ ಅಥವಾ ಬೀಳು ಇನ್ನಿತರ ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ಸಾಂಪ್ರಾದಾಯಿಕ‌ ಉಡುಗೆಯೊಂದಿಗೆ ಭಾಗವಹಿಸಬಹುದು. ವಯೋಮಿತಿ ನಿರ್ಬಂಧವಿಲ್ಲ. (ಮಹಿಳೆಯರೂ ಪುರುಷವೇಷದೊಂದಿಗೆವಸುದೇವನಾಗಿಭಾಗವಹಿಸಬಹುದು.)

ನಂದಗೋಕುಲ (ಸಮೂಹ ವಿಭಾಗ) : ಕೃಷ್ಣನ ಯಾವುದೇ ಸನ್ನಿವೇಶವನ್ನು (ಕನಿಷ್ಠ 5 ಜನ) ಗುಂಪಿನಲ್ಲಿ  ಸ್ತಬ್ಧ ಚಿತ್ರದೃಶ್ಯ ಸ್ವರೂಪದೊಂದಿಗೆ ಪ್ರದರ್ಶಿಸಲು ಅವಕಾಶ ವಯೋಮಿತಿ ನಿರ್ಬಂಧವಿಲ್ಲ.

ಬಾಲಕೃಷ್ಣ ರಸಪ್ರಶ್ನೆ : 7ನೇ ತರಗತಿವರೆಗಿನ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು.)

ಶ್ರೀಕೃಷ್ಣ ರಸ ಪ್ರಶ್ನೆ ಸ್ಪರ್ಧೆ : 7ನೇ ತರಗತಿ ಮೇಲ್ಪಟ್ಟ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು.)

ಛಾಯಾಕೃಷ್ಣ : ದೇವಳದ ಪ್ರಾಂಗಣದ ನಿಗದಿತ ವೇದಿಕೆಯಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿ ಛಾಯಾಚಿತ್ರಕ್ಕೆ‌ ಅನುಕೂಲಕರವಾಗಿ‌ ಆಕರ್ಷಕ ಭಂಗಿಯಲ್ಲಿ‌ ಎಲ್ಲಾ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು. (ವಯೋಮಿತಿ ನಿರ್ಬಂಧವಿಲ್ಲ.)

ಶ್ರೀಕೃಷ್ಣ ವರ್ಣ ವೈಭವಚಿತ್ರಕಲಾ ಸ್ಪರ್ಧೆ : ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, 5 ವಿಭಾಗಗಳಲ್ಲಿ ನಡೆಯುವುದು. (ಶಿಶು, ಬಾಲ, ಕಿಶೋರ, ತರುಣ, ಮುಕ್ತವಿಭಾಗ) ಪರಿಕರಗಳೊಂದಿಗೆ ಹಾಜರಿರಬೇಕು. ಬೆಳಿಗ್ಗೆ 9.00 ರಿಂದ

ಶ್ರೀಕೃಷ್ಣ ಗಾನ ವೈಭವ : ಮಕ್ಕಳಿಗಾಗಿ ಶ್ರೀಕೃಷ್ಣನಿಗೆ ಸಂಬಂಧ ಪಟ್ಟ ಜಾನಪದ, ಭಕ್ತಿಗೀತೆ, ಭಾವಗೀತೆಗಳ ಸಂಗೀತ ಸ್ಪರ್ಧೆ 5 ವಿಭಾಗಗಳಲ್ಲಿ ನಡೆಯುವುದು (ಶಿಶು, ಬಾಲ, ಕಿಶೋರ, ತರುಣ) ಬೆಳಿಗ್ಗೆ ಗಂಟೆ 9.30ರಿಂದ

ಸ್ಪರ್ಧಾಳುಗಳೆಲ್ಲರಿಗೂ ಬಹುಮಾನ‌ ಉಡುಗೊರೆ : ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀ ಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥ ದೇವರ ಭಾವಚಿತ್ರ, ಪ್ರೋತ್ಸಾಹಕರಿಂದ ನೀಡಲ್ಪಟ್ಟ‌ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್‌ಭಗವದ್ಗೀತೆಯ ಪ್ರತಿಯನ್ನು‌ಆಕರ್ಷಕ ಬಟ್ಟೆ ಚೀಲದೊಂದಿಗೆ ನೀಡಲಾಗುವುದು.

ಬಹುಮಾನಗಳು :ಎಲ್ಲಾ ವಿಭಾಗದ ವಿಜೇತರಿಗೆ ಮೇಲ್ಕಾಣಿಸಿದ ಉಡುಗೊರೆಯ ಜೊತೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ವಿಶೇಷ ಉಡುಗೊರೆಗಳನ್ನು ಸ್ಪರ್ಧಾ ಸ್ಥಳದಲ್ಲೇ ಭಾಗವಹಿಸಿದ ತಕ್ಷಣ ನೀಡುವುದಲ್ಲದೆ ಬಹುಮಾನಗಳನ್ನು ಆದೇ ದಿನ ಸಂಜೆಕ್ಷೇತ್ರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು.

Kalkura_krishna_Press_6 Kalkura_krishna_Press_7 Kalkura_krishna_Press_8

* ಅತೀ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿದ ವಿದ್ಯಾ ಸಂಸ್ಥೆಗೆ ಪಾರಿತೋಷಕ ನೀಡಲಾಗುವುದು.
* ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
* ಕೃಷ್ಣ ವೇಷಧಾರಿ ಪುಟಾಣಿಗಳ ಗ್ರೂಪ್ ಫೋಟೋ: ಮಧ್ಯಾಹ್ನ 3.30ಕ್ಕೆ ಪತ್ರಿಕೆ /ದೃಶ್ಯ ಮಾಧ್ಯಮಗಳಿಗೆ ವಿಶೇಷವಾಗಿ ಕಂದಮ್ಮಗಳ
ಗ್ರೂಪ್ ಫೋಟೋತೆಗೆಯುವ ವ್ಯವಸ್ಥೆ ಶ್ರೀ ಕ್ಷೇತ್ರದ ದೀಪಸ್ತಂಭದ‌ ಎದುರುಗಡೆ ಮಾಡಲಾಗಿದೆ.
* ಬಿಸಿ ಹಾಲು / ಪೇಡ- ಐಸ್‌ಕ್ರೀಮ್ ಮಕ್ಕಳಿಗೆ ಮಾತ್ರ: ಈ ಮಕ್ಕಳ ಉತ್ಸವದಲ್ಲಿ ಸ್ಪರ್ಧಿಸುವ ಸ್ಪರ್ಧಾಳು ಮಕ್ಕಳಿಗೆ ಮಾತ್ರ ಬಿಸಿ ಹಾಲು,
ಪೇಡಾ, ಐಸ್‌ಕ್ರೀಮ್‌ಚಾಕ್‌ಲೆಟ್ ನೀಡಲಾಗುವುದು.
*ಈ ವಿಶೇಷ ಉತ್ಸವದಲ್ಲಿ ಭಾಗವಹಿಸುವ ಅಶಕ್ತ ಅಂಗವಿಕಲ ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ಮತ್ತು ಸಂಘಟನೆಗಳಿಗೆ ವಿಶೇಷವಾಗಿ ಪ್ರೋತ್ಸಾಹ ನೀಡಲಾಗುವುದು
ಈ ಬಾರಿಯ ವಿಶೇಷತೆ
*ಒಟ್ಟು27 ವಿಭಾಗದಲ್ಲಿ ಏಕ ಕಾಲದಲ್ಲಿಕದ್ರಿ ದೇವಳದ ಒಟ್ಟು‌ಆವರಣದಲ್ಲಿ ಸ್ಪರ್ಧೆಗಳು ಜರಗಲಿವೆ.

* `ಶ್ರೀಕೃಷ್ಣ ಗಾನ ವೈಭವ’ :(ಒಟ್ಟುನಾಲ್ಕು ವಿಭಾಗಗಳಲ್ಲಿ) ನಡೆಯುವುದು. (ಶಿಶು, ಬಾಲ, ಕಿಶೋರ, ತರುಣ, ಮುಕ್ತವಿಭಾಗ) ಬೆಳಿಗ್ಗೆ 9.30ರಿಂದ
* ಶ್ರೀ ಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಾಳುಗಳಿಗೆ ಬಹುಮಾನಾರ್ಥವಾಗಿ ಸುಮಾರು 150ಕ್ಕೂ ಮಿಕ್ಕಿ ನಿತ್ಯ ಪೂಜಾ‌ಅಥವಾ ಸಾಂಸ್ಕೃತಿಕ ಪರಿಕರಗಳನ್ನು (ಶಂಖ, ಜಾಗಟೆ, ಬೆಳ್ಳಿ ತುಳಸಿ ಮಣಿ ಸರ, ಬೆಳ್ಳಿಕಟ್ಟಿದ ಅಭಿಶೇಕ ಶಂಖ, ಮುದ್ರೆ, ತಾಳ, ಆರತಿ, ದೀಪ ಇತ್ಯಾದಿ ನೀಡಲಾಗುವುದು.)
* ರಾತ್ರಿ 12 ಗಂಟೆಗೆ ಶ್ರೀ ಕೃಷ್ಣ ದೇವರಿಗೆ 12 ಬಗೆಯ ಉಂಡೆಗಳು, ಚಕ್ಕುಲಿ, ಕಡುಬು‌ಇನ್ನಿತರ ಖಾದ್ಯಗಳನ್ನು ನೈವೇದ್ಯ ಮಾಡಿ ನೆರೆದ ಮಕ್ಕಳಿಗೆ ಪ್ರಸಾದರೂಪವಾಗಿ‌ಉಂಡೆ ಚಕ್ಕುಲಿಗಳನ್ನು ವಿತರಿಸಲಾಗುವುದು. ಸಾರ್ವಜನಿಕರಿಗೂ‌ಅರ್ಘ್ಯ ಪ್ರದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
* ಪಾಲಕರುತಮ್ಮ ಮಕ್ಕಳಿಗೆ ಅವರವರ ಮನೆಗಳಲ್ಲೇ ಅಥವಾ‌ಇತರ ಕಡೆಗಳಲ್ಲಿ ವೇಷ ಭೂಷಣವನ್ನು ಹಾಕಿಸಿ ತರಬಹುದು‌ಅಥವಾ ಸ್ಥಳದಲ್ಲೇ ಅವರವರ ವೆಚ್ಚದಲ್ಲಿ ವೇಷವನ್ನು ಹಾಕಿಸ ಬಹುದಾಗಿದೆ. ವೇಷಭೂಷಣಗಳಲ್ಲಿ ಆಡಂಬರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಮಕ್ಕಳ ಮುಗ್ದ ಸೌಂದರ್‍ಯದ ನೈಜತೆಯನ್ನು ಹೊರಸೂಸುವ ವೇಷಗಳನ್ನು ಧರಿಸಿಕೊಂಡಿರಲಿ ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.
* ಖ್ಯಾತಛಾಯಾಗ್ರಾಹಕರು ಸ್ಥಳದಲ್ಲಿ ಹಾಜರಿದ್ದು‌ಆಸಕ್ತರುತಮ್ಮ ಮಕ್ಕಳ ವೈಯಕ್ತಿಕಛಾಯಾಚಿತ್ರವನ್ನು‌ಅವರವರ ಸ್ವಂತ ವೆಚ್ಚದಲ್ಲಿತೆಗೆಯುವ ಬಗ್ಗೆ ವ್ಯವಸ್ಥೆ ಮಾಡಲಾಗಿದೆ.

ಈ ಉತ್ಸವದ ಬಗ್ಗೆ ಹೆಚ್ಚಿನ ವಿವರಗಳಿಗೆ: ಕಲ್ಕೂರ ಪ್ರತಿಷ್ಠಾನ, ಶೀ ಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಫೋನ್: 0824-2492239, 9448125949, 9845083736 Email :kalkuraadvt@rediffmail.com, pradeep.kalkura@gmail.com ದಯಾನಂದಕಟೀಲ್, ಶಾರದಾ ವಿದ್ಯಾಲಯ, ಮಂಗಳೂರುಫೋನ್: 2493089/94485 45578, dayakateel1992@gmail.com, ಕದ್ರಿ ನವನೀತ ಶೆಟ್ಟಿ, ಫೋನ್: 2213061/94481 23061, ಸುಧಾಕರರಾವ್ ಪೇಜಾವರ, ಫೋನ್: 2214093/2443360, ಗೋಕುಲ ಕೆ. ಫೋನ್: 2214176, 9448549456, ಯೋಜನಾಧಿಕಾರಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಫೋನ್: 2425059, ಕದ್ರಿ ಶ್ರೀ ಮಂಜುನಾಥದೇವಸ್ಥಾನ ಫೋನ್:2214176 ಇವರನ್ನು ಸಂಪರ್ಕಿಸಬಹುದು.

ಈ ವರ್ಷ‌ಎರಡೂವರೆಸಾವಿರಕ್ಕೂ ಮಿಕ್ಕಿ ಪುಟಾಣಿಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದು ಈ ರಾಷ್ಟ್ರಮಟ್ಟದ ಮಕ್ಕಳ ಉತ್ಸವದಲ್ಲಿ‌ಎಲ್ಲಾ ನಾಗರಿಕ ಬಂಧುಗಳು, ಗಣ್ಯರು, ಆಡ್ಯ ಮಹನೀಯರು ಪಾಲ್ಗೊಂಡು ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಬೇಕೆಂದು ಪ್ರದೀಪಕುಮಾರ ಕಲ್ಕೂರ ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕದ್ರಿ ನವನೀತ ಶೆಟ್ಟಿ, ವಿಜಯಲಕ್ಷ್ಮಿ ಬಿ., ದಯಾನಂದ ಕಟೀಲು, ಕೆ.ಎಸ್. ಕಲ್ಲೂರಾಯ, ಸೇರಾಜೆ ಗೋಪಾಲಕೃಷ್ಣ ಭಟ್, ಜನಾರ್ದನ ಹಂದೆ, ನಾರಾಯಣ ಭಟ್, ಡಾ. ಹರಿಪ್ರಸಾದ್ ತುದಿಯಡ್ಕ, ರಘುನಾಥ ಮೊದಲಾದವರು ಉಪಸ್ಥಿತರಿದ್ದರು.

Comments are closed.