ಸೌದಿ ಅರೇಬಿಯಾ : ಗಲ್ಫ್ ರಾಷ್ಟ್ರದಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿ ಸಂಘಟನೆಯಾದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಅಧೀನ ಸಂಸ್ಥೆಯಾದ ಅಲ್ ಇಹ್ಸಾನ್ ಅಕಾಡಮಿ ಸ್ಕೂಲ್ ಹಾಗೂ ಮರ್ಕಜ್ ನಲ್ಲಿ 70 ನೆೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು.
ಕ್ರಮವಾಗಿ ಅಲ್ ಇಹ್ಸಾನ್ ಅಕಾಡಮಿ ಸ್ಕೂಲ್ ನಲ್ಲಿ ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರಾದ ಅಬ್ದುಲ್ ಹಮೀದ್ ಉಳ್ಳಾಲ ಅರಮೆಕ್ಸ್ ರವರು ಹಾಗೂ ಮರ್ಕಜ್ ಕ್ಯಾಂಪಸ್ ನಲ್ಲಿ ಮರ್ಕಜ್ ಕಮಿಟಿ ಯ ಉಪಾಧ್ಯಕ್ಷರಾದ ಎಂ.ಎಚ್.ಬಿ.ಮುಹಮ್ಮದ್ ರವರು ದ್ವಜಾರೋಹಣ ನೆರವೇರಿಸಿದರು.
ಸಮಾರಂಭದಲ್ಲಿ ಡಿ.ಕೆ.ಎಸ್.ಸಿ. ಗಲ್ಫ್ ರಾಷ್ಟ್ರಗಳ ನೇತಾರರಾದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಕಿನ್ಯ, ಯು.ಎ.ಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಹೆಜಮಾಡಿ , ಯು.ಎ.ಇ ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಜನಾಬ್. ಎಂ ಇ.ಮೂಳೂರು, ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ಇದರ ಕರೆಸ್ಪೋಡೆಂಟ್ ಎಡ್ವಕೇಟ್ ಮುಹಮ್ಮದ್ ಅಲಿ , ಕೇಂದ್ರ ಸಮಿತಿ ನೇತಾರರಾದ ಶಂಶುದ್ದೀನ್ ಬಳ್ಕುಂಜೆ, ಹುಸೈನಬ್ಬ ಮೂಳೂರು, ಫಾರೂಕ್ ಕರ್ನಿರೆ ಮರ್ಕಜ್ ಕಮಿಟಿ ಯ ಉಪಾಧ್ಯಕ್ಷರಾದ ಬದ್ರುದ್ದೀನ್ ಬಜ್ಪೆ , ಡೆವಲಪ್ ಕಮಿಟಿ ಅಧ್ಯಕ್ಷರಾದ ಇಶಾಕ್ ಬೊಳ್ಳಾಯಿ , ಉಪಾಧ್ಯಕ್ಷರಾದ ವೈ.ಅಹಮದ್ ಹಾಜಿ , ರಾಸ್ ಅಲ್ ಖೈಮಾ ಯುನಿಟ್ ಅಧ್ಯಕ್ಷರಾದ ಮಹಮ್ಮದ್ ಅಲಿ ಮೂಡುತೋಟ, ಯು.ಎ.ಇ ರಾಷ್ಟೀಯ ಸಮಿತಿಯ ನಾಯಕರಾದ ನವಾಜ್ ಕೋಟೆಕ್ಕಾರ್ , ಇಸ್ಮಾಯಿಲ್ ಬಾರೊದ್, ನಜೀರ್ ಕಣಂಗಾರ್ , ಆಮೀರ್ ಹಳೆಯಂಗಡಿ , ಭಾಗವಹಿಸಿದ್ದರು.
ಸಮಾರಂಭದಲ್ಲಿ ಮರ್ಕಜ್ ಮೆನೇಜರ್ ಮೌಲಾನಾ ಮುಸ್ತಫಾ ಸಆದಿ, ಕಾಲೇಜು ಪ್ರಿನ್ಸ್ ಪಾಲ್ ಹಬೀಬ್ ರಹ್ಮಾನ್ , ಹೈಸ್ಕೂಲ್ ಹೆಡ್ ಮಾಸ್ಟರ್ ಜಯಪ್ರಸನ್ನ ಕುಮಾರಿ, ಪ್ರೈಮರಿ ಹೆಡ್ ಮಾಸ್ಟರ್ ಪ್ರಮೀಳಾ , ಮರ್ಕಜ್ ಅಸಿಸ್ಟೆಂಟ್ ಮೆನೇಜರ್ ಸಿದ್ದಿಕ್ ಸಆದಿ ಆತೂರ್ ,ವೈ.ಬಿ.ಸಿ.ಬಷೀರ್ ಅಲಿ ,ಪಾರೂಕ್ ಸುರತ್ಕಲ್ , ಅಬುಲ್ ಹಮೀದ್ ಹೆಜಮಾಡಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯುಶಸ್ವಿಯಾಗಿ ನಡೆಸಿಕೊಟ್ಟರು.
ವರದಿ. ಯಸ್.ಯೂಸುಫ್ ಅರ್ಲಪದವು
Comments are closed.