
ಮಂಗಳೂರು : ಬೆಂಗಳೂರಿನ ದಿ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಅನ್ನುಸ್ಟಿ ಇಂಟರ್‌ನ್ಯಾಷಿನಲ್ ಇಂಡಿಯಾ ಸಂಸ್ಥೆಯು ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ದೇಶದ್ರೋಹಿ ಹಾಗೂ ಭಾರತವನ್ನು ರಕ್ಷಿಸುವ ಜವಾವ್ದಾರಿಯನ್ನು ಹೊತ್ತ ನಮ್ಮ ಸೈನಿಕರ ವಿರುದ್ಥ ಘೋಷಣೆಗಳನ್ನು ಕೂಗಿ ಅವರನ್ನು ಅವಮಾನಿಸಿರುವುದಷ್ಟೇ ಅಲ್ಲದೆ ಈ ದೇಶದ ಐಕ್ಯತೆಗೆ ಧಕ್ಕೆ ತರಲು ಪ್ರಯತ್ನಿಸಿರುವುದು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ ಎಂದು ದ.ಕ ಬಿಜೆಪಿಯ ಜಿಲ್ಲಾ ವಕ್ತಾರರಾದ ವಿಕಾಸ್ ಪುತ್ತೂರು ತಿಳಿಸಿದ್ದಾರೆ.
ಕಾರ್‍ಯಕ್ರಮದಲ್ಲಿ ಬಳಸಲಾದ ದೇಶವಿರೋಧಿ ಘೋಷಣೆಗಳ ಹಾಗೂ ಪ್ರತ್ಯೇಕವಾದಿ ಭಯೋತ್ಪಾದಕರನ್ನು ಪ್ರಚೋದಿಸುವ ಹೇಳಿಕೆಗಳ ಸೂಕ್ತ ದೃಶ್ಯ ತುಣುಕುಗಳು ಲಭ್ಯವಿದ್ದರು ಈವರೆಗೂ ಎಫ್ ಐ ಆರ್ ದಾಖಲಿಸಿದಿರುವುದು ಹಾಗು ಯಾರನ್ನು ಕೂಡ ಈವರೆಗೂ ಬಂಧಿಸಿದಿರುವುದು ಖಂಡನೀಯ .
ಮೇಲ್ನೋಟಕ್ಕೆ ದೆಹಲಿಯ ಜವಾಹರ್‌ಲಾಲ್ ವಿಶ್ವವಿದ್ಯಾಲಯದಲ್ಲಿ ಜರುಗಿದ ದೇಶವಿರೋಧಿ ಕಾರ್‍ಯಕ್ರಮದ ಮಾದರಿಯನ್ನೇ ಅನುಸರಿಸಿರುವಂತೆ ಕಾಣೂತ್ತುರುವುದರಿಂದ ಈ ಕಾರ್‍ಯಕ್ರಮದ ಹಿನ್ನಲೆ ಹಾಗೂ ದೇಶವಿರೋಧಿಗಳೊಟ್ಟಿಗಿನ ಆಯೋಜಕರ ನಂಟಿನ ಬಗ್ಗೆ ಸೂಕ್ತ ತನಿಖೆ ಅವಶ್ಯಕ.
ರಾಕ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ದೇಶಭಕ್ತರನ್ನು ದಮನಿಸುವರನ್ನ ಹಾಗೂ ದೇಶವಿರೀಧಿ ಚಟುವಟಿಕೆಗಳಿಗೆ ಉತ್ತೇಜಿಸುವಂತೆ ಕಾರ್‍ಯಕ್ರಮಗಳಿಗೆ ವೇಗಸಿಕ್ಕಿರುವುದು ದುರಂತ.ಕರಾವಳಿಯ ಭಾಗಗಳು ಇತ್ತೀಚಿನ ಭಯೋತ್ಪಾದಕರ ಹಾಗೂ ಬಹುಸಂಖ್ಯಾತ ದ್ವೇಒಗಳ ಅಡಗುತಾಣ ಹಾಗೂ ಭದ್ರಕೋಟೆಯಾಗಿ ಮಾರ್ಪಾಡಾಗುತ್ತಿದ್ದರೂ ಸರ್ಕಾರ ಮೌನವಹಿಸಿರುವುದು ಕಾಂಗ್ರೆಸ್‌ನ ಮೃಧು ಧೋರಣಿಗೆ ದೃಷ್ಠಾಂತ.ಬೆಂಗಳೂರಿನಲ್ಲಿ ಜರಿಗಿದ ಇಂತಹ ದೇಶವಿರೋಧಿ ಕಾರ್‍ಯಕ್ರಮಗಳ ಮುಂಬರುವದಿನಗಳಲ್ಲಿ ರಾಜ್ಯದ ಬೇರೆಲ್ಲಿಯೂ ಜರುಗದಂತೆ ಹಾಗೂ ಆಯೋಜಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Comments are closed.