ಮಂಗಳೂರು: ಕೆಲವೊಂದು ಕಡೆ ನೀರು ಕುಡಿಯಲು ಕೇಳಿದರೆ ನೀರಿನ ಜೊತೆ ಬೆಲ್ಲದ ತುಂಡುಗಳನ್ನು ಕೂಡ ತಂದಿಡುತ್ತಾರೆ. ಅದೊಂದು ಸಂಪ್ರದಾಯ, ಆದರೆ ಬೆಲ್ಲ ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಬೆಲ್ಲವನ್ನು ತಿಂದರೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಮಾತ್ರವಲ್ಲ, ದೊಡ್ಡ ಸಮಸ್ಯೆಯನ್ನೂ ದೂರವಿಡಬಹುದು. ಬನ್ನಿ ಬೆಲ್ಲದಲ್ಲಿರುವ ಆರೋಗ್ಯಕರ ಗುಣಗಳೇನು ಎಂದು ನೋಡೋಣ:
1.ರಕ್ತವನ್ನು ಶುದ್ಧೀಕರಿಸುತ್ತದೆ ಈ ಸಿಹಿ ವಸ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಆದ್ದರಿಂದ ದಿನಾ ಸ್ವಲ್ಪ ಬೆಲ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಜೀರ್ಣಕ್ರಿಯೆಗೆ ಒಳ್ಳೆಯದು ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು.
2.ಹೊಟ್ಟೆಯನ್ನು ತಂಪಾಗಿಸುತ್ತದೆ :ಬೆಲ್ಲ ಹೊಟ್ಟೆಯನ್ನು ತಂಪಾಗಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೋಳ್ಳಿ.
3.ರಕ್ತ ಹೀನತೆ ಇರುವವರಿಗೆ ಅತ್ಯುತ್ತಮವಾದ ಮನೆಮದ್ದು ಇದಾಗಿದೆ. ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ. ಹದಿ ಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು.
4.ತ್ವಚೆಗೆ ತುಂಬಾ ಒಳ್ಳೆಯದು ಬೆಲ್ಲ ತ್ವಚೆಗೆ ತುಂಬಾ ಒಳ್ಳೆಯದು. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ, ಮೊಡವೆಯನ್ನು ಕಮ್ಮಿಗೊಳಿಸುತ್ತದೆ. ಇದು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.
5.ಗಂಟಲು ಕೆರೆತ, ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.
6.ತುಂಬಾ ದಣಿವಾದಾಗ ಗ್ಲೂಕೋಸ್ ಅಥವಾ ಎನರ್ಜಿ ಡ್ರಿಂಕ್ಸ್ ನ ಅಗತ್ಯವಿಲ್ಲ, ಒಂದು ಬೆಲ್ಲದ ತುಂಡನ್ನು ಬಾಯಿಗೆ ಹಾಕಿ ನೀರು ಕುಡಿದರೆ ಸಾಕು, ದಣಿವು ಕ್ಷಣಾರ್ಧದಲ್ಲಿ ಮಾಯ.
7.ಬೆಲ್ಲದ ಚೂರನ್ನು ಬಾಯಿಗೆ ಹಾಕಿ ಕೊಂಡರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ. ಅಸ್ತಮಾ ಕಾಯಿಲೆ ಇರುವವರು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದು ಒಳ್ಳೆಯದು.
8.ಸಂಧಿನೋವನ್ನು ಕಡಿಮೆ ಮಾಡುತ್ತದೆ ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ.
9.ಮೈಗ್ರೇನ್ ಕಾಯಿಲೆಯನ್ನು ಗುಣ ಪಡಿಸುವಲ್ಲಿ ಕೂಡ ಬೆಲ್ಲ ಸಹಾಯ ಮಾಡುತ್ತದೆ. ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ.
10.ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲ ತಿನ್ನಿ, ನೋವು ಕಡಿಮೆಯಾಗುವುದು.
Comments are closed.