ಮೂಗಿನ ಅಕ್ಕಪಕ್ಕದಲ್ಲಿ ಮತ್ತು ಮೂಗಿನ ಮೇಲ್ಭಾಗದಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ನಂತೆಯೇ ವೈಟ್ ಹೆಡ್ ಎಂಬ ಬಿಳಿ ಚುಕ್ಕೆಗಳೂ ಸೌಂದರ್ಯವನ್ನು ಕುಗ್ಗಿಸುವ ಜೊತೆಗೇ ಚಿಂತೆಯನ್ನೂ ಹೆಚ್ಚಿಸುತ್ತವೆ. ವಾಸ್ತವವಾಗಿ ಕಪ್ಪು ಚುಕ್ಕೆಗಳಷ್ಟು ಸ್ಪಷ್ಟವಾಗಿ ಈ ಬಿಳಿಚುಕ್ಕೆಗಳು ಕಾಣದೇ ಇರುವ ಕಾರಣ ಇವುಗಳನ್ನು ನಿವಾರಿಸ ಹೋದಾಗ ನೋವು ಬಾಧಿಸಬಹುದು.
ಬಿಳಿ ಚುಕ್ಕೆಗಳು ಕಪ್ಪು ಚುಕ್ಕೆಯಂತೆಯೇ ಚರ್ಮದ ತೈಲ ಧೂಳು ಮತ್ತು ಬ್ಯಾಕ್ಟೀರಿಯಾಗಳು ಚರ್ಮದ ಸೂಕ್ಷ್ಮರಂಧ್ರದಲ್ಲಿ ಬಂಧಿಯಾಗಿ ಹೊರಹೋಗಲು ಜಾಗವಿಲ್ಲದೇ ಒಳಗೇ ಸೋಂಕು ಉಂಟಾಗುವ ಮೂಲಕ ಕೆಳಚರ್ಮದಲ್ಲಿ ಭದ್ರವಾಗಿ ಕುಳಿತುಕೊಂಡಿರುತ್ತವೆ.
ಆದರೆ ಇದರ ತುದಿ ಬ್ಲಾಕ್ ಹೆಡ್ಗಿಂತಲೂ ಅತಿ ಚಿಕ್ಕದಾಗಿದ್ದು ಥಟ್ಟನೆ ಕಾಣಿಸದೇ ಇದ್ದರೂ ಬುಡದಲ್ಲಿ ಮಾತ್ರ ಹೂಜಿಯಂತೆ ಊದಿಕೊಂಡಿರುತ್ತದೆ. ಇದರ ಪರಿಣಾಮವಾಗಿ ಒಳಗಿನ ಊದಿಕೊಂಡ ಭಾಗ ಹೆಚ್ಚು ಹೆಚ್ಚು ಊದಿಕೊಳ್ಳುತ್ತಾ ಅಕ್ಕಪಕ್ಕದ ನರಗಳಿಗೆ ಸಂವೇದನೆ ನೀಡುವಷ್ಟು ಬೆಳೆದ ಬಳಿಕವೇ ಇವುಗಳ ಇರುವಿಕೆ ಗೊತ್ತಾಗುತ್ತದೆ.
ಇದನ್ನು ನಿವಾರಿಸಲು ಚಿವುಟಿದರೆ ತುಂಬಾ ನೋವಾಗುತ್ತದೆ. ಬೇಸರದ ಸಂಗತಿ ಎಂದರೆ ಇವುಗಳನ್ನು ಒಂದೇ ಪ್ರಯತ್ನದಲ್ಲಿ ನಿವಾರಿಸುವ ವಿಧಾನ ಅಥವಾ ಔಷಧಿ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ಸೂಕ್ತ ಆರೈಕೆಯಿಂದ ನಿಧಾನವಾಗಿ ಇದನ್ನು ಗುಣಪಡಿಸಬಹುದು.
ಮಾರುಕಟ್ಟೆಯಲ್ಲಿ ಇದಕ್ಕೆ ಹಲವು ಮದ್ದುಗಳು, ಕ್ರೀಮುಗಳು ಲಭ್ಯವಿವೆ. ಸೌಂದರ್ಯ ಮಳಿಗೆಯಲ್ಲಿಯೂ ಉತ್ತಮ ಸೇವೆ ಪಡೆಯಬಹುದು. ಆದರೆ ಇವೆಲ್ಲವೂ ದುಬಾರಿ, ಸಮಯ ಕಬಳಿಸುವ ಮತ್ತು ನೋವು ಅನಿವಾರ್ಯವಾದ ವಿಧಾನಗಳಾಗಿವೆ. ಸ್ವತಃ ಬಳಸಬಹುದಾದ ಮೂಗಿನ ಮೇಲೆ ಅಡ್ಡಲಾಗಿ ಹಚ್ಚಿ ಎಳೆದು ಕೀಳಬಹುದಾದ ಪಟ್ಟಿಗಳೂ ಲಭ್ಯವಿವೆ.
ಆದರೆ ಈ ವಿಧಾನದಿಂದ ವೈಟ್ ಹೆಡ್ ಚುಕ್ಕಿಯ ತುದಿಭಾಗವನ್ನು ಮಾತ್ರ ಕೀಳಬಹುದೇ ಹೊರತು ಬುಡದ ಊದಿಕೊಂಡ ಭಾಗವನ್ನಲ್ಲ. ಇದು ಮತ್ತೆ ತುಂಬಿಕೊಂಡು ಪದೇ ಪದೇ ಈ ಪಟ್ಟಿಯನ್ನು ಉಪಯೋಗಿಸುತ್ತಾ ಇರಬೇಕಾಗುತ್ತದೆ. ಇದರಿಂದ ಪಟ್ಟಿ ತಯಾರಿಸುವ ಸಂಸ್ಥೆಯ ತಿಜೋರಿ ತುಂಬುತ್ತದೆಯೋ ಹೊರತು ನಿಮ್ಮ ವೈಟ್ ಹೆಡ್ ನಿವಾರಣೆಯಾಗುವುದಿಲ್ಲ.
ಆದರೆ ಇದನ್ನು ಬುಡಸಹಿತ ನಿವಾರಿಸಲು ಅತ್ಯಂತ ಅಗ್ಗ, ಸುಲಭ ಮತ್ತು ಕೊಡಲಿಯೇ ಬೇಕಾಗಿದುದಕ್ಕೆ ಉಗುರೇ ಸಾಕು ಎನಿಸುವ ನಿಮ್ಮ ಹಲ್ಲುಜ್ಜುವ ಪೇಸ್ಟ್ ಸಾಕು. ಇದರ ಸರಿಯಾದ ಬಳಕೆಯಿಂದ ಒಮ್ಮೆಲೇ ವೈಟ್ ಹೆಡ್ ಗಳು ನಿವಾರಣೆಯಾಗದಿದ್ದರೂ ನಿಧಾನವಾಗಿ, ಆದರೆ ಬುಡಸಹಿತ ಇಲ್ಲವಾಗುತ್ತವೆ.
ಅಗತ್ಯವಿರುವ ಸಾಮಾಗ್ರಿಗಳು:*ಯಾವುದೇ ಪುದೀನಾ ಇರುವ ಪೇಸ್ಟ್ (mint toothpaste). ಇಲ್ಲದಿದ್ದರೆ ಬೇರೆ ಬಿಳಿಯ ಪೇಸ್ಟ್ ಆದರೂ ಸರಿ, ಇದಕ್ಕೆ ಕೊಂಚ ಅವಶ್ಯಕ ಪುದೀನಾ ತೈಲ ಸೇರಿಸಿಯೂ ಬಳಸಬಹುದು. *ಐಸ್ ತುಂಡುಗಳು ವೈಟ್ ಹೆಡ್ ಸಮಸ್ಯೆಗೆ ಅಕ್ಕಿ ಹಿಟ್ಟು-ಗುಲಾಬಿ ನೀರಿನ ಫೇಸ್ ಪ್ಯಾಕ್
ಬಳಕೆಯ ವಿಧಾನ:
1.ಮೊದಲು ಕೊಂಚ ಪೇಸ್ಟ್ ಹಾಗೂ ಇದರ ಅರ್ಧದಷ್ಟು ಪ್ರಮಾಣದ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರಲ್ಲಿರುವ ಪುದಿನಾ ಚರ್ಮದ ಸೂಕ್ಷ್ಮರಂಧ್ರಗಳನ್ನು ತೆರೆಯಲು ನೆರವಾಗುತ್ತದೆ. ಉಪ್ಪು ತೆರೆದ ರಂಧ್ರಗೊಳಗೆ ಇಳಿದು ಅಲ್ಲಿನ ಕೊಳೆಯನ್ನು ಸಡಿಲಗೊಳಿಸಿ ನೀರಾಗಿಸಲು ನೆರವಾಗುತ್ತದೆ.
2. ಈ ಮಿಶ್ರಣವನ್ನು ಕೇವಲ ವೈಟ್ ಹೆಡ್ ಇರುವಲ್ಲಿ ಮಾತ್ರ ಹಚ್ಚಿ. ಬೇರೆಡೆ ಹಚ್ಚಬೇಡಿ, ಆ ಭಾಗಕ್ಕೆ ಉಪ್ಪಿನ ಪ್ರಭಾವ ಹೆಚ್ಚಾಗಿ ಉರಿ ತರಬಹುದು
.3. ಬಳಿಕ ಸುಮಾರು ಐದು ನಿಮಿಷ ಹಾಗೇ ಒಣಗಲು ಬಿಡಿ
4. ನಂತರ ತಣ್ಣೀರು ಬಳಸಿ ಈ ಭಾಗವನ್ನು ನಯವಾದ ಮಸಾಜ್ ಮೂಲಕ ಉಜ್ಜಿಕೊಳ್ಳುತ್ತಾ ಬನ್ನಿ
5. ನಂತರ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಂಡು ಟವೆಲ್ ಒತ್ತಿ ಒರೆಸಿಕೊಳ್ಳಿ. ನಂತರ ಐಸ್ ತುಂಡಿನಿಂದ ಮೂಗಿನ ಅಕ್ಕಪಕ್ಕದ ಹಾಗೂ ಮೂಗಿನ ಮೇಲಿನ ಭಾಗವನ್ನು ನಯವಾಗಿ ಒರೆಸಿಕೊಳ್ಳಿ. ಇದರಿಂದ ತೆರೆದಿದ್ದ ಸೂಕ್ಷ್ಮರಂಧ್ರಗಳು ಮತ್ತೆ ಮುಚ್ಚಿಕೊಂಡು ಇದರಲ್ಲಿ ಮತ್ತೆ ಕೊಳೆ ತುಂಬಿಕೊಳ್ಳದಂತೆ ತಡೆಯುತ್ತದೆ.
6. ಇದರ ತಕ್ಷಣ ಚರ್ಮ ಕೊಂಚ ಕೆಂಪಗಾದಂತೆ ಕಂಡುಬರುತ್ತದೆ, ಆದರೆ ಚಿಂತೆಗೆ ಕಾರಣವಿಲ್ಲ. ಈ ಭಾಗದಲ್ಲಿ ಕೊಳೆ ನಿವಾರಣೆಯಾದ ಬಳಿಕ ಖಾಲಿಯಾಗಿದ್ದ ಜಾಗವನ್ನು ತುಂಬಿಕೊಳ್ಳಲು ರಕ್ತಸಂಚಾರ ಹೆಚ್ಚಿರುವ ಕಾರಣ ಕೊಂಚ ಕೆಂಪಗಾಗಿರುವುದು ಸಹಜ. ಆದರೆ ಕೊಂಚಹೊತ್ತಿನಲ್ಲಿಯೇ ಇದು ಸಾಮಾನ್ಯ ಸ್ಥಿತಿಗೆ ಬರುತ್ತದೆ
7. ಈ ಸೌಂದರ್ಯ ಸಲಹೆ ತಮಗೆ ಉಪಯುಕ್ತವಾಗಿರಬಹುದು ಎಂದು ಭಾವಿಸುತ್ತೇವೆ. ಇಂತಹ ಇನ್ನೂ ಅನೇಕ ಸಲಹೆಗಳಿಗಾಗಿ ಈ ಪುಟಕ್ಕೆ ಆಗಾಗ ಭೇಟಿ ನೀಡುತ್ತಾ ಇರಿ.
Comments are closed.