ಮಂಗಳೂರು,ಆ.06 : ನಗರದ ಬೆಂದೂರ್ ವೆಲ್ ನಲ್ಲಿ ಅಕ್ರಮವಾಗಿ ವೀಡಿಯೋ ಗೇಮ್ ಹೆಸರಿನಲ್ಲಿ ಜೂಜಾಟ ಆಡುತ್ತಿದ್ದ ಒಟ್ಟು 8 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತಲಪಾಡಿಯ ಪ್ರದೀಪ್ ಕುಮಾರ್ (21), ಮೂಡಬಿದ್ರಿಯ ದಿನೇಶ್ ಸಾಲ್ಯಾನ್ (31), ಮೂಡುಶೆಡ್ಡೆಯ ನಾರಾಯಣ ಶೆಟ್ಟಿ (49) ಅಲಂಗಾರಿನ ಗಣೇಶ್ ಪರವ, ಪ್ರಾಯ(23), ಅಂಬ್ಲಮೊಗರಿನ ವೀರೇಂದ್ರ ಕೆ, (36), ಕೋಟೆಕಾರಿನ ಹರ್ಷ ಡಿ ಸೋಜಾ, (31), ಕುಲಶೇಖರದ ಸಚಿನ್ ರಾವ್, (25) ಹಾಗೂ ಬಂಟ್ವಾಳದ ರತ್ನಾಕರ ಡಿ ಸಾಲ್ಯಾನ್, (40) ಬಂಧಿತ ಆರೋಪಿಗಳು.
ಶುಕ್ರವಾರ ಸಂಜೆ ನಗರದ ಬೆಂದೂರ್ ವೆಲ್ ನ ಭೂಮಿಕಾ ಟವರ್ಸ್ ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ವೀಡಿಯೋ ಗೇಮ್ ಆಟವಾಡುತ್ತಿದ್ದ ಸ್ಥಳಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಈ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ನಗದು ರೂ. 54,900/- ಹಾಗೂ ವೀಡಿಯೋ ಗೇಮ್ ಮೆಶಿನ್-2 ಒಟ್ಟು 1,12,900/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪತ್ತೆಕಾರ್ಯದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Comments are closed.