ಕರಾವಳಿ

ಬೆಂಗಳೂರಿನ ಕುಡುಕರು ತುಂಬಾ ಡಿಸೆಂಟ್..ಅವರು ಅಲ್ಲಲ್ಲಿ ಬೀಳಲ್ಲ:ಸಚಿವ ಮೇಟಿ ವಿವಾದಾತ್ಮ ಹೇಳಿಕೆ

Pinterest LinkedIn Tumblr

Exicize-Minister_Byte

ಬೆಂಗಳೂರು : ಬೆಂಗಳೂರಿನ ಕುಡುಕರು ತುಂಬಾ ಡಿಸೆಂಟ್… ಅವರು ಅಲ್ಲಲ್ಲಿ ಬೀಳಲ್ಲ ಮತ್ತು ಅವರು ಗಲಾಟೆ ಮಾಡಿ ಯಾರಿಗೂ ತೊಂದರೆ ಕೊಡಲ್ಲ.. ಇದು ನಾನು ಹೇಳುತ್ತಿಲ್ಲ. ನಮ್ಮ ರಾಜ್ಯದ ಕುಡುಕರನ್ನು ಎರಡು ವರ್ಗಗಳಾಗಿ ವಿಂಗಡಿಸಿರುವ ಅಬಕಾರಿ ಸಚಿವ ಎಚ್ ವೈ ಮೇಟಿ ಅವರು ನೀಡಿರುವ ವಿವಾದಾತ್ಮ ಹೇಳಿಕೆ ಇದು.

ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮಧ್ಯ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬೆಂಗಳೂರಿನ ಜನ ಒತ್ತಡದಲ್ಲಿರುತ್ತಾರೆ. ಹಾಗಾಗಿ ಬೆಂಗಳೂರಿನಲ್ಲಿ ರಾತ್ರಿ ಒಂದು ಗಂಟೆಯವರೆಗೂ ಮಧ್ಯದ ಅಂಗಡಿ ಓಪನ್ ಮಾಡಲು ಅನುಮತಿ ನೀಡಲಾಗಿದೆ. ‘ಹಳ್ಳಿ ಜನ ಕುಡಿದು ಅಲ್ಲಿಲ್ಲಿ ಬೀಳ್ತಾರೆ ಆದ್ರೆ ಪೇಟೆ(ಬೆಂಗಳೂರಿನ) ಕುಡುಕರು ಹಾಗೆಲ್ಲ ಬೀಳಲ್ಲ’ ಅಲ್ಲದೆ ಅವರು ಸುಶಿಕ್ಷಿತರಾಗಿದ್ದು ತುಂಬಾ ಡಿಸೆಂಟ್ ಮತ್ತು ಅವರು ಗಲಾಟೆ ಮಾಡಿ ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ಎರಡನೇ ವರ್ಗಕ್ಕೆ ಸೇರಿದ ಹಳ್ಳಿಯ ಕುಡಿಕರು ಕುಡಿದು, ಹಾದಿ ಬೀದಿಯಲ್ಲಿ ಬೀಳುತ್ತಾರೆ.ನೀವೇ ‘ನೋಡಿ, ಹಳ್ಳಿ ಯಲ್ಲಿ ಜನರು ಕುಡಿದು ಅಲ್ಲಲ್ಲಿ ಬೀಳ್ತಾರೆ ಆದ್ರೆ ಪೇಟೆಯಲ್ಲಿ ಬೀಳುವುದಿಲ್ಲ’ ಎಂದು ಹೇಳಿದರು.

ಬೆಂಗಳೂರಿನಲ್ಲಿ ರಾತ್ರಿ 1 ಗಂಟೆಯವರೆಗೆ ಬಾರುಗಳು ತೆರೆದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಈ ಹೇಳಿಕೆಯನ್ನು ಅವರು ನೀಡಿದ್ದಾರೆ.

ಇದೇ ವೇಳೆ ರಾಜ್ಯದ ಇತರೆ ಜಿಲ್ಲೆಯಲ್ಲಿ ರಾತ್ರಿ ಒಂದು ಗಂಟೆವರೆಗೂ ಮಧ್ಯದ ಅಂಗಡಿ ಓಪನ್ ಮಾಡಲು ಅವಕಾಶ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಹೊಸ ಬಾರ್ ಲೈಸನ್ಸ್ ನೀಡುವ ಹಾಗೂ ಪಾನ ನಿಷೇಧ ಜಾರಿ ಮಾಡುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.

ಮದ್ಯದ ಅಂಗಡಿಯಲ್ಲಿ ಎಂ ಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಧ್ಯ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುವುದನ್ನು ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಮದ್ಯದ ಅಂಗಡಿಯಲ್ಲಿ ದರ ಪಟ್ಟಿ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಹೇಳಿದರು.್

ಅಬಕಾರಿ ಅಧಿಕಾರಿಗಳಿಗೆ ಯಾವುದೇ ಟಾರ್ಗೆಟ್ ನೀಡುವ ಪ್ರಶ್ನೆಯೇ ಇಲ್ಲ. ಅಂದಾಜು ಲೆಕ್ಕಚಾರದ ಆಧಾರದ ಮೇಲೆ ಅವರಿಗೆ ಟಾರ್ಗೆಟ್ ನೀಡಲಾಗುತ್ತದೆ ಎಂದು ಎಚ್.ವೈ.ಮೇಟಿ ತಿಳಿಸಿದರು.

Comments are closed.