ಬೆಳ್ತಂಗಡಿ: ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಬೆಂಗಳೂರು ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ.
ಬೆಂಗಳೂರಿನ ಸುಬ್ರಹ್ಮಣ್ಯಪುರದ ಅರೆಹಳ್ಳಿ ಎಜಿಎಸ್ ಬಡಾವಣೆ ನಿವಾಸಿ ಹರೀಶ್ ಎಸ್. ಎಂಬುವರ ಪತ್ನಿ ಅನಿತಾ ಆರ್. (24) ಎಂಬವರು ನಾಪತ್ತೆಯಾಗಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ.
ನೂತನವಾಗಿ ಮದುವೆಯಾದ ಬಳಿಕ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ದಂಪತಿ ಬಂದಿದ್ದರು. ಹೀಗೆ ಧರ್ಮಸ್ಥಳಕ್ಕೆ ಗುರುವಾರ ಬಂದ ದಂಪತಿ ದೇವರ ದರ್ಶನವನ್ನೂ ಮಾಡಿದ್ದರು. ಅದಾದ ಬಳಿಕ ಶೌಚಾಲಯಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದ ಅನಿತಾ ಬಳಿಕ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಹರೀಶ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬಳಿಕ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಯಾವುದೋ ಆಲ್ಟೋ ಕಾರಿನಲ್ಲಿ ತೆರಳಿರುವುದು ತಿಳಿದುಬಂದಿದ್ದು, ಪೊಲೀಸರು ಮಹಿಳೆಗಾಗಿ ಶೋಧ ನಡೆಸಿದ್ದಾರೆ.
Comments are closed.