ನವದೆಹಲಿ: ರಿಯೋಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಿಗೆ ಶುಭ ಕೋರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರನ್ ಫಾರ್ ರಿಯೋಭಾರತದ ಅಥ್ಲೀಟ್ಗಳನ್ನು ಹುರಿದುಂಬಿಸುವ ಕಾರ್ಯಕ್ರಮ ಎಂದು ಹೇಳಿದರು. ಇಂದು ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ 22 ನೇ ಆವೃತ್ತಿಯಲ್ಲಿ ಅವರು ಭಾಷಣ ಮಾಡಿದರು.
ಮಳೆಯಾದಾಗ ಸಂತಸವಾಗುತ್ತದೆ, ಅದರಿಂದ ಉದ್ಭವಿಸುವ ರೋಗ ರುಜಿನಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯಂದು ಜನರ ಜೊತೆ ಸಂಭಾಷಣೆ ನಡೆಸುವ, ಅದಕ್ಕಾಗಿ ನನಗೆ ನಿಮ್ಮ ಸಲಹೆ ಸೂಚನೆಗಳು ಬೇಕು, ಹೀಗಾಗಿ ಸಲಹೆ ನೀಡುವವರು ವಾಟ್ಸಾಪ್ ನಲ್ಲಿ ಸಂದೇಶ ನೀಡಬೇಕೆಂದು ಅವರು ಹೇಳಿದ್ದಾರೆ.
ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಅದನ್ನು ತಿಳಿಯಲು ಸಂಶೋನೆ ಮತ್ತು ಪ್ರಯೋಗ ಅಗತ್ಯ. ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರು ಹೇಳಿದ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಭವಿಷ್ಯದಲ್ಲಿ ಮುಖ್ಯಪಾತ್ರ ವಹಿಸಲಿದೆ ಎಂಬ ಮಾತನ್ನು ಅಳವಡಿಸಿಕೊಳ್ಳಬೇಕು ಎಂದರು
ಎಐಎಮ್ (ಅಟಲ್ ಇನೋವೇಷನ್ ಮಿಷನ್) ಅಟಲ್ಜಿಯವರ ಕನಸಾಗಿತ್ತು. ಅದನ್ನು ನನಸು ಮಾಡುವತ್ತ ಹೆಜ್ಜೆ ಹಾಕೋಣ. ಉದ್ಯಮಶೀಲತೆ, ಪ್ರಯೋಗ ಹಾಗೂ ನೈಪುಣ್ಯತೆ ಪ್ರೋತ್ಸಾಹಿಸಲು ಕರೆ.
ಕೆಲ ತಿಂಗಳ ಹಿಂದೆ ಬರದ ಛಾಯೆ ಎದುರಿಸುತ್ತಿದ್ದ ನಮಗೆ ಇಂದು ನೆರೆ ಹಾವಳಿ ಎದುರಾಗಿದೆ. ನೆರೆಹಾವಳಿಯಿಂದ ಉಂಟಾಗಬಹುದಾದ ರೋಗಗಳಿಂದ ರಕ್ಷಣೆಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ವೈದ್ಯರ ಭೇಟಿ ಮಾಡದೆ ಔಷಧಗಳ ಸೇವನೆ ಮಾಡದಿರಿ, ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಗರ್ಭಿಣಿಯರ ಆರೋಗ್ಯಕ್ಕೆ ಕಾಳಜಿ ವಹಿಸಲಾಗುವುದು. ಹಿಂದೆ ನಡೆದ ಗರ್ಭಿಣಿಯರ ಸಾವುಗಳು ಮರುಕಳಿಸದಂತೆ ನಿಗಾ ವಹಿಸಲಾಗುವುದು. ದಕ್ಷಿಣ ಆಫ್ರಿಕಾ ಪ್ರವಾಸ ತೀರ್ಥಯಾತ್ರೆಯಂತಿತ್ತು. ಅಲ್ಲಿ ಜೀವನಕ್ಕಾಗಿ ಹೋರಾಡುವ ಜನರನ್ನು ಕಂಡಿದ್ದೇನೆ ಎಂದರು.
ದಕ್ಷಿಣ ಆಫ್ರಿಕಾ ಪ್ರವಾಸ ನನಗೆ ತೀರ್ಥಯಾತ್ರೆಯಂತಿತ್ತು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ನವದೆಹಲಿ : ಕೆಲ ರಾಜತಾಂತ್ರಿಕ ವಿಷಯಗಳಿಗಾಗಿ ಇತ್ತೀಚೆಗೆ ನನಗೆ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡುವ ಅವಕಾಶ ದೊರೆತಿತ್ತು. ಆದರೆ, ಆ ಭೇಟಿ ನನ್ನ ಪಾಲಿಗೆ ತೀರ್ಥಯಾತ್ರೆಯಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ 22ನೆ ಬಾರಿಗೆ ಅವರು ನಡೆಸಿದ ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ಅವರು ಪಾಲ್ಗೊಂಡು ದೇಶದ ಜನತೆಯೊಂದಿಗೆ ಸಂವಾದ ನಡೆಸಿದರು.ಕಳೆದ ಬಾರಿ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡಿದ್ದ ಮೋದಿ ಈ ಬಾರಿ ತಮ್ಮ ದಕ್ಷಿಣ ಆಫ್ರಿಕಾ ಭೇಟಿ, ಆ ಭೇಟಿಯಿಂದ ಅವರಿಗಾದ ಅನುಭವ ಹಂಚಿಕೊಂಡರು.
ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರೂ ಇಬ್ಬರು ವ್ಯಕ್ತಿಗಳನ್ನು ಸ್ಮರಿಸಲೇಬೇಕು. ಅವರು ಮಹಾತ್ಮಗಾಂಧಿ ಮತ್ತು ನೆಲ್ಸನ್ ಮಂಡೇಲಾ ಈ ಇಬ್ಬರೂ ಮಹಾನುಭಾವರೂ ಜನ ಕಲ್ಯಾಣಕ್ಕಾಗಿ ಹೋರಾಡಿದವರು.
ನಾನು ಈ ದಕ್ಷಿಣ ಆಫ್ರಿಕಾ ಭೇಟಿಯ ವೇಳೆ ಅಲ್ಲಿ ನನಗೆ ಅತ್ಯಂತ ಹೃದಯವಂತ ವ್ಯಕ್ತಿಗಳೇ ಸಿಕ್ಕಿದ್ದರು. ಹಾಗಾಗಿಯೇ ನನಗೆ ಆ ಭೇಟಿ ತೀರ್ಥಯಾತ್ರೆಯಾಗಿ ಪರಿವರ್ತಿತವಾಗಿತ್ತು. ಏಕೆಂದರೆ, ಅವರೆಲ್ಲರೂ ಸಮಾನತೆಗಾಗಿ ಹೋರಾಟ ನಡೆಸಿದವರೇ ಆಗಿದ್ದಾರೆ ಎಂದರು.
ಎಲ್ಲದಕ್ಕೂ ಮೂಲ ಕಾರಣ ಅಭಿವೃದ್ಧಿಯೊಂದೇ. ಸರ್ವ ವಿಧದಲ್ಲಿಯೂ ದೇಶದ ಅಭಿವೃದ್ಧಿ ಸಾಧಿಸಬೇಕು ಎಂದರು. ಪುಣೆಯ ಜುನ್ನಾರ್ ಜಿಲ್ಲೆಯ ಸೋನಾಲ್ ಎಂಬುವರ ಬಗ್ಗೆ ಪ್ರಸ್ತಾಪಿಸಿದ ಮೋದಿ, ಅವರು ತಮ್ಮ ವಿವಾಹದ ವೇಳೆ ಎಲ್ಲ ಆಹ್ವಾನಿತರಿಗೂ ಮಾವಿನ ಸಸಿ ವಿತರಿಸಿದ್ದರು ಎಂದರು.
ಗಿಡ-ಮರಗಳನ್ನು ನೆಡುವ ಬಗ್ಗೆ ನಾವೊಂದು ಆಂದೋಲನ ನಡೆಸಬೇಕಾಗಿದೆ. ಮಳೆ ಚೆನ್ನಾಗಿ ಆಗುತ್ತದೆ. ಮಳೆಯ ಜತೆಗೇ ಕೆಲವು ರೋಗಗಳೂ ಬರುತ್ತವೆ. ಈ ರೋಗ ತಡೆಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕಾಯಿಲೆ ಬಂದ ಮೇಲೆ ಔಷಧ ಸೇವಿಸುವುದಕ್ಕಿಂತ ಅದು ಬರದಂತೆ ತಡೆಯುವುದು ಮುಖ್ಯ. ಅವಧಿ ಮೀರಿದ ಔಷಧ ಸೇವಿಸುವುದು, ವೈದ್ಯರ ಸಲಹೆಯಿಲ್ಲದೆ ಆಯಂಟಿ ಬಯೋಟಿಕ್ ಔಷಧ ಸೇವನೆ ಬಿಡಬೇಕು ಎಂದು ಸಲಹೆ ನೀಡಿದರು.
ಗರ್ಭಿಣಿಯರು, ಬಾಣಂತಿ ಸಾವು, ಶಿಶು ಮರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಈ ಪ್ರಮಾಣ ಈಗ ಸ್ವಲ್ಪ ಕಡಿಮೆಯಾಗಿದೆ. ಆದರೆ, ಸಂಪೂರ್ಣ ತಡೆಯಲು ಸಾಧ್ಯವಾಗಿಲ್ಲ. ಈ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಪ್ರಧಾನ್‍ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿಎಂಎಸ್‍ಎಂಎ) ಆರಂಭಿಸಿದೆ ಎಂದು ಮೋದಿ ಹೇಳಿದರು.
Comments are closed.