ಕರಾವಳಿ

ಉಪ್ಪುಂದ ಅಪಘಾತ; ಮೃತ ವಿದ್ಯಾರ್ಥಿಗೆ ಸರಕಾರ 15 ಲಕ್ಷ ಪರಿಹಾರ ಕೊಡಬೇಕೆಂದು ಕೆ.ವಿ.ಪಿ. ಆಗ್ರಹ

Pinterest LinkedIn Tumblr

ಕುಂದಾಪುರ: ಸರಕಾರಿ ಬಸ್ ಚಾಲಕ ಅಚಾತುರ್ಯದಿಂದ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ರಾಘವೇಂದ್ರ ಶೆಟ್ಟಿ ಕುಟುಂಬಕ್ಕೆ ಸರಕಾರ 15 ಲಕ್ಷ ಪರಿಹಾರ ಘೋಷಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಜು.30ರಂದು ಕರ್ನಾಟಕ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಕುಂದಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೌನ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Kndpr_KVT_Protest (1) Kndpr_KVT_Protest (2) Kndpr_KVT_Protest (3) Kndpr_KVT_Protest (4) Kndpr_KVT_Protest (5) Kndpr_KVT_Protest (6) Kndpr_KVT_Protest (7) Kndpr_KVT_Protest (8)

ಭಟ್ಕಳದಿಂದ ಕುಂದಾಪುರ ಮಾರ್ಗವಾಗಿ ಸರಕಾರಿ ಬಸ್‌ನಲ್ಲಿ ಪಯಣಿಸಲು ಪಾಸ್ ಪಡೆದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಸರಕಾರಿ ಬಸ್ ಚಾಲಕ ಮತ್ತು ನಿರ್ವಹಕರ ಮೇಲೆ ಕ್ರಮ ಜರುಗಿಸಬೇಕು. ಕುಂದಾಪುರದಿಂದ ಭಟ್ಕಳಕ್ಕೆ ಪ್ರತಿದಿನ ೫೦೦ಕ್ಕೂ ವಿದ್ಯಾರ್ಥಿಗಳು ಪಯಣಿಸುತ್ತಿದ್ದು, ಬಸ್ ಕೊರತೆಯಿಂದ ಈ ಸಮಸ್ಯೆ ಉದ್ಭವಿಸಿದ್ದು, ಹೊಸ ಬಸ್‌ಗಳ ಮಂಜೂರಾತಿ ಮಾಡಬೇಕು, ಉಡುಪಿ ಜಿಲ್ಲೆಯಾದ್ಯಂತ ಖಾಸಗಿ ಬಸ್‌ಗಳ ಮಾಫಿಯಾ ಇದ್ದು, ಎಲ್ಲಾ ಭಾಗಗಳಿಗೂ ಸರ್ಕಾರಿ ಬಸ್ ಸೇವೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಂಚಾಲಕ ಪ್ರಥ್ವಿರಾಜ್, ತಾಲೂಕು ಸಂಚಾಲಕ ಗಿರೀಶ್ ಜಿ.ಕೆ, ಸದಸ್ಯರಾದ ದೀಪಕ್ ನಾವುಂದ, ಪ್ರಸನ್ನ, ಕೌಶಿಕ್, ಮೊಹಿದ್ದಿನ್ ಆಶ್ರಫ್ ಉಪಸ್ಥಿತರಿದ್ದರು.

Comments are closed.