ಕರಾವಳಿ

ಇವಳಿಗೆ ಇಚ್ಚಾಧಾರಿ ಹಾವಿನೊಂದಿಗೆ ಮದುವೆ ಆಗಿದೆಯಂತೆ… ನಂಬುವುದು ಬಿಡುವುದು ನಿಮ್ಮಿಷ್ಟ..

Pinterest LinkedIn Tumblr

Snek_Marriege_women

__ಅತೀ ಹೆಚ್ಚು ಸಿನಿಮಾ ನೋಡುವ ಹುಚ್ಚು ಇರುವ ಕೆಲವರಿಗೆ ಸಿನಿಮಾದಲ್ಲಿ ಇದ್ದ ರೀತಿಯಲ್ಲಿ ಜೀವನವನ್ನು ಕೂಡ ರೂಪಿಸಬೇಕೆಂಬ ಕಲ್ಪನೆಗಳು ಮೂಡುವುದು ಸಹಜ. ಸಿನಿಮಾದ ಯಾವೂದಾದರೂ ಒಂದು ದೃಷ್ಯ ಮನಸ್ಸಿಗೆ ನಾಟಿದರೆ ನಾವು ಅದೇ ರೀತಿ ಆಗಬೇಕೆಂಬ ಕನಸು ಕಾಣುತ್ತಾರೆ. ಹೆಚ್ಚು ಕಡಿಮೆ ಈ ಯುವತಿ ಕೂಡ ಅದೇ ರೀತಿಯ ಭ್ರಮೆಯಲ್ಲಿ ಬದುಕುತ್ತಿದ್ದಾಳೋ ಎಂಬ ಪ್ರಶ್ನೆ ಇಲ್ಲಿ ಕಾಣುತ್ತಿದೆ.

ಕನ್ನಡದಲ್ಲಿ ಬಿಡುಗಡೆಯಾದ ಪ್ರಕಾಶ್ ರೈ ಅಭಿನಯದ ‘ನಾಗಮಂಡಲ’ ಚಿತ್ರ ನಿಮಗೆ ನೆನಪಿರಬಹುದು. ಈ ಕಥೆಯನ್ನೇ ಹೋಲುವ ರೀತಿಯಲ್ಲಿ ಇಲ್ಲೊಬ್ಬ ಹುಡುಗಿ ತನ್ನ ಜೀವನವನ್ನು ರೂಪಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾಳೆ. ಈ ಪ್ರಕರಣ ನಡೆದಿರುವುದು ಪ್ರಕರಣವೊಂದು ಛತ್ತೀಸ್ ಘಡದಲ್ಲಿ

ಉತ್ತರ ಛತ್ತೀಸ್ ಘಡದ ಸೂರಜ್ ಪುರ ಜಿಲ್ಲೆಯ ಕಾಸ್ಕೆಲಾ ಗ್ರಾಮದ ಯುವತಿಯೊಬ್ಬಳು, ಇಚ್ಚಾಧಾರಿ ಹಾವಿನೊಂದಿಗೆ ತನ್ನ ಮದುವೆಯಾಗಿದೆ ಎಂದು ಹೇಳುತ್ತಿದ್ದಾಳಲ್ಲದೇ ಇದಕ್ಕೆ ಸಾಕ್ಷಿಯಾಗಿ ತನ್ನ ಹಣೆಗೆ ಸಿಂಧೂರವಿಟ್ಟಿರುವುದಾಗಿ ತಿಳಿಸಿದ್ದಾಳೆ.

ಮನುಷ್ಯ ರೂಪಿಯಾಗಿ ಬಂದಿದ್ದ ನಾಗ, ತನ್ನನ್ನು ನಾಗಲೋಕಕ್ಕೆ ಕರೆದುಕೊಂಡು ಹೋಗಿ ಅಲ್ಲಿ ವಿವಾಹವಾಗಿರುವುದಾಗಿ ಹೇಳುತ್ತಿದ್ದು, ಇದನ್ನು ಪೋಷಕರೂ ನಂಬಿದ್ದಾರೆ. ಆದರೆ ವೈದ್ಯರು ಮಾತ್ರ ಆಕೆ ಖಿನ್ನತೆಯಿಂದ ಬಳಲುತ್ತಿದ್ದು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇಂಥ ಒಂದು ಘಟನೆ ನಡೆಯಲು ಸಾಧ್ಯವಿದೆಯೋ… ಅಥವಾ ಇದು ಈಕೆಗಿರುವ ಸಿನಿಮಾ ಹೊಚ್ಚೋ ಅಥವಾ ಈಕೆ ನಿಜವಾಗಲೂ ಖಿನ್ನತೆಯಿಂದ ಬಳಲುತ್ತಿದ್ದಾಳೋ ಎಂಬ ಬಗ್ಗೆ ಸರಿಯಾದ ಮಾಹಿತಿ ವೈದ್ಯಕೀಯ ಲೋಕದಿಂದಲೇ ತಿಳಿದು ಬರಬೇಕಿದೆ.

Comments are closed.